ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 26 MARCH 2024
SHIMOGA : ದುರ್ಗಿಗುಡಿಯ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಸೋಮವಾರ ರಥೋತ್ಸವ ಆಯೋಜಿಸಲಾಗಿತ್ತು.
ಸಾಮಾನ್ಯವಾಗಿ ರಥೋತ್ಸವಗಳು ಬೆಳಗ್ಗೆ ಅಥವಾ ಸಂಜೆ ಹೊತ್ತಿಗೆ ನಡೆಯುತ್ತವೆ. ಆದರೆ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವಿ ರಥೋತ್ಸವ ಮಧ್ಯಾಹ್ನ ನಡೆಯುವುದು ವಿಶೇಷ. ಭಕ್ತರು ದರ್ಶನ ಪಡೆಯಲು ಅನುವಾಗಲಿ ಎಂದು ರಾತ್ರಿ 11 ಗಂಟೆವರೆಗೆ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ರಥ ನಿಲ್ಲಿಸಲಾಗಿತ್ತು. ದೊಡ್ಡ ಸಂಖ್ಯೆ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಇನ್ನು, ರಥೋತ್ಸವದ ಸಂದರ್ಭ ಅನ್ನಸಂತರ್ಪಣೆ, ಮಜ್ಜಿಗೆ, ನೀರು, ಪಾನಕ ವಿತರಣೆ ಮಾಡಲಾಯಿತು. ದುರ್ಗಿಗುಡಿಯಲ್ಲಿ ರಥೋತ್ಸವದ ಬಳಿಕ ಶಿವಮೊಗ್ಗ ನಗರದಲ್ಲಿ ಹೋಳಿ ಹಬ್ಬ ಆಚರಿಸುವುದು ವಾಡಿಕೆ.
ಇದನ್ನೂ ಓದಿ – ಕೋಟೆ ಮಾರಿಕಾಂಬ ಜಾತ್ರೆ ಕುರಿತು ನಿಮಗೆಷ್ಟು ಗೊತ್ತು? ಇಲ್ಲಿದೆ 10 ಪ್ರಮುಖ ಪಾಯಿಂಟ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422