ದಸರಾ ಸುದ್ದಿ: ದಸರಾ ಜಂಬೂ ಸವಾರಿಗೆ ಬಂದಿರುವ ಆನೆಗಳು ಕೋಟೆ ರಸ್ತೆಯ ವಾಸವಿ ಶಾಲೆ ಅವರಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಆನೆಗಳನ್ನು (Elephants) ಹತ್ತಿರದಿಂದ ನೋಡಲು ಇವತ್ತು ಬೆಳಗ್ಗೆಯಿಂದಲೆ ಜನರು ಶಾಲೆಯತ್ತ ಆಗಮಿಸುತ್ತಿದ್ದಾರೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಸಕ್ರೆಬೈಲು ಬಿಡಾರದ ಆನೆಗಳಾದ ಸಾಗರ್, ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಶಿವಮೊಗ್ಗಕ್ಕೆ ಆಗಮಿಸಿವೆ. ಇವತ್ತು ಬೆಳಗ್ಗೆ ದಸರಾ ಆನೆಗಳು ಮೊದಲ ಸುತ್ತಿನ ತಾಲೀಮು ನಡೆಸಿವೆ. ಇನ್ನೊಂದೆಡೆ ಆನೆಗಳು ಉಳಿದುಕೊಂಡಿರುವ ವಾಸವಿ ಶಾಲೆ ಆವರಣಕ್ಕೆ ಜನರು ಬೆಳಗ್ಗೆಯಿಂದಲೇ ತಂಡೋಪ ತಂಡವಾಗಿ ಬರುತ್ತಿದ್ದಾರೆ. ಮಕ್ಕಳನ್ನು ಕರೆತಂದು ಆನೆಗಳನ್ನ ತೋರಿಸಿ ಖುಷಿ ಪಡುತ್ತಿದ್ದಾರೆ.
ಈ ಮೊದಲು ಆನೆಗಳು ಉಳಿಯುವ ಜಾಗದ ಸುತ್ತಲು ಹಸಿರು ಪರದೆ ಹಾಕಲಾಗಿತ್ತು. ಆನೆಗಳು ಬರುತ್ತಿದ್ದಂತೆ ಈ ಪರದೆ ತೆಗೆದು ಜನರು ಆನೆಗಳನ್ನು ಕಣ್ತುಂಬಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.



ಇದನ್ನೂ ಓದಿ » ಎಟಿಎನ್‌ಸಿ ಕಾಲೇಜಿನಲ್ಲಿ ಎನ್‌ಎಸ್‌ಎಸ್ ದಿನಾಚರಣೆ, ಧ್ವಜಾರೋಹಣ
Elephants
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು





