ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 16 ಡಿಸೆಂಬರ್ 2019
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಖಡಕ್ ಸೂಚನೆ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ಇರುವ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಹಲವು ವರ್ಷಗಳಿಂದ ಬಾಯ್ತೆರೆದಿದ್ದ ಬೃಹತ್ ಗುಂಡಿಗಳಿಗೂ ಮುಕ್ತಿ ಸಿಕ್ಕಂತಾಗಿದೆ.
ತೇಪೆ ಕಾರ್ಯ ಪ್ರಗತಿಯಲ್ಲಿದೆ
ಕಳೆದ ಆರು ತಿಂಗಳಿಂದ ಈಚೆಗೆ ಶಿವಮೊಗ್ಗ ನಗರದಾದ್ಯಂತ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಕೆಲವು ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಾಯ್ತೆರೆದಿವೆ. ಗುಂಡಿ ಮುಚ್ಚುವಂತೆ ಸಾಲು ಸಾಲು ಪ್ರತಿಭಟನೆಗಳು ನಡೆದಿದ್ದವು. ಈಗ ಎಲ್ಲ ರಸ್ತೆಗಳಲ್ಲು ತೇಪೆ ಕಾರ್ಯ ಪ್ರಗತಿಯಲ್ಲಿದೆ. ಭಾನುವಾರದಿಂದ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದೆ. ಇದೇ ವೇಳೆ ಹಲವು ವರ್ಷದಿಂದ ಬಾಯ್ತೆರೆದಿದ್ದ ಗುಂಡಿಗಳು ಬಂದ್ ಆಗಿವೆ.
ಕಮಿಷನರ್ ಗಡುವಿಗೆ ಕ್ಯಾರೆ ಇಲ್ಲ
ಗುಂಡಿ ಮುಚ್ಚುವಂತೆ ಕಮಿಷನರ್ ಗಡುವು ನೀಡಿದ್ದರು. ಮಹಾನಗರ ಪಾಲಿಕೆ ಕಮಿನಷರ್ ಚಿದಾನಂದ ವಟಾರೆ ಅವರು ನವೆಂಬರ್ 30ರೊಳಗೆ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಗಡುವು ಮುಗಿದರು ಗುಂಡಿಗಳು ಬಾಯ್ತೆರೆದು ಕೂತಿದ್ದವು. ಅಪಘಾತಗಳು ಸಂಭವಿಸುತ್ತಿದ್ದವು.
ಗುಂಡಿಗಳ ವಿರುದ್ಧ ಮಿನಿಸ್ಟರ್ ಗುಟುರು
ಕಮಿನಷರ್ ಕೊಟ್ಟ ಗಡುವು ಮುಗಿದರು ಗುಂಡಿಗಳು ಬಂದ್ ಆಗಿರಲಿಲ್ಲ. ಸ್ಮಾರ್ಟ್ ಸಿಟಿ ಪ್ರಗತಿ ಪರಿಶೀಲನೆಗೆ ಇತ್ತೀಚೆಗೆ ನಡೆದ ಸಭೆ ವೇಳೆ ರಸ್ತೆ ಗುಂಡಿಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಕೂಡಲೇ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಡಿಸೆಂಬರ್ 31ರ ಒಳಗೆ ಗುಂಡಿ ಮುಚ್ಚುವಂತೆ ಸೂಚಿಸಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
After District In charge Minister KS Eshwarappa’s instruction Potholes are being closed in Shimoga city the Mahanagara Palike Officers.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422