ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 13 DECEMBER 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಾರಿಗೆ ನೌಕರರ ಮುಷ್ಕರದ ವಿಚಾರದಲ್ಲಿ ಉಂಟಾದ ಗೊಂದಲದಿಂದ, ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸಂಕಷ್ಟಕ್ಕೀಡಾದರು. ಚಳಿಯ ನಡುವೆ, ಬಸ್ಸಿಗಾಗಿ ಕಾದು ಕಾದು ಹೈರಾಣಾದರು.
ಇದನ್ನೂ ಓದಿ | ಶಿವಮೊಗ್ಗ – ಭದ್ರಾವತಿ ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಜೀಪ್‌ನಲ್ಲಿ ಎಸ್ಕಾರ್ಟ್, ಏನಿದು ಎಸ್ಕಾರ್ಟ್? ಕಾರಣವೇನು?
ಏನಿದು ಗೊಂದಲ?
ಸಾರಿಗೆ ಇಲಾಖೆ ನೌಕರರು ಸರ್ಕಾರದ ಜೊತೆಗೆ ಮಾತುಕತೆ ನಡೆಸಿದರು. ಸಭೆ ಬಳಿಕ ಮುಷ್ಕರ ಕೈ ಬಿಡುವುದಾಗಿ ತಿಳಿಸಿದರು. ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ, ಪ್ರಯಾಣಿಕರು ಬಸ್ ನಿಲ್ದಾಣದ ಕಡೆಗೆ ಬರಲು ಆರಂಭಿಸಿದರು. ಕೆಲವು ಬಸ್ಸುಗಳು ನಿಲ್ದಾಣಕ್ಕೆ ಆಗಮಿಸಿದವು. ಈ ವೇಳೆಗಾಗಲೆ ಹೇಳಿಕೆ ಬದಲಿಸಿದ ಸಾರಿಗೆ ಇಲಾಖೆ ನೌಕರರ ಸಂಘ ಪ್ರಮುಖರು, ಮುಷ್ಕರ ಮುಂದುವರೆಸುವುದಾಗಿ ಘೋಷಿಸಿದರು.
ಇದನ್ನೂ ಓದಿ | ನೌಕರರ ಮುಷ್ಕರ ಅಂತ್ಯ, ಶಿವಮೊಗ್ಗದಿಂದ ಹೊರಡಲು ಸಿದ್ಧವಾದವು ಸರ್ಕಾರಿ ಬಸ್ಸುಗಳು
ಬಸ್ ಸಿಗದೆ ಹೈರಾಣು
ಮುಷ್ಕರ ಮುಗಿದಿದೆ ಎಂದು ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರಿಗೆ ಶಾಕ್ ಉಂಟಾಯಿತು. ಬೆರಳೆಣಿಕೆಯಷ್ಟು ಬಸ್‍ಗಳು ಮಾತ್ರ ಇದ್ದವು. ಶಿವಮೊಗ್ಗದಿಂದ ಹೈದರಾಬಾದ್, ತಿರುವಣ್ಣಾಮಲೈ, ಬೆಂಗಳೂರು, ಮೈಸೂರು, ರಾಯಚೂರಿಗೆ ಬಸ್‍ಗಳು ಸಂಚರಿಸಿದವು. ಯಾವ ಬಸ್ಸು ಎಷ್ಟು ಹೊತ್ತಿಗೆ ಹೊರಡಲಿದೆ ಎಂಬುದು ಗೊತ್ತಾಗದೆ ಪ್ರಯಾಣಿಕರು ಸಂಕಷ್ಟಕ್ಕೀಡಾದರು.
ಇದನ್ನೂ ಓದಿ | ಸರ್ಕಾರಿ ಬಸ್ ಬಂದ್, ಶಿವಮೊಗ್ಗದಿಂದ ವಿವಿಧೆಡೆಗೆ ಖಾಸಗಿ ಬಸ್ ಸಂಚಾರ ಶುರು, ಎಲ್ಲಿಗೆಲ್ಲ ತೆರಳುತ್ತಿವೆ ಬಸ್ಸುಗಳು?
ಚಳಿ ನಡುವೆ ಕಾದು ಕೂತರು
ಒಂದೆಡೆ ತೀವ್ರ ಚಳಿ, ಮತ್ತೊಂದೆಡೆ ಬಸ್‍ಗಳ ಕುರಿತು ಅನಿಶ್ಚಿತತೆ. ಇದರಿಂದ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ. ಹೆಚ್ಚು ಬಸ್‍ಗಳು ರಸ್ತೆಗಿಳಿಯುವ ನಿರೀಕ್ಷೆಯೊಂದಿಗೆ ಪ್ರಯಾಣಿಕರು ನಿಲ್ದಾಣದಲ್ಲಿಯೇ ಕಾದು ಕುಳಿತಿದ್ದಾರೆ.
ವಿಡಿಯೋ ರಿಪೋರ್ಟ್ | ಕ್ಲಿಕ್ ಮಾಡಿ, ವಿಡಿಯೋ ನೋಡಿ
https://www.youtube.com/watch?v=kLGnKnksmEk&t=4s
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]