ಉಪನ್ಯಾಸಕಿಯ ವಾಟ್ಸಪ್‌ಗೆ ಅಪರಿಚಿತ ನಂಬರ್‌ನಿಂದ ಮೆಸೇಜ್‌, ಒಂದು ವಾರದ ಬಳಿಕ ಕಾದಿತ್ತು ಬಿಗ್‌ ಶಾಕ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 5 FEBRUARY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಯುಟ್ಯೂಬ್‌, ಗೂಗಲ್‌ ಮ್ಯಾಪ್‌ನಲ್ಲಿ ರೆಸ್ಟೋರೆಂಟ್‌ಗಳಿಗೆ ರಿವ್ಯೂ ಬರೆದು ಹಣ ಸಂಪಾದಿಸಬಹುದು. ಪ್ರತಿ ರಿವ್ಯೂಗೆ 50 ರೂ.ನಂತೆ ನಿತ್ಯ 2 ಸಾವಿರದಿಂದ 2700 ರೂ.ವರೆಗು ಪಡೆಯಬಹುದು ಎಂದು ವಾಟ್ಸಪ್‌ನಲ್ಲಿ ಬಂದ ಮೆಸೇಜ್‌ ನಂಬಿ ಉಪ್ಯಾಸಕಿಯೊಬ್ಬರು (ಹೆಸರು ಗೌಪ್ಯ) 12.69 ಲಕ್ಷ ರೂ. ಕಳೆದುಕೊಂಡಿದ್ದಾರೆ.

ರಿಸೆಪ್ಷನಿಸ್ಟ್‌ ಪ್ರಿಯಾ ತಂದ ಸಂಕಷ್ಟ

ಜ.22ರಂದು ವಾಟ್ಸಪ್‌ನಲ್ಲಿ ಬಂದ ಮೆಸೇಜ್‌ನಲ್ಲಿದ್ದ ಲಿಂಕ್‌ ಕ್ಲಿಕ್‌ ಮಾಡಿದ್ದ ಉಪನ್ಯಾಸಕಿ ಟೆಲಿಗ್ರಾಂನಲ್ಲಿ ಡೈಲಿ ಟಾಸ್ಕ್‌ ಮತ್ತು ರಿಸೆಪ್ಷನಿಸ್ಟ್‌ ಪ್ರಿಯಾ ಎಂಬ ಗ್ರೂಪ್‌ಗಳಿಗೆ ಜಾಯಿನ್‌ ಆಗಿದ್ದರು. ಅಲ್ಲಿ ಒದಗಿಸಿದ ರೆಸ್ಟೋರೆಂಟ್‌ನ ಯುಟ್ಯೂಬ್‌ ಮತ್ತು ಗೂಗಲ್‌ ಮ್ಯಾಪ್‌ ಲಿಂಕ್‌ನಲ್ಲಿ ರಿವ್ಯು ಬರೆದಿದ್ದರು. ಉಪನ್ಯಾಸಕಿಯ ಬ್ಯಾಂಕ್‌ ಖಾತೆಗೆ 100 ರೂ.ನಿಂದ 225 ರೂ.ವರೆಗೆ 17 ಬಾರಿ ಹಣ ಬಂದಿತ್ತು. ಬಳಿಕ ಸಾವಿರ ರೂ. ಹೂಡಿಕೆ ಮಾಡಿದರೆ 1300 ರೂ., 3 ಸಾವಿರ ರೂ. ಹೂಡಿಕೆಗೆ 3900 ರೂ. ನೀಡುವುದಾಗಿ ಟೆಲಿಗ್ರಾಂ ಮೂಲಕ ತಿಳಿಸಲಾಗಿತ್ತು.

ಲಕ್ಷ ಲಕ್ಷ ಹೋಗಿದ್ದು ಬರಲೇ ಇಲ್ಲ

ಉಪನ್ಯಾಸಕಿಯ ವಿಶ್ವಾಸ ಸಂಪಾದಿಸಿದ ವಂಚಕರು ದೊಡ್ಡ ಮೊತ್ತದ ಹೂಡಿಕೆ ಮಾಡಿ, ಲಾಭ ಪಡೆಯುವಂತೆ ಪುಸಲಾಯಿಸಿದ್ದರು. ಜ.25 ರಿಂದ 29ರವರೆಗೆ ವಿವಿಧ ಬ್ಯಾಂಕ್‌ ಖಾತೆ, ಯುಪಿಐ ಐಡಿಗೆ ಒಟ್ಟು 12.69 ಲಕ್ಷ ರೂ. ಹಣ ಹಾಕಿಸಿಕೊಂಡಿದ್ದರು. ಆದರೆ ಆ ಹಣವಾಗಲಿ, ಲಾಭಾಂಶವಾಗಲಿ ಉಪನ್ಯಾಸಕಿಯ ಖಾತೆಗೆ ಮರಳಲಿಲ್ಲ. ವಂಚನೆಗೊಳಗಾದ ಅರಿವಾಗುತ್ತಿದ್ದಂತೆ ಉಪನ್ಯಾಸಕಿ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

‘ಮನೆಯಲ್ಲೇ ಕಲಸ’, ಹೆಸರಲ್ಲಿ ಮೋಸ

ಮನೆಯಲ್ಲೆ ಕೆಲಸ. ನಿತ್ಯ ಸಾವಿರಾರು ರೂ. ಹಣ ಸಂಪಾದನೆ ಹೆಸರಲ್ಲಿ ವಂಚನೆ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹಲವರು ಈ ವಂಚಕರ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಪರಿಚಯವಿಲ್ಲದೆ, ಕಂಪನಿಗಳ ವಿಳಾಸ, ಅಧಿಕೃತ ಕರಾರುಗಳಿಲ್ಲದೆ ಹಣ ಹೂಡಿಕೆ ಮಾಡಿದರೆ ವಂಚನೆಗೊಳಗಾಗಬೇಕಾಗುತ್ತದೆ. ಈ ಕುರಿತು ಸೈಬರ್‌ ಕ್ರೈಮ್‌ ಪೊಲೀಸರು ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ. ಹಾಗಿದ್ದೂ ಲಾಭಾಂಶದ ಆಸೆಗೆ ಬಿದ್ದು ಜನ ಹಣ ಕಳೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ – ಮ್ಯಾಟ್ರಿಮೋನಿ ಆ್ಯಪ್‌ ಬಳಸುತ್ತಿದ್ದ ಉಪನ್ಯಾಸಕಿಗೆ ಇಂಗ್ಲೆಂಡ್‌ನಿಂದ ಗಿಫ್ಟ್‌, ಕಾದಿತ್ತು ಶಾಕ್‌, ಶಿವಮೊಗ್ಗದಲ್ಲಿ ಕೇಸ್‌

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment