ಶಿವಮೊಗ್ಗದಲ್ಲಿ ಅಂಬಾರಿ ಮೆರವಣಿಗೆ, ಕೇಬಲ್‌ ತೆರವಿಗೆ ಸೂಚನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA NEWS, 8 OCTOBER 2024 : ಶಿವಮೊಗ್ಗ ದಸರಾ ಹಿನ್ನೆಲೆ ಅ.12ರಂದು ನಗರದಲ್ಲಿ ಜಂಬೂ ಸವಾರಿ ನಡೆಯಲಿದೆ. ಈ ಹಿನ್ನಲೆ ಅಂಬಾರಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕು ಕೇಬಲ್‌ ವಯರ್‌ಗಳನ್ನು (Cable Wire) ತೆರವು ಮಾಡುವಂತೆ ಮಹಾನಗರ ಪಾಲಿಕೆ ಕಾರ್ಯಪಾಲಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಬಾರಿ ಮೆರವಣಿಗೆಯು ಕೋಟೆ ರಸ್ತೆಯಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್, ಶಿವಪ್ಪ ನಾಯಕ ವೃತ್ತ , ಅಮೀರ್ ಅಹ್ಮದ್ ವೃತ್ತ, ಗೋಪಿ ಸರ್ಕಲ್, ಜೈಲ್ ಸರ್ಕಲ್, ಲಕ್ಷ್ಮೀ ಟಾಕೀಸ್ ಸರ್ಕಲ್, ಫ್ರೀಡಂ ಪಾರ್ಕ್ ಮಾರ್ಗದಲ್ಲಿ ದಸರಾ ಮೆರವಣಿಗೆ ನಡೆಯಲಿದೆ. ಅಂಬಾರಿ ಸಂಚರಿಸುವ ಈ ರಸ್ತೆಗಳಲ್ಲಿ ನೆಲದಿಂದ ಮೇಲೆ 20 ಅಡಿಯೊಳಗೆ ಹಾದು ಹೋಗಿರುವ ಎಲ್ಲಾ ಕೇಬಲ್, ವಯರ್, ತಂತಿಗಳನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ » ರಾತ್ರೋರಾತ್ರಿ ಶಿವಮೊಗ್ಗದಲ್ಲಿ ಆರು ಕತ್ತೆಗಳ ಕಳ್ಳತನ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 8, 2024

Leave a Comment