ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 JANUARY 2023
SHIMOGA | ವಿಧಾನ ಸಭೆ ಚುನಾವಣೆ ಹಿನ್ನೆಲೆ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (RAPID ACTION FORCE) ವತಿಯಿಂದ ಶಿವಮೊಗ್ಗ ನಗರದಲ್ಲಿ ಪಥ ಸಂಚಲನ (ROUTE MARCH) ನಡೆಸಲಾಯಿತು. ಆರ್.ಎ.ಎಫ್ ಸಿಬ್ಬಂದಿ ಮತ್ತು ಪೊಲೀಸರು ವಿವಿಧೆಡೆ ಪಥ ಸಂಚನಲ ನಡೆಸಿದರು.
ಪಥ ಸಂಚಲನಕ್ಕೆ ಕಾರಣವೇನು?
ವಿಧಾನ ಸಭೆ ಚುನಾವಣೆ ಹಿನ್ನೆಲೆ ಆರ್.ಎ.ಎಫ್ ಕಂಪನಿಗಳಿಗೆ ಜಿಲ್ಲೆಯ ಪ್ರಮುಖ ಮತ್ತು ಸೂಕ್ಷ್ಮ ಪ್ರದೇಶಗಳ ಪರಿಚಯಕ್ಕಾಗಿ (Area Familiarization) ಪಥ ಸಂಚಲನ (ROUTE MARCH) ಆಯೋಜಿಲಾಗಿತ್ತು. ಶಿವಮೊಗ್ಗ – ಬಿ ಉಪ ವಿಭಾಗದ ಡಿವೈಎಸ್ಪಿ ಬಾಲರಾಜ್, ಆರ್.ಎ.ಎಪ್ ಡೆಪ್ಯೂಟಿ ಕಮಾಂಡೆಂಡ್ ನಯನ ನಂದಿ ಅವರ ನೇತೃತ್ವದಲ್ಲಿ ಪಥ ಸಂಚಲನ ನಡೆಸಲಾಯಿತು.
ಇದನ್ನೂ ಓದಿ – ಶಿವಮೊಗ್ಗದ ಈ ಅಂಗಡಿಯ ಬಟ್ಟೆ ಆರೋಗ್ಯ ಕಾಪಾಡುತ್ತೆ, ಇದಕ್ಕೆ ವಿದೇಶದಲ್ಲೂ ಇದೆ ಭಾರಿ ಬೇಡಿಕೆ, ಎಲ್ಲಿದೆ ಅಂಗಡಿ?
ಎಲ್ಲೆಲ್ಲಿ ಪಥ ಸಂಚಲನ?
ಶಿವಮೊಗ್ಗ ನಗರದ ತುಂಗಾ ನಗರ, ದೊಡ್ಡಪೇಟೆ, ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಥ ಸಂಚಲನ ನಡೆಸಲಾಯಿತು. ಕೆಳಗಿನ ತುಂಗಾನಗರದಿಂದ ಪಥ ಸಂಚಲನ ಆರಂಭಿಸಲಾಯಿತು. ಕೆ.ಕೆ.ಶೆಡ್, ಪದ್ಮಾ ಟಾಕೀಸ್, ಟಿಪ್ಪು ನಗರ, ವಿಜಯಾ ಗ್ಯಾರೇಜ್, ಗಜಾನನ ಗೇಟ್, ಸೀಗೇಹಟ್ಟಿ, ಕುಂಬಾರ ಬೀದಿ, ಕೆಆರ್ ಪುರಂ, ಸಿದ್ಯಯ್ಯ ಸರ್ಕಲ್, ಎಂಕೆಕೆ ರಸ್ತೆ, ಎಎ ಸರ್ಕಲ್, ಎಸ್.ಎನ್.ಸರ್ಕಲ್, ಗಾಂಧಿ ಬಜಾರ್, ಅಶೋಕ ರಸ್ತೆ, ಶಿವಾಜಿ ರಸ್ತೆ, ಲಷ್ಕರ್ ಮೊಹಲ್ಲಾ, ಓಲ್ಡ್ ಬಾರ್ ಲೈನ್ ರಸ್ತೆ ಮುಖಾಂತರ ಕೋಟೆ ಪೊಲೀಸ್ ಠಾಣೆವರೆಗೆ ಪಥ ಸಂಚಲನ ನಡೆಸಲಾಯಿತು.
ಇದನ್ನೂ ಓದಿ – ಶಿವಮೊಗ್ಗದ ಈ ಬ್ರ್ಯಾಂಡ್ ಭಾರಿ ಫೇಮಸ್, ವಿದೇಶಕ್ಕು ತಲುಪುತ್ತಿದೆ ಮಲೆನಾಡ ಟೇಸ್ಟ್, MN ಪಿಕಲ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
ಮೂರು ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್ ಗಳು, ಸಬ್ ಇನ್ಸ್ ಪೆಕ್ಟರ್ ಗಳು, ಸಿಬ್ಬಂದಿ, ಆರ್.ಎ.ಎಫ್ ಸಿಬ್ಬಂದಿ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422