ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 30 NOVEMBER 2022
ಶಿವಮೊಗ್ಗ : ಸಾಗರ ಅಡಕೆ ಕಳ್ಳತನ ಪ್ರಕರಣದ ಬೆನ್ನಿಗೆ ಪೊಲೀಸ್ ಇಲಾಖೆ ಅಡಕೆ ರಕ್ಷಣೆ ಕುರಿತು ಮಹತ್ವದ ಸಭೆ ನಡೆಸಿದೆ. ಅಲ್ಲದೆ ಆರು ಮಾರ್ಗಸೂಚಿಯನ್ನು (Guideline for Adike) ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.
ಶಿವಮೊಗ್ಗ ಎಪಿಎಂಸಿಯಲ್ಲಿ ಅಡಕೆ ವರ್ತಕರ ಸಂಘದ ಸಭಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ವರ್ತಕರ ಜೊತೆ ಸಭೆ ನಡೆಸಿದರು. ಅಡಕೆ ಮೇಲೆ ಕಳ್ಳರ ಕಣ್ಣು ಬೀಳದಂತೆ ನಿಯಂತ್ರಿಸಲು ವಿವಿಧ ಕಠಿಣ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಬಳಿಕ ಆರು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಸಾಗರ ಅಡಕೆ ಕಳವು ಪ್ರಕರಣದ ಬೆನ್ನಿಗೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
(Guideline for Adike)
ಏನಿದು ಸಾಗರದ ಅಡಕೆ ಕಳವು ಕೇಸ್?
ಇತ್ತೀಚೆಗೆ, ಸಾಗರದ ಬಳಸಗೋಡು ಗ್ರಾಮದ ಮಧುಕರ್ ಎಂಬುವವರು ತಮ್ಮ ಗೋಡೋನ್ ನಿಂದ 24,500 ಕೆ.ಜಿ ತೂಕದ 350 ಚೀಲ ಅಡಕೆಯನ್ನು ಗುಜರಾತ್ ರಾಜ್ಯದ ಅಹಮದಾಬಾದ್ ಗೆ ಕಳುಹಿಸಿದ್ದರು. ಅಡಕೆ ಹೊತ್ತು ಸಾಗಿದ್ದ ಲಾರಿ ನಾಪತ್ತೆಯಾಗಿತ್ತು. ಈ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 22 ದಿನ ತನಿಖೆ ನಡೆಸಿದ ಪೊಲೀಸರು, ಮದ್ಯಪ್ರದೇಶದಲ್ಲಿ ಮೂವರು ಆರೋಪಿಗಳನ್ನು ಲಾರಿ ಮತ್ತು ಅಡಕೆ ಸಹಿತ ವಶಕ್ಕೆ ಪಡೆದಿದ್ದರು.
ಮದ್ಯಪ್ರದೇಶದ ರಜಾಕ್ ಖಾನ್ ಅಲಿಯಾಸ್ ಸಲೀಂ ಖಾನ್ (65), ಥೇಜು ಸಿಂಗ್ (42), ಅನೀಸ್ ಅಬ್ಬಾಸಿ (55) ಬಂಧಿತರು. 1.17 ಕೋಟಿ ರೂ. ಮೊತ್ತದ ಕೆಂಪು ಅಡಕೆಯನ್ನು ವಶಕ್ಕೆ ಪಡೆಯಲಾಗಿತ್ತು. ಆರೋಪಿಗಳ ಬಂಧನದ ಬಳಿಕ ಅವರು ಅಂತಾರಾಜ್ಯ ಕಳ್ಳರು ಎಂಬುದು ಗೊತ್ತಾಗಿತ್ತು.
(Guideline for Adike)
ಅಡಕೆ ಸಾಗಣೆ ಮೇಲೆ ನಿಗಾ
ಸಾಗರದಲ್ಲಿ ಕೋಟಿ ರೂ. ಮೌಲ್ಯದ ಅಡಕೆಯನ್ನು ವಶಕ್ಕೆ ಪಡೆದ ಬೆನ್ನಿಗೆ ಪೊಲೀಸ್ ಇಲಾಖೆ ಅಡಕೆ ಸಾಗಣೆ ಮೇಲೆ ನಿಗಾ ವಹಿಸಿದೆ. ಅಡಕೆ ವರ್ತಕರ ಜೊತೆ ಸಭೆ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು 8 ಮಾರ್ಗ ಸೂಚಿ ಪ್ರಕಟಿಸಿದ್ದಾರೆ.
ಮಾರ್ಗಸೂಚಿ 1 – ಅಡಕೆ ಮಂಡಿಗಳ ಮಾಲೀಕರು ಮುಂಜಾಗೃತಾ ಕ್ರಮವಾಗಿ ಮಂಡಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು.
ಮಾರ್ಗಸೂಚಿ 2 – ಅಡಕೆ ಸಾಗಾಣೆ ಮಾಡುವ ಮುಂಚೆ ವಾಹನಗಳ ಚಾಲಕರು ಮತ್ತು ಸಹಾಯಕರುಗಳ ಪೂರ್ವಾಪರ ಪರಿಶೀಲಿಸಬೇಕು. ಅವರ ಮಾಹಿತಿ ಖಚಿತ ಪಡಿಸಿಕೊಂಡ ನಂತರವೇ ಸಾಗಾಟ ಮಾಡಬೇಕು.
ಮಾರ್ಗಸೂಚಿ 3 – ಮಂಡಿಗಳಲ್ಲಿ ಸಂಗ್ರಹಿಸಿರುವ ಮತ್ತು ಸಾಗಾಟ ಮಾಡುವ ಅಡಕೆಗೆ ವಿಮೆ ಮಾಡಿಸಬೇಕು.
ಮಾರ್ಗಸೂಚಿ 4 – ಅಡಕೆ ಸಾಗಾಟ ಮಾಡುವಾಗ ಟ್ರಾನ್ಸ್ ಪೋರ್ಟ್ ಏಜನ್ಸಿ ಮತ್ತು ಮಾಲೀಕರ ಪೂರ್ವಾಪರ ಪರಿಶೀಲಿಸಿಕೊಳ್ಳಬೇಕು.
ALSO READ – ಅಡಕೆ ಧಾರಣೆ | 29 ನವೆಂಬರ್ 2022 | ಎಲ್ಲೆಲ್ಲಿ ಎಷ್ಟಿದೆ ಅಡಕೆ ರೇಟ್?
ಮಾರ್ಗಸೂಚಿ 5 – ಅಡಕೆ ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿಕೊಳ್ಳಬೇಕು. ಅಥವಾ ಜಿಪಿಎಸ್ ಅಳವಡಿಸಿರುವ ವಾಹನಗಳಲ್ಲಿಯೇ ಅಡಕೆ ಸಾಗಾಟ ಮಾಡಬೇಕು.
ALSO READ – ಎಲೆ ಚುಕ್ಕೆ, ತೀರ್ಥಹಳ್ಳಿಯ ತೋಟಕ್ಕೆ ಸಿಎಂ ಭೇಟಿ, ಇಲ್ಲಿದೆ ಬೊಮ್ಮಾಯಿ ಹೇಳಿದ 3 ಪ್ರಮುಖಾಂಶ
ಮಾರ್ಗಸೂಚಿ 6 – ಯಾವುದೇ ಸಂಶಯ ಕಂಡುಬಂದಲ್ಲಿ ಅಥವಾ ತುರ್ತು ಸಹಾಯಕ್ಕಾಗಿ ಹತ್ತಿರದ ಪೊಲೀಸ್ ಠಾಣೆ, ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ – 9480803300 ಗೆ ಕರೆ ಮಾಡಬಹುದು. ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಬಹುದು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422