ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
FILE PHOTO
ಶಿವಮೊಗ್ಗದ ಲೈವ್.ಕಾಂ | SHIMOGA NEWS | 4 ಜನವರಿ 2022
ನಗರದ ಸವಳಂಗ ರಸ್ತೆಯ ರೈಲ್ವೆ ಗೇಟ್ಗೆ ಓವರ್ ಬ್ರಿಡ್ಜ್ ಕಾಮಗಾರಿ ನಿಮಿತ್ತ ಜ.5ರಿಂದ ಸುಗಮ ಸಂಚಾರದ ದೃಷ್ಟಿಯಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಡಿಸಿ ಕೆ.ಬಿ.ಶಿವಕುಮಾರ್ ಆದೇಶಿಸಿದ್ದಾರೆ.
ಪರ್ಯಾಯ ಮಾರ್ಗ 1
ಶಿವಮೊಗ್ಗದಿಂದ ಸವಳಂಗ ಕಡೆ ಸಂಚರಿಸುವ ವಾಹನಗಳು ಶಿವಮೊಗ್ಗ ಬಸ್ ನಿಲ್ದಾಣದಿಂದ ಸಾಗರ ರಸ್ತೆಯ ಆಲೊಳ ವೃತ್ತ, ಪೊಲೀಸ್ ಚೌಕಿ, ಮೇದಾರ್ ಕೇರಿ, ಬೊಮ್ಮನಕಟ್ಟೆ ರೈಲ್ವೆ ಗೇಟ್, ಬಸವನಗಂಗೂರು, ಹುಣಸೋಡು, ಅಬ್ಬಲಗೆರೆ ಮೂಲಕ ತೆರಳುವುದು
ಪರ್ಯಾಯ ಮಾರ್ಗ 2
ಸವಳಂಗದಿಂದ ಬರುವ ಲಘು ಮತ್ತು ಇತರ ವಾಹನಗಳು ನವುಲೆ ಗಣಪತಿ ದೇವಸ್ಥಾನದ ಎಡಕ್ಕೆ ತಿರುಗಿ ತ್ರಿಮೂರ್ತಿನಗರ, ರಾಗಿಗುಡ್ಡ ಚಾನಲ್ ಬಲಗಡೆ ಏರಿ ಮೇಲೆ ಮಲ್ಲಿಕಾರ್ಜುನ ನಗರ, ನೆಕ್ಸಾ ಶೋರೂಂ, ಹೊನ್ನಾಳಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಕೆಇಬಿ ವೃತ್ತದ ಮೂಲಕ ಚಲಿಸಬೇಕು.
ಪರ್ಯಾಯ ಮಾರ್ಗ 3
ಶಿವಮೊಗ್ಗದಿಂದ ಹೋಗುವ ಲಘು ವಾಹನಗಳು ರಾಜ್ಕುಮಾರ್ ವೃತ್ತ (ಮೇದಾರಕೇರಿ), ಬೊಮ್ಮನಕಟ್ಟೆ ರೈಲ್ವೆಗೆಟ್ ಬಲಗಡೆಯಿಂದ ಕೀರ್ತಿನಗರ, ಅಶ್ವಥನಗರ, ಎಲ್ಬಿಎಸ್ ನಗರ 2ನೇ ಕ್ರಾಸ್ ಮೂಲಕ ಸವಳಂಗ ರಸ್ತೆ ಸೇರಬೇಕು.
ಪರ್ಯಾಯ ಮಾರ್ಗ 4
ಶಿವಮೊಗ್ಗದಿಂದ ತೆರಳುವ ಲಾರಿ ಮತ್ತು ಭಾರಿ ವಾಹನಗಳು ಬಸ್ ನಿಲ್ದಾಣ, ಆಲ್ಕೊಳ, ಆಯನೂರು, ಹಾರ್ನಳ್ಳಿ ಮಾರ್ಗ ಹಾಗೂ ಎಂಆರ್ಎಸ್, ಸಂದೇಶ್ ಮೋಟಾರ್ಸ್, ಗೋಪಾಳ, ಆಲ್ಕೊಳ, ಆಯನೂರು, ಹಾರ್ನಳ್ಳಿ ಮಾರ್ಗ. ಹಾಗೆಯೇ ಸವಳಂಗದಿಂದ ಬರುವ ವಾಹನಗಳು ಸವಳಂಗ, ಹಾರಳ್ಳಿ, ಆಯನೂರು, ಆಳ್ಕೊಳ, ಗೋಪಾಳ, ಸಂದೇಶ ಮೋಟಾರ್ಸ್ ವೃತ್ತದ ಮಾರ್ಗದಲ್ಲಿ ತೆರಳಬೇಕಿದೆ.

LATEST NEWS
- ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

- ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

- ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

- ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

- ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

About The Editor
ನಿತಿನ್ ಆರ್.ಕೈದೊಟ್ಲು














