ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DASARA NEWS, 5 OCTOBER 2024 : ಶಿವಮೊಗ್ಗ ದಸರಾದಲ್ಲಿ ಇವತ್ತು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಯಾವೆಲ್ಲ ಕಾರ್ಯಕ್ರಮಗಳು ಎಲ್ಲೆಲ್ಲಿ ಎಷ್ಟು ಹೊತ್ತಿಗೆ ಆರಂಭವಾಗಲಿದೆ. ಇಲ್ಲಿದೆ ಪಟ್ಟಿ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇವತ್ತಿನ ಕಾರ್ಯಕ್ರಮದ ವಿವರ
♦ ರೈತ ದಸರಾ ಜಾಥಾ | ಸ್ಥಳ : ಸೈನ್ಸ್ ಮೈದಾನದಿಂದ | ಸಮಯ : ಬೆಳಗ್ಗೆ 9ಕ್ಕೆ | ಎತ್ತಿನಗಾಡಿ, ಟ್ರ್ಯಾಕ್ಟರ್, ಟಿಲ್ಲರ್ ಜಾಥಾ. ಪ್ರಗತಿಪರ ರೈತ ಜಯಪ್ರಕಾಶ್ ಅವರಿಂದ ಉದ್ಘಾಟನೆ.
♦ ಚಲನಚಿತ್ರ ರಸಗ್ರಹಣ ಕಾರ್ಯಾಗಾರ | ಸ್ಥಳ : ಡಾ. ಅಂಬೇಡ್ಕರ್ ಭವನ |ಸಮಯ : ಬೆಳಗ್ಗೆ 10ಕ್ಕೆ | ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಡಿ.ಸತ್ಯಪ್ರಕಾಶ್ ಅವರಿಂದ ಉದ್ಘಾಟನೆ. ಕಿರುಚಿತ್ರ ನಿರ್ಮಾಣ, ಚಲನಚಿತ್ರ ಛಾಯಾಗ್ರಹಣ ಕುರಿತು ಸಂವಾದ.
♦ ರೈತ ದಸರಾ ವೇದಿಕೆ ಕಾರ್ಯಕ್ರಮ | ಸ್ಥಳ : ಕುವೆಂಪು ರಂಗಮಂದಿರ | ಸಮಯ : ಬೆಳಗ್ಗೆ 11 ಗಂಟೆಗೆ | ಪ್ರಗತಿಪರ ರೈತ ಟಿ.ಎನ್.ರಮೇಶ್ ಅವರಿಂದ ಉದ್ಘಾಟನೆ. ಕೃಷಿ ಕ್ಷೇತ್ರದ ಸಾಧಕರಿಗೆ ಸನ್ಮಾನ.
♦ ಮಕ್ಕಳ ದಸರಾ ಸಮಾರೋಪ | ಸ್ಥಳ : ಡಾ. ಅಂಬೇಡ್ಕರ್ ಭವನ | ಸಮಯ : ಸಂಜೆ 5ಕ್ಕೆ | ರಾಷ್ಟ್ರಮಟ್ಟದ ಚೆಸ್ ಆಟಗಾರ ಸಮರ್ಥ್ ಪೂಜಾರ್ ಅವರಿಂದ ಉದ್ಘಾಟನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಸನ್ಮಾನ. ಮಕ್ಕಳ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ.
♦ ರಂಗ ದಸರಾ | ಸ್ಥಳ : ಕುವೆಂಪು ರಂಗಮಂದಿರ | ಸಮಯ : ಸಂಜೆ 5.30ಕ್ಕೆ | ರಂಗ ನಿರ್ದೇಶಕ ಮಂಜು ಕೊಡಗು ಅವರಿಂದ ರಂಗ ಛಾಯಾಚಿತ್ರ ಪ್ರದರ್ಶನ ಮತ್ತು ರಂಗ ದಸರಾ ಉದ್ಘಾಟನೆ.
♦ ರಂಗ ಗೀತೆ ಗಾಯನ ತರಬೇತಿ | ಸ್ಥಳ : ಕುವೆಂಪು ರಂಗಮಂದಿರ | ಸಮಯ : ಸಂಜೆ 7.30ಕ್ಕೆ | ರಂಗ ಗೀತೆ ಗಾಯಕಿ ನಾಗರಾತ್ನ ಅವರಿಂದ ಚಾಲನೆ. ಅಜಯ್ ನೀನಾಸಂ ಮತ್ತು ಚಂದ್ರಶೇಖರ್ ಹಿರೆಗೋಣಿಗೆರೆಹಳ್ಳಿ ಅವರಿಂದ ನಿರ್ದೇಶನ.
♦ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ನಾಗಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ದಸರಾ ಕಾರ್ಯಕ್ರಮ : ಸಂಜೆ 5.30ಕ್ಕೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಭಜನೆ | ಸಂಜೆ. 6.30ಕ್ಕೆ ಅಗಜೆ ಸಂಗೀತ ವಿದ್ಯಾಲಯದ ವಿದುಷಿ ಅನುಶ್ರೀ ಅರ್ಪಿತ್ ಮತ್ತು ಶಿಷ್ಯ ವೃಂದದಿಂದ ಸಂಗೀತ ಕಾರ್ಯಕ್ರಮ ಇರಲಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ತಾಪಮಾನ ಹೆಚ್ಚಳ, ಮಳೆ ಆಗಲಿದೆಯಾ?