ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 7 ಫೆಬ್ರವರಿ 2022
ಸಹ್ಯಾದ್ರಿ ಕಾಲೇಜಿನಲ್ಲಿ ಯುನಿಫಾರಂ ಕಡ್ಡಾಯವೇನಿಲ್ಲ. ಆದರೆ ಹಿಜಾಬ್, ಕೇಸರಿ ಶಾಲು ಧರಿಸಿ ಬಂದರೆ ತರಗತಿಗೆ ಪ್ರವೇಶವಿಲ್ಲ ಎಂದು ಸಹ್ಯಾದ್ರಿ ವಾಣಿಜ್ಯ ಕಾಲೇಜು ಪ್ರಾಂಶುಪಾಲರಾದ ಎಂ.ಕೆ.ವೀಣಾ ತಿಳಿಸಿದ್ದಾರೆ.
ಸಹ್ಯಾದ್ರಿ ಕಾಲೇಜಿನಲ್ಲಿ ಇವತ್ತು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಂಶುಪಾಲರಾದ ಎಂ.ಕೆ.ವೀಣಾ, ಇವತ್ತಿನ ಬೆಳವಣಿಗೆ ಕುರಿತು ಕುವೆಂಪು ವಿವಿಯ ಹಿರಿಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.
ಪ್ರಾಂಶುಪಾಲರು ಹೇಳಿದ್ದೇನು?
♦ ‘ಸಹ್ಯಾದ್ರಿ ಕಾಲೇಜಿನಲ್ಲಿ ಯುನಿಫಾರಂ ಕಡ್ಡಾಯ ಎಂಬ ನಿಯಮವಿಲ್ಲ. ಆದರೆ ವಾಣಿಜ್ಯ ಕಾಲೇಜಿನಲ್ಲಿ ಎರಡೂವರೆ ಸಾವಿರ ವಿದ್ಯಾರ್ಥಿಗಳಿದ್ದಾರೆ. ಸಹ್ಯಾದ್ರಿ ಕಾಲೇಜಿನಲ್ಲಿ ಕ್ಯಾಂಪಸ್’ನಲ್ಲಿ ಆರು ಸಾವಿರ ವಿದ್ಯಾರ್ಥಿಗಳಿದ್ದಾರೆ.’
♦ ‘ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಇರುವುದರಿಂದ ಯಾರು, ಏನು ಅನ್ನುವುದು ಗೊತ್ತಾಗುವುದಿಲ್ಲ. ಆದ್ದರಿಂದ ಒಂದು ಬಗೆಯ ವಸ್ತ್ರ ಸಂಹಿತೆ ಇದೆ. ಆದರೆ ಅದು ಕಡ್ಡಾಯವೇನು ಆಗಿರಲಿಲ್ಲ. ಆದ್ದರಿಂದ ಕೆಲವು ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬರುತ್ತಿದ್ದರು. ಅವರು ಲೇಡಿಸ್ ವೇಯ್ಟಿಂಗ್ ರೂಂನಲ್ಲಿ ಅದನ್ನು ತೆಗೆದಿಟ್ಟು ತರಗತಿಗೆ ಬರುತ್ತಿದ್ದರು.’
♦ ‘ವಸ್ತ್ರ ಸಂಹಿತೆ ಕುರಿತು ಸರ್ಕಾರದಿಂದ ಯಾವುದೆ ಸೂಚನೆ ಬಂದಿಲ್ಲ. ಆದರೆ ಯಾವ ವಿದ್ಯಾರ್ಥಿಗೂ ನಾವು ಕೇಸರಿ ಶಾಲು ಹಾಕಲು ಅವಕಾಶ ಕೊಡುವುದಿಲ್ಲ. ಬುರ್ಖಾ, ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ. ಅಕಸ್ಮಾತ್ ಈ ನಿಯಮ ಪಾಲಿಸಲು ಆಗದಿದ್ದರೆ ಮನೆಗೆ ತೆರಳುವಂತೆ ತಿಳಿಸಿದ್ದೇವೆ.’
♦ ‘ಇವತ್ತು ಸುಮಾರು 30 ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದು, ತರಗತಿಗೆ ಕೂರಲು ಅನುಮತಿ ಕೇಳಿದರು. ಇದಕ್ಕೆ ಅನುಮತಿ ನಿರಾಕರಿಸಲಾಯಿತು. ಮನವಿ ಸ್ವೀಕರಿಸುವಂತೆ ಕೇಳಿಕೊಂಡರು. ಮನವಿ ಪಡೆದಿದ್ದೇವೆ. ಅದನ್ನು ಕುವೆಂಪು ವಿಶ್ವವಿದ್ಯಾಲಯಲ್ಲಿರುವ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅವರು ಕೊಡುವ ಸೂಚನೆಯನ್ನು ಪಾಲಿಸುತ್ತೇವೆ.’
ಇದನ್ನೂ ಓದಿ | ಸಹ್ಯಾದ್ರಿ ಕಾಲೇಜು ಕ್ಯಾಂಪಸ್’ನಲ್ಲೂ ಹಿಜಾಬ್, ಕೇಸರಿ ಶಾಲು ಸಂಘರ್ಷ
ಇದನ್ನೂ ಓದಿ | ತೀರ್ಥಹಳ್ಳಿಯಲ್ಲೂ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶ ನಿರಾಕರಣೆ
Shimoga District Profile | About Shivamogga Live | Whatsapp Number 741700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422