ಶಿವಮೊಗ್ಗ ಲೈವ್.ಕಾಂ | SHIMOGA NEWS | 01 ಅಕ್ಟೋಬರ್ 2021
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಕೆಲವು ದಿನ ಸ್ಥಿರವಾಗಿದ್ದ ಪೆಟ್ರೋಲ್, ಡಿಸೇಲ್ ಬೆಲೆ ಮತ್ತೆ ಏರಿಕೆಯಾ ಹಾದಿ ಹಿಡಿದಿದೆ. ತೈಲೋತ್ಪನ್ನಗಳ ದರ ಹೆಚ್ಚಳ ವಾಹನ ಸವಾರರಲ್ಲಿ ಪುನಃ ಆತಂಕ ಮೂಡಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸಾಮಾನ್ಯ ಪೆಟ್ರೋಲ್ ದರದಲ್ಲಿ ಇವತ್ತು 25 ಪೈಸೆ ಏರಿಕೆಯಾಗಿದೆ. ಹಾಗಾಗಿ ಪ್ರತಿ ಲೀಟರ್ ಪೆಟ್ರೋಲ್ ದರ 106.87 ರೂ.ಗೆ ತಲುಪಿದೆ.
ಪ್ರತಿ ಲೀಟರ್’ಗೆ ನೂರರ ಗಡಿ ದಾಟಿದ್ದ ಪೆಟ್ರೋಲ್ ದರ ನಿತ್ಯ ಏರಿಕೆಯಾಗುತ್ತಲೇ ಇತ್ತು. ಕೆಲವು ದಿನ ಶಿವಮೊಗ್ಗದಲ್ಲಿ ಸಾಮಾನ್ಯ ಪೆಟ್ರೋಲ್ ದರ 106.19 ರೂ.ಗೆ ಸ್ಥಿರವಾಗಿತ್ತು. ಆದರೆ ಈ ವಾರದಿಂದ ಪುನಃ ಏರಿಕೆಯಾಗುತ್ತಿದೆ. ಇದೊಂದೆ ವಾರದಲ್ಲಿ ಮೂರು ಭಾರಿ ಪೆಟ್ರೋಲ್ ರೇಟ್ ಹೆಚ್ಚಳವಾಗಿದೆ. ಸೆಪ್ಟೆಂಬರ್ 28ರಂದು 19 ಪೈಸೆ, ಸೆಪ್ಟೆಂಬರ್ 30ರಂದು 24 ಪೈಸೆ, ಅಕ್ಟೋಬರ್ 1ರಂದು 25 ಪೈಸೆ ಹೆಚ್ಚಳವಾಗಿದೆ.
ಡಿಸೇಲ್ ಕೂಡ ದುಬಾರಿ

ಶಿವಮೊಗ್ಗ ಜಿಲ್ಲೆಯಲ್ಲಿ ಡಿಸೇಲ್ ದರವು ಏರಿಕೆಯ ಏಣಿ ಹತ್ತಲು ಆರಂಭಿಸಿದೆ. ಅಕ್ಟೋಬರ್ 1ರಂದು ಡಿಸೇಲ್ ದರದಲ್ಲಿ 32 ಪೈಸೆ ಏರಿಕೆಯಾಗಿದೆ. ಹಾಗಾಗಿ ಪ್ರತಿ ಲೀಟರ್ ಡಿಸೇಲ್ ದರ 96.93 ರೂ.ಗೆ ತಲುಪಿದೆ.
ಡಿಸೇಲ್ ದರವು ಕೆಲವು ಸಂದರ್ಭ ಸ್ಥಿರವಾಗಿತ್ತು. ಕಳೆದ ಎಂಟು ದಿನದಿಂದ ಪುನಃ ದರ ಏರಿಕೆಯಾಗಿದೆ. ಸೆಪ್ಟೆಂಬರ್ 24ರಂದು 20 ಪೈಸೆ, ಸೆ.26ರಂದು 26 ಪೈಸೆ, ಸೆ.27ರಂದು 25 ಪೈಸೆ, ಸೆ.28ರಂದು 27 ಪೈಸೆ, ಸೆ.30ರಂದು 31 ಪೈಸೆ ಏರಿಕೆಯಾಗಿತ್ತು. ಇವತ್ತು ಪುನಃ ಏರಿಕೆಯಾಗಿದ್ದು, ಸರಕು ಸಾಗಣೆ ವಾಹನ ಚಾಲಕರು, ಮಾಲೀಕರನ್ನು ಚಿಂತೆಗೀಡು ಮಾಡಿದೆ.

ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






