ಶಿವಮೊಗ್ಗದಲ್ಲಿ ಹಬ್ಬದ ಖರೀದಿ ಅಬ್ಬರ, ಗಾಂಧಿ ಬಜಾರ್‌, ಹೂವಿನ ಮಾರುಕಟ್ಟೆಯಲ್ಲಿ ಜನಸಾಗರ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ (Festival) ಸಂಭ್ರಮ ಜಿಲ್ಲೆಯಾದ್ಯಂತ ಗರಿಗೆದರಿದೆ. ಹೀಗಾಗಿ ಪೂಜೆಗೆ ಅಗತ್ಯ ಹೂವು-ಹಣ್ಣು, ಬೂದುಗುಂಬಳ ಖರೀದಿಯ ಭರಾಟೆ ಮಾರುಕಟ್ಟೆಯಲ್ಲಿ ಮಂಗಳವಾರ ಜೋರಾಗಿತ್ತು. 

ಎಲ್ಲೆಲ್ಲಿ ಖರೀದಿ ಇತ್ತು?

ಶಿವಪ್ಪನಾಯಕ ವೃತ್ತ, ಗಾಂಧಿ ಬಜಾರ್‌, ಪಾಲಿಕೆ ಪಕ್ಕದ ಹೂವಿನ ಮಾರುಕಟ್ಟೆ ರಸ್ತೆ, ಕಮಲಾ ನೆಹರು ಕಾಲೇಜು ರಸ್ತೆ, ದುರ್ಗಿಗುಡಿ, ಗೋಪಿ ಸರ್ಕಲ್‌, ಜೈಲ್ ರಸ್ತೆ, ಎಪಿಎಂಸಿ ಮಾರುಕಟ್ಟೆ ಹತ್ತಿರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ರೈತರು ಹೂವು, ಬಾಳೆಕಂದು, ಬಾಳೆ ಎಲೆ, ಮಾವಿನ ಎಲೆ, ಬೂದಗುಂಬಳನ್ನು ಮಾರಾಟಕ್ಕೆ ಇಟ್ಟಿದ್ದರು.

011025-Dasara-Ayaudh-Pooja.webp

ಹೇಗಿತ್ತು ಖರೀದಿ?

ಮಂಗಳವಾರ ಬೆಳಗ್ಗೆಯಿಂದಲೇ ಪೂಜೆಗೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಿತ್ತು. ಸಂಜೆ ವೇಳೆಗೆ ಗಾಂಧಿ ಬಜಾರ್‌, ಶಿವಪ್ಪನಾಯಕ ಪ್ರತಿಮೆ ಮುಂಭಾಗ ಮತ್ತು ಹೂವಿನ ಮಾರುಕಟ್ಟೆ ಬಳಿ ಜನ ಸಾಗರವೆ ನೆರೆದಿತ್ತು. ವಾಹನ ಸಂಚಾರವು ನಿಧಾನವಾಗಿತ್ತು. ಸಂಜೆ ಮಳೆಯ ನಡುವೆಯು ಹಬ್ಬದ ಖರೀದಿ ಬಿರುಸು ಪಡೆದಿತ್ತು.

011025-Dasara-Ayaudh-Pooja.webp

ಯಾವ್ಯಾವುದರ ದರ ಎಷ್ಟಿತ್ತು?

ಹೂವು ದರ(ಪ್ರತಿ ಮಾರಿಗೆ): ಚೆಂಡು ಕನಿಷ್ಠ ₹50, ಸೇವಂತಿಗೆ ₹300, ಮಲ್ಲಿಗೆ ₹100, ದುಂಡು ಮಲ್ಲಿಗೆ ₹150, ಕನಕಾಂಬರ, ಕಣಗಿಲು ₹200, ಕಮಲ ₹50(ಎರಡಕ್ಕೆ).

ಇದನ್ನೂ ಓದಿ » ಶಿವಮೊಗ್ಗ ಸಿಟಿಯ ಮತ್ತೊಂದು ರಸ್ತೆಯಲ್ಲಿ ಒನ್‌ ವೇ ಸಂಚಾರ, ಜಿಲ್ಲಾಧಿಕಾರಿ ಆದೇಶ

ಹಣ್ಣು ದರ(ಕೆಜಿಗೆ): ಮೋಸಂಬಿ, ಕಿತ್ತಳೆ ಕನಿಷ್ಠ ₹80, ದಾಳಿಂಬೆ, ಸೀತಾಫಲ, ಪೇರಲೆ, ಬಾಳೆಹಣ್ಣು ₹100, ಸೇಬು ₹150, ಬೂದಗುಂಬಳ ಕೆಜಿಗೆ ₹50 ಇತ್ತು.

011025-Dasara-Ayaudh-Pooja.webp

Festival

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment