SHIMOGA CITY ಫಟಾಫಟ್‌ ಸುದ್ದಿ | ಎಲ್ಲೆಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ನ್ಯೂಸ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIMOGA CITY FATAFAT NEWS, 3 SEPTEMBER 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಇಡೀ ದಿನ ಶಿವಮೊಗ್ಗ ನಗರದಲ್ಲಿ ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಟಾಪ್‌ 10 ಸುದ್ದಿಗಳು. 

NEWS-1-jpg.webp

» ಸರ್ವಧರ್ಮ ಶಾಂತಿ ಸಭೆ

ಜಿಲ್ಲಾಧಿಕಾರಿ ಕಚೇರಿ : ಗಣೇಶ ಚತುರ್ಥಿ ಮತ್ತು ಈದ್‌ ಮಿಲಾದ್‌ ಹಬ್ಬಗಳ ಪ್ರಯುಕ್ತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧ್ಯಕ್ಷತೆಯಲ್ಲಿ ಸರ್ವಧರ್ಮ ಶಾಂತಿ ಸಭೆ ನಡೆಯಿತು. ಧಾರ್ಮಿಕ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಅಭಿಪ್ರಾಯ ತಿಳಿಸಿದರು. ಶಾಸಕರಾದ ಶಾರದಾ ಪೂರ್ಯಾನಾಯ್ಕ್‌, ಎಸ್‌.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್.ಅರುಣ್‌, ಡಾ.ಧನಂಜಯ ಸರ್ಜಿ, ಬಲ್ಕಿಷ್‌ ಬಾನು, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಪಾಲಿಕೆ ಕಮಿಷನರ್‌ ಕವಿತಾ ಯೋಗಪ್ಪನವರ್‌ ಸೇರಿದಂತೆ ಹಲವರು ಪ್ರಮುಖರು ಇದ್ದರು.

fatafat News

NEWS-2

» ಎಡಿಜಿಪಿ ನೇತೃತ್ವದಲ್ಲಿ ವಿಮರ್ಶಾ ಸಭೆ

ಪೊಲೀಸ್‌ ಕಚೇರಿ : ಗಣೇಶ ಚತುರ್ಥಿ, ಈದ್‌ ಮಿಲಾದ್‌ ಹಬ್ಬದ ಹಿನ್ನೆಲೆ ಪೊಲೀಸ್‌ ಇಲಾಖೆ ಸಭೆ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್‌.ಹಿತೇಂದ್ರ ಸಭೆ ನಡೆಸಿದರು. ಡಿವೈಎಸ್‌ಪಿಗಳು, ಇನ್ಸ್‌ಪೆಕ್ಟರ್‌ಗಳು, ಸಬ್‌ ಇನ್ಸ್‌ಪೆಕ್ಟರ್‌ಗಳು ವಿಮರ್ಶಾ ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ಎಎಸ್‌ಪಿಗಳಾದ ಅನಿಲ್‌ ಕುಮಾರ್‌ ಭೂಮರೆಡ್ಡಿ ಮತ್ತು ಕಾರಿಯಪ್ಪ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಗೌರವ ವಂದನೆ ಸಲ್ಲಿಸಲಾಯಿತು.

fatafat News

NEWS-3

» ಕಾಂಗ್ರೆಸ್‌ನದ್ದು ಅರ್ಥಹೀನ ರಾಜಕೀಯ

ಪತ್ರಿಕಾ ಭವನ : ರಾಜ್ಯಪಾಲರು ತನಿಖೆಗೆ ಆದೇಶಿಸಿರುವ ಹಿನ್ನೆಲೆ ಅವರ ಭಾವಚಿತ್ರ ಸುಡುವುದು, ಅವಹೇಳನ ಮಾಡುವುದು, ರಾಜಭವನ ಚಲೋ ಹಮ್ಮಿಕೊಳ್ಳುವುದು ಸರಿಯಲ್ಲ. ಕಾಂಗ್ರೆಸ್‌ ಪಕ್ಷ ಅರ್ಥಹೀನ ರಾಜಕೀಯ ಮಾಡುತ್ತಿದೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪ.

fatafat News

NEWS-4

» ಫಲಾನುಭವಿಗಳಿಗೆ ಮಂಜೂರಾತಿ ಪತ್ರ

ಶಾಸಕರ ಕಚೇರಿ : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಒಕ್ಕಲಿಗ ಅಭಿವೃದ್ಧಿ ನಿಗಮ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಶಾಸಕ ಚನ್ನಬಸಪ್ಪ ಮಂಜೂರಾತಿ ಪತ್ರ, ಹೊಲಿಗೆ ಯಂತ್ರ ವಿತರಿಸಿದರು. 52.40 ಲಕ್ಷ ರೂ. ಮೊತ್ತದ ಮಂಜೂರಾತಿ ಪತ್ರ ವಿತರಿಸಲಾಯಿತು. ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕಿ ಮಹಾದೇವಿ ಸೇರಿದಂತೆ ಹಲವರು ಇದ್ದರು.

fatafat News

NEWS-5

» ಗ್ರಾಮ ಆರೋಗ್ಯದ ಅರಿವು ಮೂಡಿಸಿ

ಜಿಲ್ಲಾ ಪಂಚಾಯಿತಿ : ಮಾನಸಿಕ ಆರೋಗ್ಯ, ಅಪೌಷ್ಠಿಕತೆ, ಹೆಣ್ಣು ಮಕ್ಕಳಿಗೆ ಮುಟ್ಟಿನ ನೈರ್ಮಲ್ಯದ ಕುರಿತು ಜಾಗೃತಿ ಮೂಡಸಬೇಕು. ಗ್ರಾಮ ಆರೋಗ್ಯದ ಕುರಿತು ಅರಿವು ಮೂಡಿಸಬೇಕು ಎಂದು ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿ.ಪಂ ಸಿಇಒ ಎನ್.‌ಹೇಮಂತ್‌ ತಿಳಿಸಿದರು.

NEWS-6

» ನೈತಿಕತೆಯೇ ಸ್ವಾತಂತ್ರ್ಯ ಅಭಿಯಾನ

ಪತ್ರಿಕಾ ಭವನ : ಜಮಾ ಅತೆ ಇಸ್ಲಾಮಿ ಹಿಂದ್‌ ಮಹಿಳಾ ವಿಭಾಗದ ವತಿಯಿಂದ ಸೆ.1 ರಿಂದ 30ರವರೆಗೆ ನೈತಿಕತೆಯೇ ಸ್ವಾತಂತ್ರ್ಯ ಅಭಿಯಾನ ನಡೆಸಲಾಗುತ್ತದೆ ಎಂದು ಜಿಲ್ಲಾ ಸಂಚಾಲಕಿ ನಜೀಮಾ ಬೇಗಂ ಸುದ್ದಿಗೋಷ‍್ಠಿಯಲ್ಲಿ ತಿಳಿಸಿದರು. ವಿವಿಧೆಡೆ ವಿಚಾರ ಸಂಕಿರಣ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗುತ್ತದೆ ಎಂದರು.

fatafat News

NEWS-7

» ವಂಚಕ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಅಗ್ರಹ

ಜಿಲ್ಲಾಧಿಕಾರಿ ಕಚೇರಿ : ಹಣಕಾಸು ಸಂಸ್ಥೆಗಳು ಜನರಿಂದ ಠೇವಣಿ ಇರಿಸಿಕೊಂಡು ಹಣ ಮರುಪಾವತಿ ಮಾಡದೆ ವಂಚಿಸುತ್ತಿವೆ. ಇಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದವು.

NEWS-8

» ಯುವ ಘಟಕದ ಸದಸ್ಯತ್ವ ಅಭಿಯಾನ

ಪತ್ರಿಕಾ ಭವನ : ಜೆಡಿಎಸ್‌ ನಗರ ಯುವ ಘಟಕದ ವತಿಯಿಂದ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ. 32 ವಾರ್ಡ್‌ಗಳ 288 ಬೂತ್‌ಗಳಲ್ಲಿ 30 ಸಾವಿರ ಸದಸ್ಯತ್ವ ಮಾಡುವ ಗುರಿ ಇದೆ ಎಂದು ಯುವ ಘಟಕದ ನಗರ ಅಧ್ಯಕ್ಷ ಸಂಜಯ್‌ ಎಸ್.ಕಶ್ಯಪ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

fatafat News

NEWS-9

» ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ

ಜಿಲ್ಲಾಧಿಕಾರಿ ಕಚೇರಿ : ಭದ್ರಾವತಿ ತಾಲೂಕಿನಲ್ಲಿ ಇಸ್ಪೀಟು, ಗಾಂಜಾ ಸೇರಿದಂತೆ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಬಡ್ಡಿ ದಂಧೆಯಿಂದ ಜನರನ್ನು ಪಾರು ಮಾಡಬೇಕು ಎಂದು ಆಗ್ರಹಿಸಿ ಭದ್ರಾವತಿ ಹಿತರಕ್ಷಣ ವೇದಿಕೆ ಅಧ್ಯಕ್ಷ ಏಸುಕುಮಾರ್‌, ಉಪಾಧ್ಯಕ್ಷ ತೀರ್ಥೇಶ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

NEWS-10

» ನ್ಯಾಯಾಲಯದಲ್ಲಿ ಹೋರಾಟಕ್ಕೆ ಸಿದ್ಧ

ಪತ್ರಿಕಾ ಭವನ : ಸರ್ಕಾರದ ಅನುಮತಿ ಇಲ್ಲದಿದ್ದರು ಶಿವಮೊಗ್ಗ ಮಹಾನಗರ ಪಾಲಿಕೆಯ ಹಿಂದಿನ ಸದಸ್ಯರು ಮೆಡಿಕಲ್‌ ಕ್ಲೇಮ್‌ ಪಡೆದಿದ್ದಾರೆ. ಈ ಸದಸ್ಯರ ವಿರುದ್ಧ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ಮನೋಹರ್‌ ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

fatafat News

ಇದನ್ನೂ ಓದಿ » ಸೆಪ್ಟೆಂಬರ್‌ ತಿಂಗಳು, ಕರ್ನಾಟಕದಲ್ಲಿ 9 ದಿನ ಬ್ಯಾಂಕುಗಳಿಗೆ ರಜೆ, ಕಾರಣವೇನು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment