ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಅಕ್ಟೋಬರ್ 2021
ಒಂದೆಡೆ ಅಕಾಲಿಕ ಮಳೆಯಿಂದಾಗಿ ಸಂಕಷ್ಟ. ಮತ್ತೊಂದೆಡೆ ಸ್ಮಾರ್ಟ್ ಸಿಟಿ ಗುಂಡಿಗಳಿಂದ ಪ್ರಾಣ ಸಂಕಟ. ಈ ರಾತ್ರಿ ಶಿವಮೊಗ್ಗ ನಗರದ ಜನರು ಎದುರಿಸಿದ ಪ್ರಮುಖ ಸವಾಲುಗಳಿವು.
ಇದನ್ನು ಓದಿ | ಶಿವಮೊಗ್ಗದಲ್ಲಿ ಭಾರಿ ಮಳೆ, ಮನೆ ಸೇರಲು ಜನರ ಸರ್ಕಸ್, ವ್ಯಾಪಾರಿಗಳಿಗೆ ಸಂಕಷ್ಟ, ಹಲವೆಡೆ ಕರೆಂಟ್ ಕಟ್
ಭಾರಿ ಮಿಂಚು, ಗುಡುಗು ಸಹಿತ ದಿಢೀರ್ ಮಳೆಯಿಂದಾಗಿ ಜನರು ತತ್ತರಿಸಿ ಹೋದರು. ಬಿಡುವು ಕೊಡದೆ ಮಳೆ ಸುರಿಯಿತು. ಮಳೆ ಪ್ರಮಾಣ ಕೊಂಚ ಕಡಿಮೆಯಾಗುತ್ತಿದ್ದಂತೆ ವಾಹನಗಳಲ್ಲಿ ಜನರು ಮನೆ ಕಡೆಗೆ ಹೊರಟಾಗ ಸ್ಮಾರ್ಟ್ ಸಿಟಿ ಗುಂಡಿಗಳನ್ನು ಎದುರಿಸುವುದೆ ಕಷ್ಟಕರವಾಯಿತು.
ರಸ್ತೆಯೋ, ಗುಂಡಿಯೋ ಗೊಂದಲ
ಪ್ರತಿನಿತ್ಯ ಓಡಾಡುವ ರಸ್ತೆಯಲ್ಲೂ ವಾಹನ ಚಲಾಯಿಸಲು ಜನರು ಹೆದರಿದರು. ರಸ್ತೆ ಯಾವುದು, ಗುಂಡಿ ಎಲ್ಲಿದೆ ಅನ್ನುವುದನ್ನು ಅಂದಾಜು ಮಾಡಲು ಹರಸಾಹಸ ಪಡಬೇಕಾಯ್ತು. ಸ್ವಲ್ಪ ಯಾಮಾರಿದರೂ ವಾಹನಗಳು ಗುಂಡಿಯಲ್ಲಿ ಸಿಕ್ಕಿಬೀಳುತ್ತವೆ. ದ್ವಿಚಕ್ರ ವಾಹನ ಸವಾರರ ಪಾಲಿಗಂತೂ ರಸ್ತೆ ದಾಟುವುದೇ ಹರಸಾಹಸದ ಕಾರ್ಯವಾಗಿತ್ತು.
ಮುಖ್ಯ ರಸ್ತೆಗಳೇ ಜಲಾವೃತ
ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಪ್ರಮುಖ ರಸ್ತೆಗಳಲ್ಲೂ ದೊಡ್ಡ ದೊಡ್ಡ ಗುಂಡಿ ತೆಗೆಯಲಾಗಿದೆ. ಅಲ್ಲದೆ ಚರಂಡಿ ಕಾರ್ಯವು ಪೂರ್ಣಗೊಂಡಿಲ್ಲ. ಹಾಗಾಗಿ ಕಾಮಗಾರಿ ನಡೆಯುತ್ತಿರುವ ಪ್ರಮುಖ ರಸ್ತೆಗಳು ಮಳೆಯಿಂದ ಜಲಾವೃತವಾಗಿದ್ದವು. ಮಳೆ ಕೊಂಚ ತಗ್ಗಿದಾಗ ಮನೆ ಸೇರಬೇಕು ಅಂದುಕೊಂಡವರಿಗೆ ಸ್ಮಾರ್ಟ್ ಸಿಟಿ ಗುಂಡಿ ಯಮಸ್ವರೂಪಿಯಾಗಿ ಕಾಡಿದವು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422