ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 8 SEPTEMBER 2024 : ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಪೊಲೀಸರು ರೂಟ್ ಮಾರ್ಚ್ (ROUTE MARCH) ನಡೆಯಿತು.
ಮಂಡಲೇಶ್ವರ ದೇವಸ್ಥಾನದ ಆವರಣದಿಂದ ಆರಂಭವಾದ ರೂಟ್ ಮಾರ್ಚ್ ಎ.ಎ.ವೃತ್ತ, ನ್ಯೂ ಮಂಡ್ಲಿ ವೃತ್ತ, ಸಂದೇಶ್ ಮೋಟರ್ಸ್, ಕೆಜಿಎನ್ ವೃತ್ತ, ಇಮಾಮ್ ಬಾಡಾ, ಸೀಗೆಹಟ್ಟಿಯಿಂದ ಎ.ಎ.ವೃತ್ತದವರೆಗೆ ಸಾಗಿತು.
ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್ ರವಿ ಪಾಟೀಲ್, ಇನ್ಸ್‌ಪೆಕ್ಟರ್‌ಗಳಾದ ನಾಗರಾಜ್, ಮಂಜುನಾಥ್, ಬಾಲಕೃಷ್ಣ, ಆರ್.ಎ.ಎಫ್, ಕೆಎಸ್‌ಆರ್‌ಪಿ, ಕ್ಯೂ.ಆರ್.ಟಿ ತಂಡದ ಪೊಲೀಸರು ರೂಟ್ ಮಾರ್ಚ್‌ನಲ್ಲಿ ಭಾಗವಹಿಸಿದ್ದರು.
ಎಲ್ಲೆಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು
ಅಹಿತಕರ ಘಟನೆ ತಡೆಗೆ ಶಿವಮೊಗ್ಗ ನಗರದ ವಿವಿಧೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇವುಗಳ ಮೂಲಕ ಆ ಭಾಗದ ಪ್ರತಿ ಘಟನೆ ಕುರಿತು ಪೊಲೀಸರು ನಿಗಾ ವಹಿಸಲಿದ್ದಾರೆ.
ಗಣಪತಿ ಹಬ್ಬದ ಮೆರವಣಿಗೆ ಸಾಗುವ ಮಾರ್ಗದಲ್ಲಿ ಮಹಾನಗರ ಪಾಲಿಕೆ ವತಿಯಿಂದ 350 ಸಿಸಿ ಕ್ಯಾಮರಾ, ಪೊಲೀಸ್ ಇಲಾಖೆಯಿಂದ 500ಕ್ಕೂ ಹೆಚ್ಚು ಕ್ಯಾಮರಾ ಅಳವಡಿಸಲಾಗಿದೆ. ವಿಡಿಯೋಗ್ರಫಿ ಮತ್ತು ಡ್ರೋಣ್ ವ್ಯವಸ್ಥೆ ಮಾಡಲಾಗಿದೆ. ಭದ್ರಾವತಿಯಲ್ಲಿ 120 ರಿಂದ 140 ಕ್ಯಾಮರಾಗಳು, ಸಾಗರದಲ್ಲಿ 70 ಮತ್ತು ಶಿರಾಳಕೊಪ್ಪದಲ್ಲಿ 50ಕ್ಕೂ ಅಧಿಕ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ » ಗಣಪತಿ ಮೆರವಣಿಗೆಯಲ್ಲಿ ಡೊಳ್ಳಿನ ವಿಚಾರಕ್ಕೆ ಗಲಾಟೆ, ಪೊಲೀಸ್ ಸೇರಿ ಹಲವರಿಗೆ ಗಾಯ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422