ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 8 DECEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ವಿದ್ಯಾನಗರ ರೈಲ್ವೆ ಮೇಲ್ಸೇತುವೆ, ಬೆಕ್ಕೋಡಿ ಸೇತುವೆ (Bridge) ಕಾಮಗಾರಿಗಳ ಉದ್ಘಾಟನೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಆಹ್ವಾನಿಸಲಾಗುತ್ತಿದೆ. ಜನವರಿ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಕಾಮಗಾರಿಗಳ ಉದ್ಘಾಟನೆ ಮತ್ತು ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಾಘವೇಂದ್ರ ಪ್ರಮುಖ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.
ಸಂಸದ ರಾಘವೇಂದ್ರ ತಿಳಿಸಿದ 4 ಪ್ರಮುಖಾಂಶ
ಸೋಮವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಶಿವಮೊಗ್ಗಕ್ಕೆ ಆಹ್ವಾನಿಸಲಾಗುತ್ತಿದೆ. ಜನವರಿ ಮೊದಲ ವಾರ ಅಥವಾ ಎರಡನೇ ವಾರ ಅವರನ್ನು ಶಿವಮೊಗ್ಗಕ್ಕೆ ಕರೆಯಿಸುವ ಪ್ರಯತ್ನವಾಗಲಿದೆ.
ವಿದ್ಯಾನಗರ ರೈಲ್ವೆ ಮೇಲ್ಸೇತುವೆ, ಹೊಸನಗರ – ಕೊಲ್ಲೂರು ರಸ್ತೆಯ ಬೆಕ್ಕೋಡಿಯ ಮುಕ್ಕಾಲು ಕಿ.ಮೀ ಸೇತುವೆ ಮತ್ತು ಅದೇ ರಸ್ತೆಯ ಇನ್ನೊಂದು ಸೇತುವೆಗಳ (Bridge) ಉದ್ಘಾಟನೆಯಾಗಲಿದೆ. ಭದ್ರಾವತಿ – ಚನ್ನಗಿರಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಅಪ್‌ಗ್ರೇಡ್ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ.
ಇದನ್ನೂ ಓದಿ- ಶಿವಮೊಗ್ಗದಲ್ಲಿ ಲೋಕಸಭೆ ಚುನಾವಣೆ ಸಿದ್ಧತೆ ಆರಂಭ, ಅಧಿಕಾರಿಗಳಿಗೆ ತರಬೇತಿ
ಸಿಗಂದೂರು ಸೇತುವೆ ಕಾಮಗಾರಿ ಈ ಡಿಸೆಂಬರ್‌ಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಮುಂದಿನ ವರ್ಷದ ಡಿಸೆಂಬರ್‌ಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಹೊಳೆಯಲ್ಲಿ ನೀರು ಹೆಚ್ಚು ಅಥವಾ ಕಡಿಮೆಯಾದರೂ ಕಾಮಗಾರಿ ತಡವಾಗಲಿದೆ. ಕಾಮಗಾರಿಗೆ ಸಂಬಂಧಿಸಿದಂತೆ ಎಲ್ಲ ಉಪಕರಣಗಳನ್ನು ನೀರಿನಲ್ಲೆ ಸಾಗಿಸಬೇಕು. ಮಳೆ ಇಲ್ಲದೆ ನೀರಿನ ಮಟ್ಟ ಕಡಿಮೆ ಇದೆ. ಇದರಿಂದ ವಿಳಂಬವಾಗುತ್ತಿದ. ಶೇ.65 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಐದು ವರ್ಷದ ಲೋಕಸಭೆ ಅವಧಿ ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಅವಧಿಯಲ್ಲಿ ಆಗಿರುವ ಕಾಮಗಾರಿಗಳಿಗೆ ಫೈನಲ್ ಟಚ್ ಅಪ್ ನೀಡಲಾಗುತ್ತಿದೆ. ಆಕಾಶವಾಣಿ ಕೇಂದ್ರವನ್ನು ಅಪ್‌ಗ್ರೇಡ್ ಮಾಡಲಾಗುತ್ತಿದೆ. ಇದರಿಂದ ಇಲ್ಲಿನ ಎಫ್‌ಎಂ ಕೇಂದ್ರದ ಕಾರ್ಯಕ್ರಮ ತುಮಕೂರು ತನಕ ತಲುಪಲಿದೆ. ಇನ್ನು, ಬಿಎಸ್‌ಎನ್‌ಎಲ್ ಟವರ್ ಅಳವಡಿಕೆ ಕಾರ್ಯ ವೇಗ ಪಡೆಯಬೇಕಿದೆ. ಚುನಾವಣೆ ಮೊದಲು ಜಿಲ್ಲೆಯಲ್ಲಿ 100 ಟವರ್ ಉದ್ಘಾಟಿಸುವ ಗುರಿ ಇದೆ.