ಬೀದಿಗಿಳಿದ ಗೋಪಾಲಗೌಡ ಬಡಾವಣೆ ನಿವಾಸಿಗಳು, ನಿರ್ಧಾರ ಬದಲಿಸುವಂತೆ ತಾಕೀತು, ತೀವ್ರ ಹೋರಾಟದ ವಾರ್ನಿಂಗ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

Modern Concrete Shimoga

SHIVAMOGGA LIVE | 12 JULY 2023

SHIMOGA : ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಲು (Liquor store) ಅನುಮತಿ ನೀಡಬಾರದು ಎಂದು ಆಗ್ರಹಿಸಿ ಗೋಪಾಲಗೌಡ ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದರು. ಶಾಲೆ ತೆಗೆಯಲು ಅನುಮತಿ ನೀಡದೆ ಮದ್ಯದಂಗಡಿ ಆರಂಭಿಸಲು ಅವಕಾಶ ಕಲ್ಪಿಸಿದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Gopalagowda-Residents-Protest-against-Liquor-Shops

ಗೋಪಾಗೌಡ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಮದ್ಯದಂಗಡಿ (Liquor store)  ತೆಗೆಯಲು ಅನುಮತಿ ನೀಡಲಾಗಿದೆ ಎಂದು ಆರೋಪಿಸಿ ಮದ್ಯದಂಗಡಿ ಸ್ಥಳದ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ, ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗೋಪಾಲಗೌಡ ಬಡಾವಣೆಯಲ್ಲಿ ಶಾಲೆ ಆರಂಭಕ್ಕೆ ಅನುಮತಿ ಕೇಳಿದ್ದೆವು. ಆದರೆ ಶಿಕ್ಷಣ ಇಲಾಖೆ ಅನುಮತಿ ನಿರಾಕರಿಸಿತ್ತು. ಈಗ ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗಿದೆ. ಇಲ್ಲಿಂದ 300 ಮೀಟರ್‌ ದೂರದಲ್ಲಿ ಒಂದು ಮದ್ಯದಂಗಡಿ ಇದೆ. ಹಾಗಿದ್ದು ಮತ್ತೊಂದು ಮದ್ಯದಂಗಡಿ ಆರಂಭಿಸಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಈ ರಸ್ತೆ ಮದ್ಯದಂಡಿಯ ರಸ್ತೆಯಾಗಲಿದೆ.ಹೆಚ್.ಎಂ.ಸತ್ಯನಾರಾಯಣ, ಅಧ್ಯಕ್ಷ, ಗೋಪಾಲಗೌಡ ಬಡಾವಣೆ ನಿವಾಸಿಗಳ ಸಂಘ
ಸಮಾಜವಾದಿ, ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಟ್ಟ ಶಾಂತವೇರಿ ಗೋಪಾಲಗೌಡ ಅವರ ಹೆಸರಿನ ಬಡಾವಣೆ ಇದು. ಇಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಕ್ಕೆ ಅನುಮತಿ ನಿರಾಕರಿಸಲಾಗಿದೆ. ಮದ್ಯದಂಗಡಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇವತ್ತಿನದ್ದು ಸಾಂಕೇತಿಕ ಹೋರಾಟ. ಅಧಿಕಾರಿಗಳು ನಿರ್ಧಾರ ಬದಲಿಸದೆ ಇದ್ದರೆ, ಮುಂದೆ ಇಡೀ ಬಡಾವಣೆ ನಿವಾಸಿಗಳು ಹೋರಾಟ ನಡೆಸುತ್ತೇವೆ.ಡಾ. ಶ್ರೀನಿವಾಸ್‌, ಅಧ್ಯಕ್ಷ, ವನಸಿರಿ ಗೋಪಾಲಗೌಡ ಬಡಾವಣೆ ನಿವಾಸಿಗಳ ಸಂಘ

ಇದನ್ನೂ ಓದಿ – ಹುಷಾರ್‌, ಶಿವಮೊಗ್ಗದಲ್ಲಿ ನಡೆಯುತ್ತಿದೆ 3 ಬಗೆಯ ಆನ್‌ಲೈನ್‌ ವಂಚನೆ, ಅವರ ಮುಂದಿನ ಟಾರ್ಗೆಟ್‌ ನೀವೆ ಆಗಬಹುದು

ಮದ್ಯದಂಗಡಿ ಆರಂಭಿಸುವ ನಿರ್ಧಾರದಿಂದ ಜಿಲ್ಲಾಡಳಿತ ಹಿಂದಕ್ಕೆ ಸರಿಯಬೇಕು. ಬಡಾವಣೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇದನ್ನೂ ಓದಿ – ದಿಢೀರ್‌ ಕುಸಿದು ಪ್ರಾಣ ಬಿಟ್ಟಿತು ದನ, ನೀರು ಕುಡಿಸಲು ಹತ್ತಿರ ಹೋದವರಿಗೆ ಆಘಾತ, ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ದೌಡು

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment