SHIVAMOGGA LIVE | 31 MAY 2023
SHIMOGA : ಇಂಗ್ಲೆಂಡ್ ದೇಶದಲ್ಲಿ ಡಾಕ್ಟರ್ (Doctor) ಎಂದು ನಂಬಿಸಿ ಫೇಸ್‌ಬುಕ್‌ನಲ್ಲಿ ಮಹಿಳೆಯೊಬ್ಬರ ಜೊತೆಗೆ ಚಾಟಿಂಗ್ ಮಾಡಿ, ಲಕ್ಷಾಂತರ ರೂ. ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಏನಿದು ಪ್ರಕರಣ?
ಶಿವಮೊಗ್ಗದ ಮಹಿಳೆಯೊಬ್ಬರ (ಹೆಸರು ಗೌಪ್ಯ) ಫೇಸ್‌ಬುಕ್‌ಗೆ ವ್ಯಕ್ತಿಯೊಬ್ಬನ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ರಿಕ್ವೆಸ್ಟ್ ಅಕ್ಸಪ್ಟ್ ಮಾಡಿ ಸ್ವಲ್ಪ ದಿನ ಆ ವ್ಯಕ್ತಿ ಜೊತೆ ಮಹಿಳೆ ಚಾಟಿಂಗ್ ನಡೆಸಿದ್ದರು. ತಾನೊಬ್ಬ ವೈದ್ಯ (Doctor). ಇಂಗ್ಲೆಂಡ್ ದೇಶದಲ್ಲಿ ವಾಸ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ. ಮೇ 14ರಂದು ಚಾಟಿಂಗ್ ವೇಳೆ, ಬೆಲೆಬಾಳುವ ಬಂಗಾರದ ಉಡುಗೊರೆ ಕಳುಹಿಸುವುದಾಗಿ ಆತ ತಿಳಿಸಿದ್ದ.
ಇದನ್ನೂ ಓದಿ – ಜನ ಶತಾಬ್ದಿ ರೈಲು 3 ಗಂಟೆ ಲೇಟ್, ರಾತ್ರಿ ಬದಲು ಮಧ್ಯರಾತ್ರಿ ಶಿವಮೊಗ್ಗ ತಲುಪಿದ ಟ್ರೈನ್, ಪ್ರಯಾಣಿಕರು ಹೈರಾಣು
ಏರ್‌ಪೋರ್ಟ್‌ನಿಂದ ಫೋನ್..!
ಮೇ 16ರಂದು ಮಹಿಳೆಯ ಮೊಬೈಲ್ ನಂಬರ್‌ಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ, ತಾನು ಏರ್‌ಪೋರ್ಟ್ ಅಧಿಕಾರಿ ಎಂದು ತಿಳಿಸಿದ್ದ. ನಿಮಗೆ ಕೊರಿಯರ್ ಬಂದಿದ್ದು ಅದಕ್ಕೆ ಚಾರ್ಜಸ್ ತಗುಲಲಿದೆ ಎಂದು ತಿಳಿಸಿದ್ದ. ಇದನ್ನು ನಂಬಿದ ಮಹಿಳೆ ಮೇ 16 ರಿಂದ 20ರವರೆಗೆ ವಿವಿಧ ಹಂತದಲ್ಲಿ ಹಣ ವರ್ಗಾಯಿಸಿದ್ದರು. ಒಟು 6.50 ಲಕ್ಷ ರೂ. ಹಣ ವರ್ಗಾಯಿಸಿದ್ದಾರೆ. ಆ ಬಳಿಕ ವೈದ್ಯ ಮತ್ತು ಏರ್‌ಪೋರ್ಟ್ ಅಧಿಕಾರಿ ಸೋಗಿನಲ್ಲಿ ಚಾಟಿಂಗ್ ಮತ್ತು ಫೋನ್ ಮೂಲಕ ಮಾತನಾಡಿದವರು ಸಂಪರ್ಕಕ್ಕೆ ಸಿಗಲಿಲ್ಲ.
ವಂಚನೆಗೊಳಗಾಗಿರುವುದು ಗೊತ್ತಾಗುತ್ತಿದ್ದಂತೆ ಮಹಿಳೆ ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





