ಶಿವಮೊಗ್ಗದಲ್ಲಿ ನಡುರಾತ್ರಿ ಬಂದೂಕು ಹಿಡಿದು ಪೊಲೀಸರ ಕಾಲ್ನಡಿಗೆ ಗಸ್ತು, ಆಗಂತುಕರಿಗೆ ಮುಂದುವರೆದ ಶೋಧ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ನಡುರಾತ್ರಿ ಮಾರಕಾಸ್ತ್ರ ಹಿಡಿದು ಆಗಂತುಕರು ಓಡಾಡಿದ್ದರಿಂದ ಒಡ್ಡಿನಕೊಪ್ಪ ಸಮೀಪದ ಪುಟ್ಟಪ್ಪ ಕ್ಯಾಂಪ್‌ನ ನಿವಾಸಿಗಳು ಆತಂಕಕ್ಕೀಡಾಗಿದ್ದರು. ಈ ಮಧ್ಯೆ ಪೊಲೀಸ್‌ ಇಲಾಖೆ ಸ್ಥಳೀಯರಿಗೆ ಅಭಯ ನೀಡಿದ್ದು, ಬಡಾವಣೆಯಲ್ಲಿ ಶಸ್ತ್ರಸಜ್ಜಿತವಾಗಿ ಗಸ್ತು (Patrol) ಆರಂಭಿಸಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಒಡ್ಡಿನಕೊಪ್ಪ ಸಮೀಪದ ಎನ್‌.ಆರ್‌.ಪುರ ರಸ್ತೆಗೆ ಹೊಂದಿಕೊಂಡಿರುವ ಪುಟ್ಟಪ್ಪ ಕ್ಯಾಂಪ್‌ನಲ್ಲಿ ಭಾನುವಾರ ರಾತ್ರಿ 1 ಗಂಟೆಗೆ ಆರು ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಓಡಾಡಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಹತ್ತು ಮನೆ, 20 ಕುಟುಂಬ

Puttappa Camp Incident in Shimoga
ಶಿವಮೊಗ್ಗ – ಎನ್‌.ಆರ್‌.ಪುರ ರಸ್ತೆಯಲ್ಲಿರುವ ಪುಟ್ಟಪ್ಪ ಕ್ಯಾಂಪ್‌ ಬಡಾವಣೆ.

ಪುಟ್ಟಪ್ಪ ಕ್ಯಾಂಪ್‌ನಲ್ಲಿ ಕೆಲವೇ ವರ್ಷದ ಹಿಂದೆ ಬಡಾವಣೆ ನಿರ್ಮಾಣವಾಗಿದೆ. ಸದ್ಯ ಇಲ್ಲಿ 10 ಮನೆಗಳಿವೆ. ಸುಮಾರು 20 ಕುಟುಂಬಗಳು ವಾಸಿಸುತ್ತಿವೆ. ಅಧಿಕಾರಿಗಳು, ಉಪನ್ಯಾಸಕರು, ಉದ್ಯಮಿಗಳು ಇಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಬಡಾವಣೆಯಲ್ಲಿ ಜನ ಸಂಚಾರ ಕಡಿಮೆ.

ಸ್ಥಳಕ್ಕೆ ಹೆಚ್ಚುವರಿ ರಕ್ಷಣಾಧಿಕಾರಿ ಭೇಟಿ

Puttappa Camp Incident in Shimoga
ಪುಟ್ಟಪ್ಪ ಕ್ಯಾಂಪ್‌ ಬಡಾವಣೆಗೆ ಹೆಚ್ಚುವರಿ ರಕ್ಷಣಾಧಿಕಾರಿ ಕಾರ್ಯಪ್ಪ ಭೇಟಿ, ಸ್ಥಳೀಯರೊಂದಿಗೆ ಚರ್ಚೆ.

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಹೆಚ್ಚುವರಿ ರಕ್ಷಣಾಧಿಕಾರಿ ಎ.ಜಿ.ಕಾರ್ಯಪ್ಪ ಪುಟ್ಟಪ್ಪ ಕ್ಯಾಂಪ್‌ ಬಡಾವಣೆಗೆ ಭೇಟಿ ನೀಡಿದ್ದರು. ಸಿಸಿಟಿವಿ ದೃಶ್ಯ ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಪಡೆದರು. ಅಲ್ಲದೆ ತುರ್ತು ಸಂದರ್ಭ ಪೊಲೀಸ್‌ ಇಲಾಖೆಯ ಸಹಾಯವಾಣಿ 112ಗೆ ಕರೆ ಮಾಡುವಂತೆ ತಿಳಿಸಿದರು. ಡಿವೈಎಸ್‌ಪಿ ಬಾಬು ಆಂಜನಪ್ಪ, ತುಂಗಾ ನಗರ ಠಾಣೆ ಇನ್ಸ್‌ಪೆಕ್ಟರ್‌ ಕೆ.ಟಿ.ಗುರುರಾಜ್‌ ಭೇಟಿ ನೀಡಿ ಪರಿಶೀಲಿಸಿದರು.

ಶಸ್ತ್ರಾಸ್ತ್ರ ಸಹಿತ ಪೊಲೀಸರ ಗಸ್ತು

Puttappa Camp Incident in Shimoga
ಬಂದೂಕು ಸಹಿತ ಗಸ್ತು ನಡೆಸುತ್ತಿರುವ ತುಂಗಾ ನಗರ ಪೊಲೀಸರು

ಜನರಲ್ಲಿ ಭರವಸೆ ಮೂಡಿಸಲು ಪೊಲೀಸರು ಶಸ್ತ್ರಾಸ್ತ್ರ ಸಹಿತ ಗಸ್ತು ನಡೆಸಿದರು. ಕಳೆದ ರಾತ್ರಿ ಕಾಲ್ನಡಿಗೆಯಲ್ಲಿ ಒಡ್ಡಿನಕೊಪ್ಪ ಭಾಗದ ಹಲವಡೆ ತುಂಗಾ ನಗರ ಠಾಣೆ ಪೊಲೀಸರು ಗಸ್ತು ನಡೆಸಿದರು. ರಾತ್ರಿ ಪೂರ್ತಿ ಪೊಲೀಸರು ಗಸ್ತು ಮಾಡಿದರು.

June-2025-Report-Shivamogga-Live-New-New.

ಸದ್ಯ ಪುಟ್ಟಪ್ಪ ಕ್ಯಾಂಪ್‌ನಲ್ಲಿ ಓಡಾಡಿದ ದುಷ್ಕರ್ಮಿಗಳಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಶಸ್ತ್ರಾಸ್ತ್ರ ಸಹಿತ ಪೊಲೀಸರ ಗಸ್ತು ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment