ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಮೇ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗಕ್ಕೆ ಕರೋನ ಹರಡದಂತೆ ತಡೆದ ಕರೋನ ವಾರಿಯರ್ಸ್ ಈಗ ಕ್ವಾರಂಟೈನ್ಗೆ ಒಳಗಾಗುವಂತಾಗಿದೆ. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಕೆಲವು ಇಲಾಖೆಯ ಸಿಬ್ಬಂದಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಪೊಲೀಸರನ್ನೇಕೆ ತಪಾಸಣೆಗೆ ಒಳಪಡಿಸಲಾಯ್ತು?
ಗುಜರಾತ್ನಿಂದ ಬಸ್ನಲ್ಲಿ ಬಂದಿದ್ದ ಸೋಂಕಿತರನ್ನು ಶಿವಮೊಗ್ಗದ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸಲಾಯಿತು. ಬಸ್ಸಿನಲ್ಲಿ ಬಂದವರು ಜಿಲ್ಲೆಯೊಳಗೆ ಎಲ್ಲಿಯೂ ಯಾರನ್ನು ಭೇಟಿಯಾಗದಂತೆ ತಡೆಯಲು ಪೊಲೀಸರು ಎಸ್ಕಾರ್ಟ್ ವ್ಯವಸ್ಥೆ ಮಾಡಿದ್ದರು. ಅವರನ್ನು ನೇರವಾಗಿ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣಕ್ಕೆ ಕರೆ ತಂದು ಸೋಂಕಿತರ ಆರೋಗ್ಯ ತಪಾಸಣೆ ನಡೆಸಿದರು. ಈ ವೇಳೆ ಬಂದೋಬಸ್ತ್ ನೋಡಿಕೊಂಡಿದ್ದ ಪೊಲೀಸ್ ಸಿಬ್ಬಂದಿ ಈಗ ಕ್ವಾರಂಟೈನ್ಗೆ ಒಳಗಾಗುವಂತಾಗಿದೆ. ಒಬ್ಬರು ಇನ್ಸ್ಪೆಕ್ಟರ್, ಒಬ್ಬರು ಸಬ್ಇನ್ಸ್ಪೆಕ್ಟರ್ ಸೇರಿ ಸುಮಾರು ಹತ್ತು ಮಂದಿ ಪೊಲೀಸ್ ಸಿಬ್ಬಂದಿಗೆ ಹೋಂ ಕ್ವಾರಂಟೈನ್ಗೆ ಸೂಚಿಸಲಾಗಿದೆ.
ಊಟ ಬಡಿಸಿದವರಿಗು ಕ್ವಾರಂಟೈನ್..!
ಸೋಂಕಿತ ತಬ್ಲಿಘಿಗಳನ್ನು ಪ್ರಾಥಮಿಕ ತಪಾಸಣೆಗೆ ಒಳಪಡಿಸಿದ್ದ ಸಿಬ್ಬಂದಿ ಮತ್ತು ಅಡುಗೆ ಮಾಡಿ ಬಡಿಸಿದವರು ಕ್ವಾರಂಟೈನ್ಗೆ ಒಳಗಾಗುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಸಹ್ಯಾದ್ರಿ ಕಾಲೇಜಿನಲ್ಲಿ ಸೋಂಕಿತರ ತಪಾಸಣೆ ನಡೆಸಲಾಗಿತ್ತು. ಇನ್ನು, ಒಂಭತ್ತು ಮಂದಿಯನ್ನು ಹಾಸ್ಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಹಾಸ್ಟೆಲ್ನ ವಾರ್ಡನ್, ಅಡುಗೆ ಮಾಡಿದ ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆಯಂತೆ.
ಪೊಲೀಸರು, ವಿವಿಧ ಇಲಾಖೆಯ ಸಿಬ್ಬಂದಿಗಳು ಸಣ್ಣದೊಂದು ನಿರ್ಲಕ್ಷ್ಯ ತೋರಿಸಿದ್ದರೂ, ದೊಡ್ಡ ಅನಾಹುತ ನಿಶ್ಚಿತವಾಗಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ಜನಕ್ಕೆ ಕರೋನ ಹರಡುವ ಸಾದ್ಯತೆ ಇತ್ತು. ಆದರೆ ಕರೋನ ವಾರಿಯರ್ಸ್ ಕರ್ತವ್ಯ ನಿಷ್ಠೆಯಿಂದಾಗಿ ಜಿಲ್ಲೆ ಸುರಕ್ಷಿತವಾಗಿದೆ. ಆದರೆ ಎಲ್ಲರನ್ನು ಸುರಕ್ಷಿತವಾಗಿರಿಸಿದ ಕರೋನ ವಾರಿಯರ್ಸ್ ಈಗ ಕ್ವಾರಂಟೈನ್ಗೆ ಒಳಗಾಗುವಂತಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]