ಶಿವಮೊಗ್ಗ ಲೈವ್.ಕಾಂ | SHIMOGA | 27 ಏಪ್ರಿಲ್ 2020
ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರೈಲ್ವೆ ಸೇತುವೆಯ ದುರಸ್ಥಿ ಕಾರ್ಯ ಆರಂಭವಾಗಿದೆ. ರೈಲು ಸಂಚಾರ ಇಲ್ಲದಿರುವುದರಿಂದ ಕೆಲಸ ವೇಗ ಮತ್ತು ನಿರಂತರವಾಗಿ ನಡೆಯುತ್ತಿದೆ. ಬೆಳಗಿನ ಹೊತ್ತು ಈ ದುರಸ್ಥಿ ಕಾರ್ಯನ್ನು ನೋಡಲು, ತುಂಗಾ ನದಿ ಸೇತುವೆ ಮೇಲೆ ಜನರ ಗುಂಪು ಸೇರುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನದಿಯ ನಡುವೆ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಬಾಕ್ಸ್ ಬ್ರಿಡ್ಜ್‌ಗಳನ್ನು ತಾತ್ಕಾಲಿಕ ರಸ್ತೆಗೆ ಇಳಿಸಲಾಗಿದೆ. ಅಲ್ಲಿಂದ ಕ್ರೇನ್ ಮೂಲಕ ಬಾಕ್ಸ್ ಬ್ರಿಡ್ಜ್ ಗಳನ್ನು ಪಿಲ್ಲರ್‌ಗಳ ಮೇಲೆ ಇರಿಸಲಾಗುತ್ತಿದೆ.
ದುರಸ್ಥಿ ಕಾರ್ಯ ನೋಡಲು ಜನವೋ ಜನ
ಇನ್ನು ದುರಸ್ಥಿ ಕಾರ್ಯವನ್ನು ನೋಡಲು ತುಂಗಾ ನದಿ ಸೇತುವೆ ಮೇಲೆ ಜನ ಸೇರುತ್ತಿದ್ದಾರೆ. ಲಾಕ್‌ಡೌನ್ ರಿಲೀಫ್ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಬರುವ ಜನರು, ಸೇತುವೆ ಮೇಲೆ ನಿಂತು ದುರಸ್ಥಿ ಕಾರ್ಯ ವೀಕ್ಷಿಸುತ್ತಿದ್ದಾರೆ. ಮೊಬೈಲ್‌ಗಳಲ್ಲಿ ವಿಡಿಯೋ, ಫೋಟೊ ತೆಗೆದುಕೊಳ್ಳುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]