ಶಿವಮೊಗ್ಗ: ಕೊನೆಗೂ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪ್ರೀ ಪೇಯ್ಡ್ (Pre Paid) ಆಟೋ ವ್ಯವಸ್ಥೆ ಜಾರಿಗೆ ಬಂದಿದೆ. ಯದ್ವ ತದ್ವ ಹಣ ವಸೂಲಿ ಮಾಡುತ್ತಿದ್ದ ಕೆಲವು ಆಟೋ ಚಾಲಕರಿಗೆ ಮೂಗು ದಾರ ಬಿದ್ದಂತಾಗಿದೆ. ಪೊಲೀಸರ ಈ ಕ್ರಮದಿಂದಾಗಿ ಸದ್ಯ ನಾಗರಿಕರು ನಿರಾಳವಾಗಿದ್ದಾರೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಪ್ರೀ ಪೇಯ್ಡ್ ಆಟೋ ವ್ಯವಸ್ಥೆಗೆ ಬಹು ವರ್ಷದಿಂದ ಬೇಡಿಕೆ ಇತ್ತು. ಈಗ ಈ ವ್ಯವಸ್ಥೆ ಜಾರಿಗೆ ಬಂದಿದ್ದು ರೈಲ್ವೆ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಪ್ರಯಾಣಿಕರು ಸೀದ ಈ ಕೌಂಟರ್‌ಗಳತ್ತ ಆಗಮಿಸಿ ರಶೀದಿ ಪಡೆದು ಖುಷಿಯಿಂದ ಆಟೋ ಹತ್ತುತ್ತಿದ್ದಾರೆ.
ಹೇಗಿದೆ ಪ್ರೀ ಪೇಯ್ಡ್ ಆಟೋ ವ್ಯವಸ್ಥೆ?
ರೈಲ್ವೆ ನಿಲ್ದಾಣದಿಂದ ವಿವಿಧ ಬಡಾವಣೆಗಳಿಗೆ ತೆರಳಲು ಆಟೋ ಚಾಲಕರು ನಿಗದಿಗಿಂತಲು ಹೆಚ್ಚು ಹಣ ಪಡೆಯುತ್ತಿದ್ದರು. ಲಗೇಜು, ಕುಟುಂಬ ಸಹಿತ ಬಂದವರು, ತುರ್ತು ತೆರಳಬೇಕಿರುವವರು ಅನಿವಾರ್ಯವಾಗಿ ದುಬಾರಿ ಹಣ ಕೊಟ್ಟು ಆಟೋ ಹತ್ತುವಂತಾಗಿತ್ತು. ಹಾಗಾಗಿಯೆ ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಮಾಡುವಂತೆ ಬಹು ವರ್ಷದಿಂದ ಸಾರ್ಜನಿಕರು ಬೇಡಿಕೆ ಇಡುತ್ತಿದ್ದರು.
ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಜಾರಿ, ಇಲ್ಲಿದೆ ಪಾಯಿಂಟ್ಸ್
- ರೈಲ್ವೆ ನಿಲ್ದಾಣದ ಆವರಣದಲ್ಲಿ ಎರಡು ಬದಿಯಲ್ಲಿ ಪ್ರೀ ಪೇಯ್ಡ್ ಆಟೋ ಕೌಂಟರ್ ಆರಂಭಿಸಲಾಗಿದೆ. ಪ್ರಯಾಣಿಕರು ರೈಲು ಇಳಿದು ಈ ಕೌಂಟರ್‌ಗಳಿಗೆ ತೆರಳಿ ರಶೀದಿ ಪಡೆಯಬಹುದು.
- ಸದ್ಯ ರಶೀದಿ ನೀಡಲು ಹೋಂ ಗಾರ್ಡ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರಯಾಣಿಕರು ಪ್ರೀ ಪೇಯ್ಡ್ ಕೌಂಟರ್‌ಗೆ ತೆರಳಿ ತಾವು ತೆರಳಬೇಕಿರುವ ಸ್ಥಳದ ಹೆಸರು ತಿಳಿಸಬೇಕು.
- ಹೋಂ ಗಾರ್ಡ್ ಸಿಬ್ಬಂದಿ ರಶೀದಿ ನೀಡಲಿದ್ದಾರೆ. ಅದರಲ್ಲಿ ನಿಗದಿತ ಮೊತ್ತ ಮುದ್ರಿತವಾಗಿರಲಿದೆ. ಆಟೋ ಇಳಿಯುವಾಗ ಅಷ್ಟು ಮೊತ್ತವನ್ನು ನೀಡಬೇಕು. ಆಟೋ ಚಾಲಕರು ನಿಗದಿಗಿಂತಲು ಹೆಚ್ಚು ಹಣ ಕೇಳಿದರೆ ಕಂಟ್ರೋಲ್ ರೂಂ ನಂಬರ್‌ಗೆ ಕರೆ ಮಾಡಬಹುದಾಗಿದೆ.
ಇಲ್ಲಿದೆ ವಿಡಿಯೋ
ಈ ಮೊದಲು ರೈಲ್ವೆ ನಿಲ್ದಾಣದ ಮುಂಭಾಗ ಯದ್ವತದ್ವ ಆಟೋ ನಿಲ್ಲಿಸಿ ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡಲಾಗುತ್ತಿತ್ತು. ಈಗ ಅದೆಲ್ಲಕ್ಕದಕ್ಕು ಬ್ರೇಕ್ ಬಿದ್ದಿದೆ. ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಜಾರಿಗೊಳಿಸಿ ಮನಸೋಯಿಚ್ಛೆ ಹಣ ವಸೂಲಿಗು ಪೊಲೀಸರು ತಡೆಯೊಡ್ಡಿದ್ದರೆ.
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ದೀಪಾವಳಿ ಮೆರಗು ಹೆಚ್ಚಿಸಿದ ಅಂಟಿಗೆ ಪಂಟಿಗೆ
Pre Paid
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






