ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 11 ಡಿಸೆಂಬರ್ 2018
ಸೆಲ್ಲರ್ ತೆರವು ಕಾರ್ಯಾಚರಣೆ ನಾಲ್ಕನೇ ದಿನಕ್ಕೂ ಮುಂದುವರೆದಿದೆ. ಶಿವಮೊಗ್ಗ ಸಿಟಿಯಲ್ಲಿ ಪಾರ್ಕಿಂಗ್ ಸಮಸ್ಯೆ ನೀಗಿಸುವ ಸಲುವಾಗಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪಾಲಿಕೆಯ ಉಪ ಆಯುಕ್ತೆ ಡಾ.ಸಹನಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇವತ್ತು ಬೆಳಗ್ಗೆಯಿಂದ, ಜ್ಯೂವೆಲ್ ರಾಕ್ ಹೊಟೇಲ್ ರಸ್ತೆಯಲ್ಲಿ ಆಪರೇಷನ್ ನಡೆಸಲಾಯಿತು. ಸೂರ್ಯ ಕಂಫರ್ಟ್, ಅನ್ಮೋಲ್ ಹೊಟೇಲ್, ಕುವೆಂಪು ರಸ್ತೆಯ ಕಾಂಪ್ಲೆಕ್ಸ್, ಗೋಪಾಳದ ನೂರು ಅಡಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಯಿತು. ಇನ್ನು, ಸಾಯಿ ಪ್ಯಾಲೇಸ್ ಮುಂಭಾಗ, ರಸ್ತೆಯ ಮೇಲೆ ಟೈಲ್ಸ್ ಹಾಕಲಾಗಿತ್ತು. ಇದನ್ನು ಗಮನಿಸಿದ ಉಪ ಆಯುಕ್ತೆ, ಕೂಡಲೇ ಅದನ್ನು ತೆರವು ಮಾಡಬೇಕು ಎಂದು ಸೂಚಿಸಿದರು.
ಸೆಲ್ಲರ್ ತೆರವು ಚುರುಕು
ಶಿವಮೊಗ್ಗ ನಗರದಲ್ಲಿ ವಿವಿಧ ಕಟ್ಟಡಗಳು, ಆಸ್ಪತ್ರೆಗಳು ಸೆಲ್ಲರ್ ತೆರವು ಮಾಡದೇ, ದಶಕಗಳಿಂದ ವಾಣಿಜ್ಯ ಬಳಕೆಗೆ ಮೀಸಲಿಟ್ಟಿದ್ದವು. ಪಾಲಿಕೆ ಆಪರೇಷನ್ ಆರಂಭಿಸುತ್ತಿದ್ದಂತೆ, ಕಟ್ಟಡ ಮಾಲೀಕರು ಖುದ್ದಾಗಿ ಸೆಲ್ಲರ್ ತೆರವು ಮಾಡುತ್ತಿದ್ದಾರೆ. ಕೆಲವು ಕಡೆ ಸೆಲ್ಲರ್’ಗಳನ್ನು ಬಹುತೇಕ ತೆರವು ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422