ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 4 MAY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೆಗ್ಗಾನ್ ಆಸ್ಪತ್ರೆಯಲ್ಲಿನ ಕರೋನ ಸೋಂಕಿತರ ಸಂಬಂಧಿಗಳು ಇವತ್ತು ದಿಢೀರ್ ಪ್ರತಿಭಟನೆ ನಡೆಸಿದರು. ಆಸ್ಪತ್ರೆ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಎಲ್ಲರನ್ನು ಹೊರಗೆ ಕಳುಹಿಸಿದರು
ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರ ಆರೈಕೆಗೆ ಈವರೆಗೂ ಸಂಬಂಧಿಯೊಬ್ಬರನ್ನು ಬಿಡಲಾಗುತ್ತಿತ್ತು. ಪಿಪಿಇ ಕಿಟ್ ಧರಿಸಿಕೊಂಡು ಸಂಬಂಧಿಗಳು ವಾರ್ಡ್ನ ಒಳಗೆ ಹೋಗಬಹುದಾಗಿದೆ. ಆದರೆ ಇವತ್ತು ಮಧ್ಯಾಹ್ನ ಸೋಂಕಿತರ ಜೊತೆಗಿದ್ದ ಸಂಬಂಧಿಗಳನ್ನು ದಿಢೀರನೆ ವಾರ್ಡಿನಿಂದ ಹೊರಗೆ ಕಳುಹಿಸಲಾಗಿದೆ.
ಸಂಬಂಧಿಗಳ ಆರೋಪ ಏನು?
ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾಗಿ ಆರೈಕೆ ಮಾಡುತ್ತಿಲ್ಲ. ಔಷಧೋಪಚಾರವು ಸರಿಯಾಗಿಲ್ಲ. ಮನೆಯವರೊಬ್ಬರು ಇದ್ದರೆ ಎಲ್ಲವು ಸರಿಯಾಗಿ ನಡೆಯಲಿದೆ. ಈಗ ಎಲ್ಲರನ್ನು ದಿಢೀರನೆ ಹೊರಗೆ ಕಳುಹಿಸಿ, ನಮ್ಮವರ ಜೀವಕ್ಕೆ ಕುತ್ತು ತರುವ ಪ್ರಯತ್ನ ನಡೆಯತ್ತಿದೆ ಎಂದು ಆರೋಪಿಸಿದರು. ಸಂಬಂಧಿಗಳ ಆಕ್ರೋಶದ ವಿಡಿಯೋ ಇಲ್ಲದೆ.
ಎಮರ್ಜನ್ಸಿ ವಾರ್ಡ್ ಬಳಿ ಪ್ರತಿಭಟನೆ
ರೋಗಿಗಳ ಸಂಬಂಧಿಗಳು ಎಮರ್ಜನ್ಸಿ ವಾರ್ಡ್ ಕಡೆ ಇರುವ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದರು. ತಮ್ಮನ್ನು ವಾರ್ಡ್ನ ಒಳಗೆ ಬಿಡಬೇಕು ಎಂದು ಆಗ್ರಹಿಸಿದರು. ವಿಚಾರ ತಿಳಿಯುತ್ತಿದ್ದಂತೆ ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ರೋಗಿಗಳ ಸಂಬಂಧಿಗಳನ್ನು ಸಮಾಧಾನಪಡಿಸಿದರು.
ಆಸ್ಪತ್ರೆ ಆಡಳಿತ ತಮ್ಮನ್ನು ಒಳಗೆ ಬಿಡಬೇಕು. ಇಲ್ಲವಾದಲ್ಲಿ ತಮ್ಮ ಸಂಬಂಧಿಗಳ ಜೀವಕ್ಕೆ ತೊಂದರೆಯಾದರೆ ಆಡಳಿತವೆ ಹೊಣೆ ಎಂದು ಎಚ್ಚರಿಸಿದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]