SHIVAMOGGA LIVE NEWS | SCHOOL | 16 ಮೇ 2022
ರಾಜ್ಯಾದ್ಯಂತ ಇವತ್ತಿನಿಂದ ಶಾಲೆಗಳು ಪುನಾರಂಭವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿಯು ಇವತ್ತು ತರಗತಿಗಳು ಆರಂಭವಾಗಿದ್ದು, ಮಕ್ಕಳು ಸಂಭ್ರಮದಿಂದ ಶಾಲೆಗೆ ಆಗಮಿಸಿದರು.
ಶಾಲೆಗಳಲ್ಲಿ ತಳಿರು, ತೋರಣ
ಶಿವಮೊಗ್ಗ ನಗರದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ತಳಿರು, ತೋರಣ ಕಟ್ಟಿ ಅಲಂಕಾರ ಮಾಡಲಾಗಿತ್ತು. ಹೂವುಗಳಿಂದ ಅಲಂಕಾರ ಮಾಡಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು.
ಶಾಲೆಯ ಮುಂದೆ ರಂಗೋಲೆ ಬಿಡಿಸಿ, ಮಕ್ಕಳಿಗೆ ಸುಸ್ವಾಗತ ಕೋರಲಾಯಿತು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಚಾಕೊಲೇಟ್ ವಿತರಣೆ ಮಾಡಿ ಖುಷಿಯಿಂದ ಬರ ಮಾಡಿಕೊಳ್ಳಲಾಯಿತು.
ದುರ್ಗಿಗುಡಿ ಶಾಲೆಯಲ್ಲಿ ಸಂಭ್ರಮ
ಶಿವಮೊಗ್ಗ ನಗರದ ಪ್ರಮುಖ ಸರ್ಕಾರಿ ಶಾಲೆಗಳಲ್ಲಿ ಒಂದಾಗಿರುವ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲೆಲ್ಲೂ ಮಕ್ಕಳು ಓಡಾಟ, ಕೂಗಾಟ, ಸ್ನೇಹಿತರೊಂದಿಗೆ ಕುಣಿದಾಟ ಕಂಡು ಬಂತು.
ಸ್ನೇಹಿತರೊಂದಿಗೆ ಹರಟೆ, ಆಟ
ಶಾಲೆಗೆ ಬಂದ ಮಕ್ಕಳು ತಮ್ಮ ಸಹಪಾಠಿಗಳನ್ನು ಭೇಟಿಯಾಗಿ ಖುಷಿಪಟ್ಟರು. ಶಾಲೆ ಆವರಣದಲ್ಲಿ ಕುಳಿತು ಕೆಲ ಹೊತ್ತು ಹರಟಿದರು. ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ತರಗತಿಯಲ್ಲಿ ಕುಳಿತು ಖುಷಿ
ಉತ್ತೀರ್ಣರಾಗಿ ಮುಂದಿನ ತರಗತಿಗೆ ಆಗಮಿಸಿರುವುದರಿಂದ ಇವತ್ತು ಹೊಸ ಕೊಠಡಿಗಳಲ್ಲಿ ಕುಳಿತು ಪಾಠ ಕೇಳಬೇಕಾಗಿದೆ. ಹೊಸ ಕೊಠಡಿಯಲ್ಲಿ ಕುಳಿತು ಮಕ್ಕಳು ಖುಷಿಪಟ್ಟರು.
ಶಿಕ್ಷಕರ ಮೊಗದಲ್ಲಿ ಮಂದಹಾಸ
ಕೋವಿಡ್, ಲಾಕ್ ಡೌನ್, ಕೆಲವು ವಿವಾದಗಳಿಂದ ಶಾಲೆಗಳ ಆವರಣದಲ್ಲಿ ಗೊಂದಲದವಿತ್ತು. ಈಗ ಎಲ್ಲಾ ಅಡೆತಡೆ, ಆತಂಕಗಳು ದೂರಾಗಿದ್ದು ಶಿಕ್ಷಕರ ಮೊಗದಲ್ಲಿ ಮಂದಹಾಸ ಮೂಡಿತ್ತು. ಶಿಕ್ಷಕರು ಉತ್ಸಾಹದಿಂದ ಶಾಲೆಗಳ ಅಲಂಕಾರ ಮಾಡಿದ್ದರು. ನೊಟೀಸ್ ಬೋರ್ಡುಗಳಲ್ಲಿ ಮಕ್ಕಳಿಗೆ ಇಷ್ಟವಾಗುವ ಫೋಟೊಗಳು, ಬೊಂಬೆಗಳ ಚಿತ್ರಗಳನ್ನು ಅಂಟಿಸಿದ್ದರು.
ಹೊಸ ಪಠ್ಯ ಪುಸ್ತಕಗಳು
ಬಹುತೇಕ ಶಾಲೆಗಳಲ್ಲಿ ಇವತ್ತು ಹೊಸ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಪ್ರತಿ ತರಗತಿಗೂ ಪಠ್ಯ ಪುಸ್ತಕಗಳನ್ನು ಕೊಂಡೊಯ್ದು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿ, ಶುಭ ಕೋರಲಾಯಿತು.
ಮೊದಲ ದಿನ ಫೋಟೊ, ಸೆಲ್ಫಿ
ಮೊದಲ ದಿನ ಶಾಲೆಗೆ ಮಕ್ಕಳನ್ನು ಕರೆತಂದ ಪೋಷಕರು ಖುಷಿಯಿಂದ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡರು. ಶಾಲೆಗಳ ಮುಂದೆ ನಿಂತು ಸೆಲ್ಫಿ, ಫೋಟೊ ತೆಗೆಸಿಕೊಂಡರು.
ಕೊನೆ ಹಂತದ ಅಡ್ಮಿಷನ್
ಇತ್ತ ಕೊನೆ ಹಂತದಲ್ಲಿಯು ದಾಖಲಾತಿಗೆ ಪೋಷಕರು ಓಡಾಡುತ್ತಿದ್ದಾರೆ. ದುರ್ಗಿಗುಡಿ ಸರ್ಕಾರಿ ಶಾಲೆ, ಖಾಸಗಿ ಶಾಲೆಗಳಲ್ಲಿಯು ಕೂಡ ಕೊನೆ ಹಂತದ ಅಡ್ಮಿಷನ್ ಪ್ರಕ್ರಿಯೆ ನಡೆಸಲಾಯಿತು. ಈ ವೇಳೆ ಕೆಲವು ಕಡೆ ಗೊಂದಲ, ಗಲಾಟೆಯು ಆದೆ ವರದಿಯಾಗಿದೆ.
ಖಾಸಗಿ ಶಾಲೆಗಳಲ್ಲೂ ಗ್ರ್ಯಾಂಡ್ ವೆಲ್ ಕಮ್
ಖಾಸಗಿ ಶಾಲೆಗಳಲ್ಲಿಯು ಮಕ್ಕಳಿಗೆ ಗ್ರ್ಯಾಂಡ್ ವೆಲ್ ಕಮ್ ನೀಡಲಾಯಿತು. ಕಣ್ಣೀರು ಹಾಕುತ್ತ ಬರುತ್ತಿದ್ದ ಮಕ್ಕಳನ್ನು ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಸಂತೈಸಿ ತರಗತಿಗೆ ಕರೆದೊಯ್ಯುತ್ತಿದ್ದರು. ವಿಭಿನ್ನ ರೀತಿಯಲ್ಲಿ ವೆಲ್ ಕಮ್ ಮಾಡಲಾಯಿತು.
ಎರಡು ಲಕ್ಷ ವಿದ್ಯಾರ್ಥಿಗಳು
ಶಿವಮೊಗ್ಗ ಜಿಲ್ಲೆಯಾದ್ಯಂತ 1 ರಿಂದ 10ನೇ ತರಗತಿವರೆಗಿನ 2.61 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಮೊದಲ ದಿನವಾದ್ದರಿಂದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು.
ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ನಿಮ್ಮೂರು, ನಿಮ್ಮಾ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು