ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಜುಲೈ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ನಗರದಲ್ಲಿ ಬೀಡಾಡಿ ಹಂದಿಗಳು ಮತ್ತು ಕುದುರೆಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ನಿಯಂತ್ರಣ ಹೇರಲು ಮಹಾನಗರ ಪಾಲಿಕೆ ಮುಂದಡಿ ಇಟ್ಟಿದೆ.
ಹಂದಿ ಮತ್ತು ಕುದುರೆಗಳನ್ನು ಸಾಕುವವರಿಗೆ ಮಹಾನಗರ ಪಾಲಿಕೆ ಆಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹಂದಿಗಳಿಂದ ಮಾಲಿನ್ಯ ಹೆಚ್ಚಳ
ಹಂದಿ ಸಾಕುವವರು ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯಬೇಕು. ಒಂದು ವೇಳೆ ಅನುಮತಿ ಪಡೆಯದೆ ಹಂದಿ ಸಾಕಣೆ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಕಮಿಷನರ್ ಎಚ್ಚರಿಸಿದ್ದಾರೆ.
ಹಂದಿಗಳು ಎಲ್ಲೆಂದರಲ್ಲಿ ಓಡಾಡಿ ಸಮಸ್ಯೆ ಮಾಡುತ್ತಿವೆ. ಅಲ್ಲದೆ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿವೆ. ಆದ್ದರಿಂದ ನಿಯಂತ್ರಣ ಹೇರುವುದು ಅನಿವಾರ್ಯವಾಗಿದೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಸಿದೆ.
ಕಿರಿಕಿರಿ ಮಾಡುತ್ತಿವೆ ಕುದುರೆಗಳು
ಶಿವಮೊಗ್ಗ ನಗರದ ವಿವಿಧೆಡೆ ಕುದುರೆಗಳಿಂದಾಗಿ ಪಾದಚಾರಿಗಳು ಮತ್ತು ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಕುದುರೆಗಳನ್ನು ಸಾಕುತ್ತಿರುವವರು ಈ ಬಗ್ಗೆ ಗಮನ ವಹಿಸಬೇಕು ಎಂದು ಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ.
ಮೂರು ದಿನದ ಗಡುವು
ಬೀಡಾಡಿ ಹಂದಿಗಳು ಮತ್ತು ಕುದುರೆಗಳಿಗೆ ನಿಯಂತ್ರಣ ಹೇರಲು ಪಾಲಿಕೆ ಮುಂದಾಗಿದೆ. ಒಂದು ವೇಳೆ ಇವುಗಳನ್ನು ಸಾಕಿರುವವರು ರಸ್ತೆಗೆ ಬಿಟ್ಟಿದ್ದರೆ, ಮೂರು ದಿನಗಳ ಒಳಗಾಗಿ ಅವುಗಳನ್ನು ಕೊಂಡೊಯ್ಯಬೇಕು. ಇಲ್ಲವಾದಲ್ಲಿ ಪಾಲಿಕೆ ಕ್ರಮ ವಹಿಸಲಿದೆ ಎಂದು ಎಚ್ಚರಿಸಿದ್ದಾರೆ.
ಈ ಹಿಂದೆಯು ಪಾಲಿಕೆ ಹಲವು ಭಾರಿ ಎಚ್ಚರಿಕೆ ನೀಡಿತ್ತು. ಬಳಿಕ ಕಣ್ಣೊರೆಸುವ ತಂತ್ರ ಎಂಬಂತೆ ಒಂದಷ್ಟು ಹಂದಿಗಳನ್ನು ಹಿಡಿಸುತ್ತಿದ್ದರು. ಆದರೆ ಅವುಗಳಿಂದ ಆಗುತ್ತಿದ್ದ ಕಿರಿಕಿರಿ ನಿಂತಿಲ್ಲ. ಈಗಲಾದರೂ ಬೀಡಾಡಿ ಕುದುರೆ ಮತ್ತು ಹಂದಿಗಳ ನಿಯಂತ್ರಣಕ್ಕೆ ಪಾಲಿಕೆ ಕಠಿಣ ಹೆಜ್ಜೆ ಇಡುತ್ತದೆಯೇ ಕಾದು ನೋಡಬೇಕು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200