SHIVAMOGGA LIVE NEWS | 21 AUGUST 2023
SHIMOGA : ನಡುರಾತ್ರಿ ಡ್ರಾಪ್ ಕೇಳುವ ನೆಪದಲ್ಲಿ ಕಾರು (Car) ಹತ್ತಿದ್ದ ಮಂಗಳಮುಖಿಯೊಬ್ಬಳು (Transgender) ಚಾಲಕನಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ ಚಿನ್ನದ ಸರ ಕಸಿದು ಪರಾರಿಯಾಗಿದ್ದಳು. ತನಿಖೆ ನಡೆಸಿದ ದೊಡ್ಡಪೇಟೆ ಠಾಣೆ ಪೊಲೀಸರು (Police) ಮಂಗಳಮುಖಿ ರವಿ ಅಲಿಯಾಸ್ ಸ್ವೀಟಿ ಎಂಬಾಕೆಯನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ನಡುರಾತ್ರಿ ಡ್ರಾಪ್ ಕೇಳಿದ್ದಳು
ಆ.19ರಾತ್ರಿ 1 ಗಂಟೆ ಹೊತ್ತಿಗೆ ವ್ಯಕ್ತಿಯೊಬ್ಬರು (ಹೆಸರು ಗೌಪ್ಯ) ಎನ್.ಟಿ.ರಸ್ತಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಮಂಗಳಮುಖಿಯೊಬ್ಬಳು ಕೈ ತೋರಿಸಿ ಕಾರು ಹತ್ತಿಕೊಂಡಿದ್ದಾಳೆ. ಸ್ವಲ್ಪ ದೂರ ತೆರಳುತ್ತಿದ್ದಂತೆ ಚಾಕು ತೆಗೆದು ವ್ಯಕ್ತಿಗೆ ಬೆದರಿಕೆ ಒಡ್ಡಿದ್ದಾಳೆ. ಕೊರಳಲ್ಲಿದ್ದ 92 ಸಾವಿರ ರೂ. ಮೌಲ್ಯದ 23 ಗ್ರಾಂ ತೂಕದ ಚಿನ್ನದ ಸರಿ ಕಸಿದು, ಕಾರಿನ ಡೋರ್ ತೆಗೆದು ಪರಾರಿಯಾಗಿದ್ದಳು.
ಕ್ಷಿಪ್ರ ತನಿಖೆ ನಡೆಸಿದ ಪೊಲೀಸರು
ಘಟನೆ ಸಂಬಂಧ ಕಾರು ಚಾಲಕ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರು ಆರ್.ಎಂ.ಎಲ್ ನಗರದ ರವಿ ಅಲಿಯಾಸ್ ಸ್ವೀಟಿ ಎಂಬ ಮಂಗಳಮುಖಿಯನ್ನು ಬಂಧಿಸಿದ್ದಾರೆ. ಆಕೆ ಬಳಿ ಇದ್ದ 92 ಸಾವಿರ ರೂ. ಮೌಲ್ಯದ ಬಂಗಾರದ ಸರವನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ – ಭದ್ರಾವತಿ, ತೀರ್ಥಹಳ್ಳಿಯಲ್ಲಿ ಪೊಲೀಸರಿಂದ ಪ್ರತ್ಯೇಕ ದಾಳಿ, ನಾಲ್ವರು ಅರೆಸ್ಟ್
ದೊಡ್ಡಪೇಟೆ ಇನ್ಸ್‌ಪೆಕ್ಟರ್ ಅಂಜನ್ ಕುಮಾರ್, ಪಿಎಸ್‌ಐ ವಸಂತ್, ಪ್ರೊ. ಡಿವೈಎಸ್‌ಪಿ ಮಂಜುನಾಥ್, ಸಿಬ್ಬಂದಿ ಚಂದ್ರಶೇಖರ್, ಲಚ್ಚಾನಾಯ್ಕ, ಚಂದ್ರನಾಯ್ಕ, ನಿತಿನ್, ರಮೇಶ ಅವರ ತಂಡ ಆರೋಪಿಯನ್ನು ಬಂಧಿಸಿದೆ.
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






