
ಶಿವಮೊಗ್ಗ ಲೈವ್.ಕಾಂ |SHIMOGA NEWS | 25 NOVEMBER 2020
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಭದ್ರಾವತಿ ವಿಐಎಸ್‍ಎಲ್ ಖಾಸಗೀಕರಣದ ವಿರುದ್ಧ ಹೋರಾಟ ನಡೆಸಲು ವಿಐಎಸ್‍ಎಲ್ ಉಳಿಸಿ ಹೋರಾಟ ಸಮಿತಿ ರಚಿಸಲಾಗಿದೆ ಎಂದು ಕಾರ್ಖಾನೆಯ ಹಿರಿಯ ಕಾರ್ಮಿಕ ಮುಖಂಡ ಬಾಲಕೃಷ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲಕೃಷ್ಣ ಅವರು, ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ, ವಿಐಎಸ್‍ಎಲ್ ಸೊರಗಿದೆ. ಖಾಸಗೀಕರಣ ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸಲು ಸಮಿತಿ ರಚಿಸಲಾಗಿದೆ ಎಂದರು.
ಎಲ್ಲ ಪಕ್ಷದ ಮುಖಂಡರಿದ್ದಾರೆ
ವಿಐಎಸ್‍ಎಲ್ ಉಳಿಸಿ ಹೋರಾಟ ಸಮಿತಿಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಎಪಿ ಸೇರಿದಂತೆ ಸರ್ವ ಪಕ್ಷದ ಮುಖಂಡರು ಇರಲಿದ್ದಾರೆ. ಭದ್ರಾವತಿ ಶಾಸಕ ಸಂಗಮೇಶ್ವರ್ ಅವರು ಹೋರಾಟ ಸಮಿತಿಯ ಗೌರವ ಅಧ್ಯಕ್ಷರಾಗಿದ್ದಾರೆ ಎಂದರು.
ಮಾಲೀಕರಾರು ಅನ್ನುವುದನ್ನೇ ಹೇಳುತ್ತಿಲ್ಲ
ವಿಐಎಸ್‍ಎಲ್ ಕಾರ್ಖಾನೆ ಖರೀದಿಗೆ ಬರುತ್ತಿರುವುದು ಯಾರು ಅನ್ನುವುದನ್ನು ಗೌಪ್ಯವಾಗಿ ಇರಿಸಲಾಗಿದೆ. ಮಾಹಿತಿ ಹಕ್ಕಿನಲ್ಲಿ ಕೇಳದರೂ ಮಾಹಿತಿ ನೀಡುತ್ತಿಲ್ಲ. ಈಗ ಬರುತ್ತಿರುವವರು ಕಾರ್ಖಾನೆ ನಡೆಸುತ್ತಾರೋ, ರಿಯಲ್ ಎಸ್ಟೇಟ್ ದಂಧೆ ಮಾಡಲ ಬರುತ್ತಿದ್ದಾರೋ ಅನ್ನುವುದು ಗೊತ್ತಾಗುತ್ತಿಲ್ಲ ಎಂದು ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯ ವಿಡಿಯೋ ರಿಪೋರ್ಟ್
22 ಬಾರಿ ಸಂಸದರ ಮನೆಗೆ ಹೋಗಿದ್ದಾಯ್ತು
ಖಾಸಗೀಕರಣ ಬೇಡ ಎಂದು ಸಂಸದ ರಾಘವೇಂದ್ರ ಅವರ ಮನೆ, ಕಚೇರಿ, ದೆಹಲಿಯ ಕಚೇರಿಗೆಲ್ಲ ಭೇಟಿ ನೀಡಿ, ಮನವಿ ಕೊಟ್ಟಿದ್ದಾಯ್ತು. ಸುಮಾರು 400 ಪುಟಗಳ ಮನವಿ ನೀಡಿದ್ದೇವೆ. ಯಾವುದೆ ಪ್ರಯೋಜನವಾಗಿಲ್ಲ. ಕೇಂದ್ರ ಸಚಿವರನ್ನು ಕರೆಯಿಸಿ, ಆರು ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಭರವಸೆ ಕೊಡಿಸಿದ್ದರು. ಆದರೆ ಆರು ರುಪಾಯಿಯೂ ಬಂದಿಲ್ಲ ಎಂದರು.
ವಿಐಎಸ್ಎಲ್ ಕಾರ್ಮಿಕ ಸಂಘದ ಜಗದೀಶ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಚಂದ್ರೇಗೌಡ, ಜೆಡಿಎಸ್ ಅಧ್ಯಕ್ಷ ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಮಣಿಶೇಖರ್, ಅಜಿತ್ ಅಪ್ಪಾಜಿಗೌಡ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.


ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






