ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 4 ಏಪ್ರಿಲ್ 2022
ದೊಡ್ಡಪೇಟೆ ಮತ್ತು ಭದ್ರಾವತಿ ಹಳೇನಗರ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಹೊಸಮನೆ ರಸ್ತೆ ಜಂಬಣ್ಣ ರೈಸ್ ಮಿಲ್ ಹತ್ತಿರ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ದೊಡ್ಡಪೇಟೆ ಠಾಣೆ ಪೊಲೀಸರು, ಬಂಧಿತರಿಂದ 1.100 ಕೆಜಿ ಗಾಂಜಾ, 3,670 ರೂ. ನಗದು, 1 ಬೈಕ್‌ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗ ಬನ್ನಿಕೆರೆಯ ಉಮೇಶ ನಾಯ್ಕ (48), ನವುಲೆಯ ನಿತಿನ್(23), ಬಾಪೂಜಿನಗರದ ರಾಹಿಲ್ ಖಾನ್ (23), ಹನುಮಂತನಗರದ ಶ್ರೇಯಸ್ (25), ನಿತಿನ್‌ಕುಮಾರ್ (26) . ಹಾಗೂ ಭದ್ರಾವತಿ ಇಂದಿರಾನಗರದ ಮಹಮ್ಮದ್ ಅರ್ಷಾನ್(23) ಬಂಧಿತರು.
ಮತ್ತೊಂದು ಪ್ರಕರಣದಲ್ಲಿ ಭದ್ರಾವತಿ ಹಳೇ ನಗರ ಠಾಣಾ ವ್ಯಾಪ್ತಿಯ ಜಟ್‌ಪಟ್‌ನಗರ ಕಡೆಯಿಂದ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಮಹಮ್ಮದ್ ಅರ್ಷಾನ್‌ನ್ನು ಬಂಧಿಸಿ 420 ಗ್ರಾಂ ಒಣ ಗಾಂಜಾ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

About The Editor
ನಿತಿನ್ ಆರ್.ಕೈದೊಟ್ಲು
















