ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 FEBRURARY 2023
SHIMOGA : ವಿಮಾನ ನಿಲ್ದಾಣ ಉದ್ಘಾಟನೆ (Airport Programme) ಸಮಾರಂಭಕ್ಕೆ ಆಗಮಿಸಿದ್ದ ಜನರು ಕಾರ್ಯಕ್ರಮಕ್ಕೂ ತೆರಳಲಾಗದೆ, ಹಿಂದಕ್ಕೆ ಮರಳಲಾಗದೆ ಪರದಾಡಿದರು. ಬಿರು ಬಿಸಿಲಿನಲ್ಲಿ ಪರದಾಡುತ್ತ, ನೀರು, ತಿಂಡಿಗಾಗಿ ಪರಿತಪಿಸಬೇಕಾಯಿತು.
ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಲಕ್ಷಾಂತರ ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಆದರೆ ಸಂಚಾರ ದಟ್ಟಣೆಯಿಂದಾಗಿ ಕಾರ್ಯಕ್ರಮದ (Airport Programme) ಸ್ಥಳಕ್ಕೆ ತಲುಪಲಾಗದೆ ಸಂಕಷ್ಟಕ್ಕೀಡಾದರು.
ಬಸ್ಸು, ಕಾರು, ಟಿಟಿ ವಾಹನಗಳು
ಜನರನ್ನು ಕರೆತರಲು ದೊಡ್ಡ ಸಂಖ್ಯೆಯಲ್ಲಿ ವಾಹನದ ವ್ಯವಸ್ಥೆ ಮಾಡಲಾಗಿತ್ತು. ನೂರಾರು KSRTC ಬಸ್ಸುಗಳು, ಖಾಸಗಿ ಬಸ್ಸುಗಳು, ಟಿಟಿ ವಾಹನಗಳು, ಕಾರು ಸೇರಿದಂತೆ ಹಲವು ವಾಹನಗಳ ವ್ಯವಸ್ಥೆಯಾಗಿತ್ತು. ಹಳ್ಳಿ ಹಳ್ಳಿಯಿಂದಲು ಜನರನ್ನು ಕರೆಯಿಸಲಾಗಿದೆ.
ಬಿರು ಬಿಸಿಲಲ್ಲಿ, ನಡು ರಸ್ತೆಯಲ್ಲಿ
ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ವಾಹನಗಳು ನಡು ರಸ್ತೆಯಲ್ಲೆ ನಿಂತಿದ್ದವು. ಬಿರು ಬಿಸಿಲಿನಲ್ಲಿ ಬಹು ಹೊತ್ತು ವಾಹನಗಳಲ್ಲೇ ಕಳೆದ ಜನರು ಹೈರಾಣಾದರು. ವಿಮಾನ ನಿಲ್ದಾಣ ಕಣ್ತುಂಬಿಕೊಳ್ಳಬೇಕು, ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಬೇಕು ಎಂಬ ಉತ್ಸಾಹವು ಅಡಗಿ ಹೋಗಿತ್ತು.
‘ಶಿಕಾರಿಪುರದ ತರಲಘಟ್ಟದಿಂದ ಬಂದಿದ್ದೇವೆ. ನಾವು ವಿಮಾನ ನಿಲ್ದಾಣ ನೋಡಬೇಕು. ಮೋದಿ ಅವರು ಬಂದಿದ್ದಾರೆ. ಅವರನ್ನು ನೋಡಬೇಕು ಅಂತಾ ಬಂದಿದ್ದೇವೆ. ಆದರೆ ಟ್ರಾಫಿಕ್ ನಿಂದಾಗಿ ಸುಸ್ತಾಗಿದ್ದೇವೆ. ಇನ್ನು ಎಷ್ಟೊತ್ತು ಕಾಯಬೇಕೋ ಗೊತ್ತಾಗುತ್ತಿಲ್ಲ’ ಅನ್ನುತ್ತಾ ಸಂಚಾರ ದಟ್ಟಣೆ ಬಗ್ಗೆ ಅಸಮಾಧಾನ ಹೊರ ಹಾಕಿದರು ಬಸ್ಸಿನಲ್ಲಿದ್ದ ಮಹಿಳೆ.
ಇದನ್ನೂ ಓದಿ – ಶಿವಮೊಗ್ಗದ ಕೆಲವು ಗ್ರಾಮ, ಬಡಾವಣೆಗಳಿಗೆ ದಿಗ್ಭಂದನದ ಅನುಭವ, ಹಿಡಿಶಾಪ ಹಾಕುತ್ತ ನಡೆದ ಜನ
ಕೆಲವು ಕಡೆ ಬಿಜೆಪಿ ಕಾರ್ಯಕರ್ತರು ಬಸ್ಸಿನಲ್ಲಿದ್ದವರಿಗೆ ನೀರು, ತಿಂಡಿ ಪೂರೈಕೆ ಮಾಡಿದರು. ಬಹುತೇಕ ಜನರಿಗೆ ಇದಾವುದು ಸಿಗದೆ, ಬಸ್ಸು ನಿಂತಲ್ಲೇ ಅಕ್ಕಪಕ್ಕದ ಅಂಗಡಿಗಳಿಗೆ ಹೋಗಿ ನೀರು, ಬಸ್ಕತ್ತು, ತಿಂಡಿ ತಂದು ಹಸಿವು ನೀಗಿಸಿಕೊಂಡರು.
ನಡೆದು ಹೊರಟ ಯುವಕರು
ಇನ್ನು, ಬಹು ಹೊತ್ತು ಸಂಚಾರ ದಟ್ಟಣೆಯಿಂದ ಕಂಗೆಟ್ಟಿದ್ದ ಯುವಕರು, ತಾವು ಬಂದಿದ್ದ ವಾಹನಗಳಿಂದ ಕೆಳಗಿಳಿದು ಕಾರ್ಯಕ್ರಮದ ಸ್ಥಳದವರೆಗೆ ನಡೆದು ಸಾಗಿದರು. ಬಿಜೆಪಿ ಪಕ್ಷದ ಧ್ವಜಗಳನ್ನು ಹಿಡಿದು ಬೈಪಾಸ್ ರಸ್ತೆ, ವಿದ್ಯಾನಗರ ಸೇರಿದಂತೆ ವಿವಿಧೆಡೆಯಿಂದ ನಡೆದುಕೊಂಡೇ ವಿಮಾನ ನಿಲ್ದಾಣದವರೆಗೆ ತೆರಳಿದರು.
ಇದನ್ನೂ ಓದಿ – ಶಿವಮೊಗ್ಗ ನಗರದಾದ್ಯಂತ ಫುಲ್ ಟ್ರಾಫಿಕ್ ಜಾಮ್, ಎಲ್ಲೆಲ್ಲಿ ಹೇಗಿದೆ? ಇಲ್ಲಿದೆ ಫೋಟೊ ರಿಪೋರ್ಟ್
ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ, ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ, ಭಾಷಣ ಆರಂಭಿಸಿದರೂ ಹಲವರು ಕಾರ್ಯಕ್ರಮ ಸ್ಥಳಕ್ಕೆ ತಲುಪಲಾಗದೆ ಪರದಾಡಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422