ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 7 ಜನವರಿ 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವೀಕೆಂಡ್ ಕರ್ಫ್ಯೂ ಸಂದರ್ಭ ಕೆಎಸ್ಆರ್’ಟಿಸಿ ಬಸ್’ಗಳ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಜಿಲ್ಲೆಯ ಜೀವನಾಡಿಯಾಗಿರುವ ಖಾಸಗಿ ಬಸ್’ಗಳು ಕೂಡ ರಸ್ತೆಗಿಳಿಯಲಿವೆ.
ಖಾಸಗಿ ಬಸ್ ಮಾಲೀಕರು, ನೌಕರರ ಪಾಲಿಗೆ ವೀಕೆಂಡ್ ಕರ್ಫ್ಯೂ ದೊಡ್ಡ ಆಘಾತ ನೀಡಿದೆ. ಕರ್ಫ್ಯೂ ಸಂದರ್ಭ ಬಸ್ಸುಗಳನ್ನು ರಸ್ತೆಗಿಳಿಸಬೇಕೋ, ಬೇಡವೊ ಎಂದು ಮಾಲೀಕರಿಗೆ ಗೊಂದಲವಾಗಿದೆ. ಈ ನಡುವೆ ನಷ್ಟದಲ್ಲಿರುವ ಉದ್ಯಮಕ್ಕೆ ವೀಕೆಂಡ್ ಕರ್ಫ್ಯೂ ಎಂಬುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಶಿವಮೊಗ್ಗ ಸಿಟಿ ಬಸ್ ಕಥೆ ಏನು?
ಸಿಟಿ ಬಸ್ಸುಗಳು ಶಿವಮೊಗ್ಗದ ಜೀವನಾಡಿಯಾಗಿವೆ. ನಗರದಲ್ಲಿ 68 ಖಾಸಗಿ ಸಿಟಿ ಬಸ್ಸುಗಳಿವೆ. ವೀಕೆಂಡ್ ಕರ್ಫ್ಯೂ ಸಂದರ್ಭ ಜನ ಸಂಚಾರವಿದ್ದರೆ ಬಸ್ಸುಗಳನ್ನು ರಸ್ತೆಗಿಳಿಸಲು ಸಿಟಿ ಬಸ್ ಮಾಲೀಕರು ಯೋಚಿಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿ ಸಿಟಿ ಬಸ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ರುದ್ರೇಶ್ ಅವರು, ‘ಜನರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡಬಾರದು ಎಂದು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಜನ ಬರದಿದ್ದರೆ ಬಸ್ಸುಗಳು ರಸ್ತೆಗಿಳಿಸುವುದು ಕಷ್ಟ. ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನಿಸುತ್ತೇವೆ’ ಎಂದು ತಿಳಿಸಿದರು.
ವೀಕೆಂಡ್ ಕರ್ಫ್ಯೂ ಸಂದರ್ಭ ಕೆಎಸ್ಆರ್’ಟಿಸಿ ಬಸ್ಸುಗಳ ಸಂಚಾರಕ್ಕೆ ಸರ್ಕಾರ ಸಮ್ಮತಿ ಸೂಚಿಸಿದೆ. ಹಾಗಾಗಿ ಕೆಎಸ್ಆರ್’ಟಿಸಿಯ 12 ನಗರ ಸಾರಿಗೆ ಬಸ್ಸುಗಳು ರಸ್ತೆಗಿಳಿಯಬಹುದಾಗಿದೆ.
ಖಾಸಗಿ ಬಸ್ಸುಗಳು ಸಂಚಾರ ಇರುತ್ತಾ?
ವೀಕೆಂಡ್ ಕರ್ಫ್ಯೂ ಸಂದರ್ಭ ಖಾಸಗಿ ಬಸ್’ಗಳು ಸಂಚಾರ ನಡೆಸಲಿವೆ. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಖಾಸಗಿ ಬಸ್’ಗಳು ರಸ್ತೆಗಿಳಿಯಲಿವೆ.
ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಮಾಲೀಕ ರಂಗಪ್ಪ, ‘ಬಸ್ ಓಡಿಸಲು ನಾವು ಸಿದ್ಧರಿದ್ದೇವೆ. ಪ್ರಯಾಣಿಕರ ಅನುಗುಣವಾಗಿ ಬಸ್ ಸಂಚಾರ ನಡೆಯಲಿದೆ’ ಎಂದು ತಿಳಿಸಿದರು.
ಶಿವಮೊಗ್ಗದಿಂದ ವಿವಿಧ ಊರುಗಳು, ತಾಲೂಕು, ಜಿಲ್ಲೆಗಳಿಗೆ ನಿತ್ಯ ಆರು ನೂರಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುತ್ತವೆ.
ಗಾಯದ ಮೇಲೆ ಬರೆ ಎಳೆದ ಕರ್ಫ್ಯೂ
ಕರೋನ ಲಾಕ್ ಡೌನ್’ನಿಂದಾಗಿ ಎರಡು ವರ್ಷದಿಂದ ಖಾಸಗಿ ಬಸ್ ಮಾಲೀಕರು, ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ಷುರೆನ್ಸ್, ರೋಡ್ ಟ್ಯಾಕ್ಸ್, ಬಸ್ ರಿಪೇರಿ ಖರ್ಚು, ವೆಚ್ಚಕ್ಕೂ ಬಸ್ ಮಾಲೀರು ಪರದಾಡುವಂತಾಗಿದೆ. ಹಲವರು ಬಸ್ಸುಗಳನ್ನ ನಿಲ್ಲಿಸಿದ್ದು ಮತ್ತೆ ರಸ್ತೆಗಿಳಿಸಿಲ್ಲ.
ಇತ್ತೀಚೆಗಷ್ಟೆ ಖಾಸಗಿ ಬಸ್ ಉದ್ಯಮ ಚೇತರಿಕೆ ಕಾಣುತ್ತಿತ್ತು. ಈಗ ವೀಕೆಂಡ್ ಕರ್ಫ್ಯೂನಿಂದಾಗಿ ಉದ್ಯಮಕ್ಕೆ ಬರೆ ಬದ್ದ ಹಾಗೆ ಆಗಿದೆ. ನಿತ್ಯದ ಡಿಸೇಲ್ ಖರ್ಚು, ವಾಹನ ನಿರ್ವಹಣೆ, ಸಿಬ್ಬಂದಿ ವೇತನ ಕೊಟ್ಟುಕೊಂಡು ಬಸ್ಸುಗಳನ್ನು ರಸ್ತೆಗಿಳಿಸುವುದು ಸವಾಲಿನ ಕೆಲಸವಾಗಿದೆ ಎಂದು ಮಾಲೀಕರು ನೋವು ತೋಡಿಕೊಳ್ಳುತ್ತಿದ್ದಾರೆ.