ಶಿವಮೊಗ್ಗದಲ್ಲಿ ಹಾಡು, ಪದ್ಯಗಳ ಮೂಲಕ ಕನ್ನಡ ಭಾಷೆಯ ಶ್ರೀಮಂತಿಗೆ ಪರಿಚಯಿಸಿದ ಪ್ರೊ.ಕೃಷ್ಣೇಗೌಡ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 30 ಮಾರ್ಚ್ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಕನ್ನಡ ಭಾಷೆಗೆ ಶಿವಮೊಗ್ಗದಲ್ಲಿ ಅಪಾಯ ಎದುರಾದರೆ ರಾಜ್ಯದಲ್ಲಿಯು ಅಪಾಯ ಉಂಟಾಗಿದೆ ಎಂದರ್ಥ ಎಂದು ಸಾಹಿತಿ, ದೂರದರ್ಶನ ಕಲಾವಿದ ಪ್ರೊ. ಕೃಷ್ಣೇಗೌಡ ಹೇಳಿದರು.

ಶಿವಮೊಗ್ಗದ ಸಾಹಿತ್ಯ ಗ್ರಾಮದಲ್ಲಿ 16ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ.ಕೃಷ್ಣೇಗೌಡ ಅವರು, ಮೈಸೂರು ಜಿಲ್ಲೆ ಸಾಂಸ್ಕೃತಿಕ ರಾಜಧಾನಿ. ಅಂತೆಯೆ ಶಿವಮೊಗ್ಗ ಜಿಲ್ಲೆ ಸಾಹಿತ್ಯದ ರಾಜಧಾನಿ. ಇಲ್ಲಿ ಕನ್ನಡದ ಭಾಷೆಗೆ ಅಪಾಯ ಉಂಟಾದರೆ, ರಾಜ್ಯದಲ್ಲಿ ಅಪಾಯ ಎದುರಾಗಿದೆ ಎಂದರ್ಥ ಎಂದು ತಿಳಿಸಿದರು.

prof krishnegowda in kannada sahitya sammelana

30 ಶ್ರೀಮಂತ ಭಾಷೆಗಳಲ್ಲಿ ಕನ್ನಡ

ಭಾಷೆ ಅಂದಮೇಲೆ ಹಾಡು, ಕತೆ, ಸಾಹಿತ್ಯ ಇರಬೇಕು. ಕನ್ನಡ ಸಮೃದ್ಧ ಭಾಷೆ. ಇದರಲ್ಲಿ ಎಲ್ಲವೂ ಇದೆ. ಬರೆದಿದ್ದನ್ನೆ ಇಲ್ಲಿ ಓದುತ್ತೇವೆ. ಆದರೆ ಇಂಗ್ಲೀಷ್ ಹಾಗಲ್ಲ. ಜಾರ್ಜ್ ಬರ್ನಾರ್ಡ್ ಷಾ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಜಗತ್ತಿನ 30 ಶ್ರೀಮಂತ ಭಾಷೆಗಳ ಪಟ್ಟಿ ಸಿದ್ಧಪಡಿಸಿದರೆ ಅಲ್ಲಿ ಕನ್ನಡವು ಇರುತ್ತದೆ. ಅಮೆರಿಕಾ ಭಾಷಾಶಾಸ್ತ್ರ ಅಧ್ಯಯನ ಸಂಸ್ಥೆಯೊಂದು ಇದನ್ನು ಹೇಳಿದೆ ಎಂದು ಪ್ರೊ.ಕೃಷ್ಣೇಗೌಡ ಅವರು ತಿಳಿಸಿದರು.

ದ್ವೀಪದ ಭಾಷೆ ಜಗತ್ತಿನ ಭಾಷೆಯಾಯ್ತು

ಇಂಗ್ಲೀಷ್ ಒಂದು ದ್ವೀಪದ ಭಾಷೆ. ಆದರೆ ಇಂಗ್ಲೀಷರು ಅದನ್ನು ಜಗತ್ತಿನ ಭಾಷೆಯಾಗಿಸಿದರು. ನಮ್ಮ ಹಿರಿಯರು ಕನ್ನಡ ಭಾಷೆಯನ್ನು ಸಮೃದ್ಧವಾಗಿ ಬೆಳೆಸಿದ್ದಾರೆ. ಆದರೆ ನಾವು ಕನ್ನಡವನ್ನು ಬಳಸುವುದಕ್ಕೆ ಹಿಂಜರಿಯುತ್ತಿದ್ದೇವೆ. ನಾವು ಚಿಕ್ಕವರಿದ್ದಾಗ ನಮ್ಮೂರಿನ ಒಳಗೆ ಇಂಗ್ಲೀಷ್ ಭಾಷೆಯನ್ನು ಬಿಟ್ಟುಕೊಂಡಿರಲಿಲ್ಲ. ಈಗ ಹುಡುಗರೆಲ್ಲ ಇಂಗ್ಲೀಷ್ ಬಳಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಫೈವ್ ಸ್ಟಾರ್ ಹೊಟೇಲ್

ಇಂಗ್ಲೀಷ್ ಕಲಿತರೆ ಬದುಕು ಸುಲಭ ಎಂಬ ಭಾವನೆ ಹಲವರಲ್ಲಿದೆ. ಇಂಗ್ಲೀಷ್ ಕಲಿತರೆ ಪ್ರಪಂಚದಲ್ಲಿ ಬದುಕಬಹುದಲ್ಲವೆ ಎಂದು ಪ್ರಶ್ನಿಸುತ್ತಾರೆ. ಅನೇಕ ಫೈವ್ ಸ್ಟಾರ್ ಹೊಟೇಲ್ ನಡೆಸುವವರಿಗೆ ಇಂಗ್ಲೀಷ್ ಭಾಷೆ ಬರುವುದಿಲ್ಲ. ಆದರೆ ದುಡ್ಡು ಕೊಟ್ಟರೆ ಇಂಗ್ಲಿಷ್ ಭಾಷೆ ಮಾತನಾಡುವವರು ಬರುತ್ತಾರೆ ಎಂದು ಅವರು ಹೇಳುತ್ತಾರೆ ಎಂದರು.

ಮಕ್ಕಳಿಗೆ ಜನರ ಧ್ವನಿ ಕೇಳಿಸಬೇಕು

ಮಕ್ಕಳಿಗೆ ಜನರ ಧ್ವನಿ ಕೇಳಿಸಬೇಕು. ಒಂದು ವೇಳೆ ಜನರ ಧ್ವನಿ ಕೇಳದಿದ್ದರೆ ಕಣ್ಣು, ಕಿವಿಗಳಿಗೆ ಸ್ಮರಣೆಗಳಿರುವುದಿಲ್ಲ. ಸೂಕ್ಷ್ಮತೆಗಳು ಗೊತ್ತಾಗುವುದಿಲ್ಲ. ಈಗಿನ ಕಾರುಗಳಲ್ಲಿ ಒಳಗೆ ಕುಳಿತು ಗಾಜು ಏರಿಸಿಕೊಂಡರೆ ಹೊರಗಿನ ಧ್ವನಿಯೇ ಕೇಳಿಸುವುದಿಲ್ಲ. ಹೀಗೆ ಮಕ್ಕಳನ್ನು ಬೆಳೆಸಬಾರದ ಎಂದು ಪ್ರೊ.ಕೃಷ್ಣೇಗೌಡ ಅವರು ತಿಳಿಸಿದರು.

ಹಾಡು, ಪದ್ಯಕ್ಕೆ ಧ್ವನಿಯಾದ ಸಭೀಕರು

ಇನ್ನು, ಭಾಷಣದುದ್ದಕ್ಕೂ ಪ್ರೊ.ಕೃಷ್ಣೇಗೌಡ ಅವರು ಪದ್ಯಗಳು, ಹಳೆಯ ಚಿತ್ರಗೀತೆಗಳನ್ನು ಹಾಡಿದರು. ಈ ಮೂಲಕ ಕನ್ನಡ ಭಾಷೆಯ ಶ್ರೀಮಂತಿಗೆ, ಸಮೃದ್ಧತೆಯನ್ನು ಪರಿಚಿಯಿಸಿದರು. ಕೆಲವು ಹಾಡುಗಳಿಗೆ ಸಭೀಕರು ಕೂಡ ಧ್ವನಿಗೂಡಿಸಿದರು.

ಇದನ್ನೂ ಓದಿ | ಶಿವಮೊಗ್ಗದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ, ಗೋಪಾಳದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ

Prof Krishnegowda in Shimoga

Shimoga Nanjappa Hospital

Prof Krishnegowda in shimoga

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment