‘ಅವರ ಅಪ್ಪನ ಮನೆಯ ಅಕ್ಕಿ ಕೇಳುತ್ತಿಲ್ಲ, ಕೇಂದ್ರದ ಅಕ್ಕಿ ಅಂದರೆ ಬಿಜೆಪಿಯ ಅಕ್ಕಿಯಲ್ಲ’

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE | 20 JUNE 2023

SHIMOGA : ಕೇಂದ್ರದ ಅಕ್ಕಿ (Rice) ಅಂದರೆ ಅದು ಬಿಜೆಪಿಯ ಅಕ್ಕಿಯಲ್ಲ. ಅವರ ಅಪ್ಪನ ಮನೆಯದ್ದು ಅಲ್ಲ. ಅದರಲ್ಲಿ ನಮ್ಮ ಹಣವು ಇದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಆಕ್ರೋಶ ವ್ಯಕ್ತಪಡಿಸಿದರು.

Congress-Protest-in-Shimoga-against-central-government

ಕೇಂದ್ರ ಸರ್ಕಾರ ತನ್ನ ಬಳಿ ದಾಸ್ತಾನು ಇರುವ ಅಕ್ಕಿಯನ್ನು (Rice) ಕೊಡಲು ನಿರಾಕರಿಸಿದ್ದನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶಿವಪ್ಪನಾಯಕ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಕಿಮ್ಮನೆ ರತ್ನಾಕರ್‌, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

PARISHRAMA NEET ACADEMY SHIVAMOGGA LIVE

ಕೇಂದ್ರ ಸರ್ಕಾರದ ಬಳಿ ಇರುವ ಅಕ್ಕಿ ಬಿಜೆಪಿ‌ ಅಕ್ಕಿಯಲ್ಲ. ಅದು ಅವರ ಮನೆಯದ್ದಲ್ಲ. ನಮ್ಮ ಸರ್ಕಾರ ಹಣ ಕೊಟ್ಟು ಅಕ್ಕಿ ಖರೀದಿಸಲಿದೆ. ಆ ಅಕ್ಕಿಯಲ್ಲಿ ನಮ್ಮ ರಾಜ್ಯದ ಹಣವು ಇದೆ. ಈ ಕುರಿತು ಕಾಂಗ್ರೆಸ್‌ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮನವರಿಕೆ ಮಾಡಬೇಕು. ಬಡವರಿಗೆ ಅಕ್ಕಿ ಕೊಡಲು ತೊಂದರೆ ಮಾಡಲಾಗುತ್ತಿದೆ. ಈ ಹಿನ್ನೆಲೆ ತೀರ್ಥಹಳ್ಳಿಯಲ್ಲಿ ಬಿಪಿಎಲ್‌ ಕಾರ್ಡ್‌ದಾರರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕಿಮ್ಮನೆ ರತ್ನಾಕರ್ ಎಚ್ಚರಿಸಿದರು.

Congress Protest against Central government over Rice Row in Shimoga

ಯೋಜನೆಗಳನ್ನು ಘೋಷಿಸಿದ್ದೇವೆ ಅಂದ ಮಾತ್ರಕ್ಕೆ ಅಧಿಕಾರಕ್ಕೆ ಬಂದ ತಕ್ಷಣ ಕೊಡಲು ಸಾಧ್ಯವಿಲ್ಲ. ಅದೇನು ತಟ್ಟನೆ ಕತ್ತರಿಸಿ ಕೊಡಲು ಮೈಸೂರು ಪಾಕ್‌ ಅಲ್ಲ. ನಮ್ಮ ಪಕ್ಷ ನೀಡಿದ ಭರವಸೆಗಳೆಲ್ಲವನ್ನು ಈಡೇರಿಸಲಿದೆ. ಬಿಜೆಪಿಯವರು ಇಷ್ಟು ವರ್ಷ ಅಧಿಕಾರದಲ್ಲಿದ್ದರು ಈವರೆಗೆ 15 ಲಕ್ಷ ರೂ. ಕೊಟ್ಟಿಲ್ಲ. ಉಳಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಿಮ್ಮನೆ ರತ್ನಾಕರ್‌ ಆಕ್ರೋಶ ವ್ಯಕ್ತಪಡಿಸಿದರು.

Congress Protest against Central government over Rice Row in Shimoga

ಕೇಂದ್ರ ಸರ್ಕಾರಕ್ಕೆ ಹಣ ಕೊಟ್ಟು ಅಕ್ಕಿ ಖರೀದಿಸುತ್ತೇವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಉಚಿತವಾಗಿ ಅಕ್ಕಿ ಕೊಡಿ ಎಂದು ಕೇಳುತ್ತಿಲ್ಲ. ಸಿದ್ದರಾಮಯ್ಯ ಅವರ ನೇತೃತ್ವದ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳನ್ನು ಪುನಾರಂಭ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಆ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ.ಹೆಚ್.ಎಸ್.ಸುಂದರೇಶ್‌, ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ

Congress Protest against Central government over Rice Row in Shimoga

ಎಫ್‌ಸಿಐನಿಂದ ಕೇಳಿದ್ದು ಪುಗಸಟ್ಟೆ ಅಕ್ಕಿ ಅಲ್ಲ. ಅದಕ್ಕೆ ಹಣ ಕೊಡುತ್ತೇವೆ. ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ. ಬಿಜೆಪಿಯವರಿಗೆ ಇನ್ನೂ ಒಂದು ವರ್ಷ ಸಮಯ ಕೊಡುತ್ತೇವೆ. ಈ ಹಿಂದೆ ಕೊಟ್ಟ ಭರವಸೆಗಳನ್ನೆಲ್ಲ ಅವರಿಗೆ ಈಡೇರಿಸುವ ತಾಕತ್ತು ಇದ್ಯಾ?ಹೆಚ್‌.ಸಿ.ಯೋಗೇಶ್‌, ಪಾಲಿಕೆ ಸದಸ್ಯ

ಇದನ್ನೂ ಓದಿ – ಶಿವಮೊಗ್ಗದಲ್ಲಿ ಒಂದು ಗಂಟೆ ಸುರಿದ ಮಳೆ, ವಿವಿಧೆಡೆ ರಸ್ತೆಗಳು ಜಲಾವೃತ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಪ್ರತಿಭಟನಾ ಸಭೆಗೂ ಮುನ್ನ ಕಾಂಗ್ರೆಸ್‌ ಪಕ್ಷದ ವತಿಯಿಂದ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು. ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಗಾಂಧಿ ಬಜಾರ್‌ ಮೂಲಕ ಶಿವಪ್ಪನಾಯಕ ಪ್ರತಿಮೆವರೆಗೂ ಮೆರವಣಿಗೆ ನಡೆಸಲಾಯಿತು.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment