ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಜುಲೈ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹಳೆ ಶಿವಮೊಗ್ಗ ಭಾಗ ಮತ್ತೆ ಜಲಾವೃತವಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿಯಿಂದ ನೀರು ಬಡಾವಣೆಗಳಿಗೆ ನುಗ್ಗಿದೆ. ರಸ್ತೆಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದೆ.
ಎಲ್ಲೆಲ್ಲಿ ನೀರು ನುಗ್ಗಿದೆ?
ತುಂಗಾ ನದಿ ತೀರದಲ್ಲಿರುವ ಕುಂಬಾರ ಬೀದಿ, ಸೀಗೆಹಟ್ಟಿ, ಕೆ.ಆರ್.ಪುರಂ ರಸ್ತೆಯ ಸ್ವಲ್ಪ ಭಾಗ, ವಿದ್ಯಾನಗರ, ಜಗದಂಬ ಬೀದಿ, ಕಂಟ್ರಿ ಕ್ಲಬ್, ರಾಜೀವ್ ಗಾಂಧಿ ಬಡಾವಣೆ, ಆರ್.ಟಿ.ಲೇಔಟ್, ಚಿಕ್ಕಲ್‍ನ ಶಾಂತಮ್ಮ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ನೀರು ನುಗ್ಗಿದೆ.
ನಿವಾಸಿಗಳಲ್ಲಿ ಢವಢವ
ನೀರು ನುಗ್ಗುವ ಆತಂಕದಲ್ಲೇ ಜನರು ದಿನ ದೂಡುವಂತಾಗಿದೆ. ಕೆಲವು ಕಡೆ ರಸ್ತೆ ಮೇಲೆ ನೀರು ನಿಂತಿದೆ. ಇನ್ನೂ ಕೆಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿರುವ ವಸ್ತುಗಳನ್ನ ಕಾಪಾಡಿಕೊಳ್ಳುವುದೆ ಜನರಿಗೆ ಸಾಹಸಮಯವಾಗಿದೆ. ನೀರು ಬರುತ್ತಿದ್ದಂತೆ ಕೆಲವರು ಬೆಲೆಬಾಳುವ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಜನರು ಬೇರೆ ಶಿಫ್ಟ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ | ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ ಮೂರೂವರೆ ಅಡಿ ಹೆಚ್ಚಳ, ತುಂಗಾ ಜಲಾಶಯದ ಹೊರಹರಿವು ಎಷ್ಟಿದೆ ಗೊತ್ತಾ?
ನೀರು ನುಗ್ಗಲು ಕಾರಣವೇನು?
ತುಂಗಾ ಜಲಾಶಯದಿಂದ 80 ಸಾವಿರ ಕ್ಯೂಸೆಕ್‍ಗಿಂತಲೂ ಅಧಿಕ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.
ತಡೆಗೋಡೆ ನಿರ್ಮಿಸಲಾಗಿದ್ದರೂ ರಾಜಾಕಾಲುವೆ, ಚರಂಡಿಗಳ ಮೂಲಕ ನೀರು ನೇರವಾಗಿ ಹಳೆ ಶಿವಮೊಗ್ಗ ಭಾಗದೊಳಗೆ ನುಗ್ಗುತ್ತಿದೆ.
ಕುಂಬಾರ ಬೀದಿ, ಬಿ.ಬಿ.ಸ್ಟ್ರೀಟ್, ಸೀಗೆಹಟ್ಟಿ ಸೇರಿದಂತೆ ಈ ಭಾಗದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದೆ ಬಿಟ್ಟಿದ್ದರಿಂದ ಹೂಳು ತುಂಬಿಕೊಂಡಿದೆ ಎಂಬ ಆರೋಪವಿದೆ.
ಇದೆ ಕಾರಣಕ್ಕೆ 2019ರಲ್ಲಿ ಈ ಭಾಗಕ್ಕೆ ನೀರು ನುಗ್ಗಿತ್ತು. ಆ ಸಂದರ್ಭ ಆಸ್ತಿಪಾಸ್ತಿ ಹಾನಿಯಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದರು. ಇದರಿಂದ ಸುಧಾರಿಸಿಕೊಳ್ಳುವ ಹೊತ್ತಿಗೆ ಮತ್ತೊಮ್ಮೆ ಈ ಭಾಗ ಜಲಾವೃತವಾಗುವ ಆತಂಕ ಎದುರಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200