ಶಿವಮೊಗ್ಗ ಸಿಟಿಯಲ್ಲಿ ಪೊಲೀಸರ ರೂಟ್‌ ಮಾರ್ಚ್‌, ಎಲ್ಲೆಲ್ಲಿ ಸಾಗಿತು ಪಥಸಂಚಲನ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಗಣೇಶ ಚತುರ್ಥಿ ಮತ್ತು ಈದ್‌ ಮಿಲಾದ್‌ ಹಬ್ಬಗಳ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಪೊಲೀಸರು ಪೊಲೀಸರು ರೂಟ್‌ ಮಾರ್ಚ್‌ (Route March) ನಡೆಸಿದರು. ಕೋಟೆ ಪೊಲೀಸ್‌ ಠಾಣೆ ಆವರಣದಿಂದ ಗೋಪಿ ವೃತ್ತದವರೆಗೆ ರೂಟ್‌ ಮಾರ್ಚ್‌ ನಡೆಯಿತು.

ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಶಿವಮೊಗ್ಗ ನಗರದ 80 ಪೊಲೀಸರು, ಆರ್‌.ಎ.ಎಫ್‌ ತುಕಡಿ, ಎಸ್‌.ಎ.ಎಫ್‌ ತುಕಡಿ, ಡಿ.ಎ.ಆರ್‌ನ 50 ಸಿಬ್ಬಂದಿ, ಕೆ.ಎಸ್‌.ಆರ್‌.ಪಿ 3 ತುಕಡಿ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ » 48 ಗಂಟೆಯಲ್ಲಿ ಇಬ್ಬರು ಅಂತರ ಜಿಲ್ಲಾ ಕಳ್ಳರು ಅರೆಸ್ಟ್‌, ಲಕ್ಷ ಲಕ್ಷದ ಚಿನ್ನಾಭರಣ ಸೀಜ್‌, ಎಲ್ಲೆಲ್ಲಿ ಕದ್ದಿದ್ದರು?

Police-Route-March-in-Shimoga-city.

ಕೋಟೆ ಪೊಲೀಸ್ ಠಾಣಾ ಅವರಣದಿಂದ ಆರಂಭವಾಗಿ ಕೋಟೆ ಆಂಜನೇಯ ಸ್ವಾಮಿ ದೇವಾಲಯ, ಮಾರಿಕಾಂಬ ದೇವಾಲಯ, ಮಹಾರಾಜ ರಸ್ತೆ, ಯಲ್ಲಪ್ಪನ ಕೇರಿ, ಲಷ್ಕರ್‌ ಮೊಹಲ್ಲಾ, ನಾಗಪ್ಪನ ಕೇರಿ, ಉರ್ದು ಬಜಾರ್‌, ಎಂಕೆಕೆ ರಸ್ತೆ, ಸಿದ್ದಯ್ಯ ವೃತ್ತ, ಕೆ.ಆರ್‌.ಪುರಂ ರಸ್ತೆ, ನುರಾನಿ ಮಸೀದಿ, ಸೀಗೇಹಟ್ಟಿ ವೃತ್ತ, ಓಟಿ ರಸ್ತೆ, ವಿಜಯಾ ಗ್ಯಾರೇಜ್‌, ಲಕ್ಷ್ಮೀ ಟ್ರಾಕ್ಟರ್ಸ್‌, ಜಿ-ಕಾರ್ನರ್‌, ಎ.ಎ.ವೃತ್ತ, ಎಸ್‌.ಎನ್‌.ವೃತ್ತ, ಮೀನಾಕ್ಷಿ ಭವನ, ಟ್ಯಾಂಕ್‌ ಮೊಹಲ್ಲಾ, ಬಾಲರಾಜ್‌ ಅರಸು ರಸ್ತೆ, ಮಹಾವೀರ ವೃತ್ತದಿಂದ ಗೋಪಿ ವೃತ್ತದವರೆಗೆ ಪಥ ಸಂಚಲನ ನಡೆಯಿತು.

Police-Route-March-in-Shimoga-city.

ಇದನ್ನೂ ಓದಿ » ಜೋಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ, ಜಲಪಾತದ ಮುಂದೆ ಸೆಲ್ಫಿ, ಫೋಟೊಗೆ ಪೋಸ್‌

ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಎ.ಜಿ.ಕಾರ್ಯಪ್ಪ, ಎಸ್.ರಮೇಶ್‌ ಕುಮಾರ್‌, ಡಿವೈಎಸ್‌ಪಿಗಳು, ಇನ್ಸ್‌ಪೆಕ್ಟರ್‌ಗಳು, ಸಬ್‌ ಇನ್ಸ್‌ಪೆಕ್ಟರ್‌ಗಳು ಭಾಗವಹಿಸಿದ್ದರು.

Police-Route-March-in-Shimoga-city.

Police-Route-March-in-Shimoga-city.

Police-Route-March-in-Shimoga-city.

Police Route March in Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment