SHIVAMOGGA LIVE NEWS | 22 JANUARY 2024
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
SHIMOGA : ಇನ್ನು ಹತ್ತು ದಿನದಲ್ಲಿ ವಿವಿಧ ಸಮಿತಿಗಳಿಗೆ ನೇಮಕ ನಡೆಯಲಿದೆ. ಅಧಿಕಾರ ವಿಕೇಂದ್ರಿಕರಣ ಮಾಡದೆ ಇರುವುದೆ ಬಿಜೆಪಿ ಸೋಲಿಗೆ ಕಾರಣ. ಈ ತಪ್ಪನ್ನು ಕಾಂಗ್ರೆಸ್ ಮಾಡಲ್ಲ ಎಂದು ಎಐಸಿಸಿ ಉಸ್ತುವಾರಿ ಮಯೂರ್ ಜೈನ್ ತಿಳಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಯೂರ್ ಜೈನ್, ಲೋಕಸಭೆ ಚುನಾವಣೆ ಕುರಿತು ಪ್ರಮುಖ ಮಾಹಿತಿ ತಿಳಿಸಿದರು.
ಮಯೂರ್ ಜೈನ್ ಹೇಳಿದ 3 ಪ್ರಮುಖಾಂಶ
ಇನ್ನು ಹತ್ತು ದಿನದಲ್ಲಿ ವಿವಿಧ ಸಮಿತಿಗಳಿಗೆ ನೇಮಕ ನಡೆಯಲಿದೆ. ಸಮಿತಿ ನೇಮಕದಲ್ಲಿ ಎಲ್ಲ ವರ್ಗದವರಿಗೂ ಮೀಸಲು ಇರಲಿದೆ. ಜಿಲ್ಲಾ ಕಾಂಗ್ರೆಸ್‌ನಿಂದ ಹತ್ತು ದಿನದಲ್ಲಿ ಪಟ್ಟಿ ಬಿಡುಗಡೆಯಾಗಬೇಕು. ಇಲ್ಲದಿದ್ದಲ್ಲಿ ನಾನೇ ಪಟ್ಟಿ ಸಿದ್ದ ಮಾಡುತ್ತೇನೆ. ಪಕ್ಷಕ್ಕೆ ದುಡಿದವರಿಗೆ ಸ್ಥಾನ ಸಿಗಬೇಕು ಎಂಬುದು ನಮ್ಮ ಆಶಯ.

ಬಿಜೆಪಿ ನೀಡಿದ ಶೇ.90ರಷ್ಟು ಭರವಸೆಗಳನ್ನು ಈಡೇರಿಸಲಿಲ್ಲ. ಜನ ಬಿಜೆಪಿಯ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಅವರು ಭರವಸೆಯ ಆಡಳಿತ ನೀಡುತ್ತಿದ್ದಾರೆ. ಕಾಂಗ್ರೆಸ್ ನೀಡಿದ ಐದು ಭರವಸೆಗಳನ್ನು ಈಡೇರಿಸಲಾಗಿದೆ. ತಮಿಳುನಾಡಿನ ಸರಕಾರ ತನ್ನ ಗ್ಯಾರಂಟಿ ಈಡೇರಿಸಲು ಎರಡು ವರ್ಷ ಬೇಕಾಯಿತು. ಆದರೆ ಕಾಂಗ್ರೆಸ್ ರಾಜ್ಯದಲ್ಲಿ ಕೆಲವೆ ತಿಂಗಳಲ್ಲಿ ಅವುಗಳನ್ನು ಜಾರಿಗೆ ತಂದಿದೆ.

ಲೋಕಸಭೆ ಚುನಾವಣೆಗೆ ಹೆಚ್ಚಿನ ಸಮಯವಿಲ್ಲ. ಫೆಬ್ರವರಿ ಕೊನೆ ವಾರದಲ್ಲಿ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಈಗ ರಾಹುಲ್ ಗಾಂಧಿ ಭಾರತ್ ಜೋಡೊ ನ್ಯಾಯ ಯಾತ್ರೆ ಆರಂಭಿಸಿದ್ದಾರೆ. ದೇಶದ ಐಕ್ಯತೆ, ಸಮಗ್ರತೆಗೆ ಇದನ್ನು ಆರಂಭಿಸಿದ್ದಾರೆ. ರಾಹುಲ್ ಕಾಂಗ್ರೆಸ್‌ಗೆ ಬಹಳಷ್ಟು ದುಡಿದಿದ್ದಾರೆ. ಅವರನ್ನು 2024 ರಲ್ಲಿ ಪ್ರಧಾನ ಮಂತ್ರಿಯಾಗಿ ಮಾಡಬೇಕಿದೆ.
ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಸಂಸದ ಆಯನೂರು ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಪ್ರಮುಖರಾದ ಹೆಚ್.ಸಿ. ಯೋಗೀಶ್, ಗೋಣಿ ಮಾಲತೇಶ್, ನಾಗರಾಜ್ ಗೌಡ, ಶ್ರೀನಿವಾಸ್ ಕರಿಯಣ್ಣ, ಅನಿತಾ ಕುಮಾರಿ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ‘ಬಿಜೆಪಿಯಲ್ಲಿ ಮಾತ್ರ ಅವರಿಗೆ ಗುರುಬಲ, ಕಾಂಗ್ರೆಸ್‌ನಿಂದ ತಮಗೆ ಟಿಕೆಟ್ ಖಚಿತʼ
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






