ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 JANUARY 2024
SHIMOGA : ಎಲ್ಲ ವಿಷಯಗಳಿಗು ಮೊಬೈಲ್ ಮೇಲೆ ಅವಲಂಬಿತವಾಗಲು ಸಾಧ್ಯವಿಲ್ಲ. ದಿನಕ್ಕೆ ಸ್ವಲ್ಪ ಸಮಯವಾದರು ಪುಸ್ತಕಗಳನ್ನು ಓದಬೇಕು. ಇದನ್ನು ರೂಢಿಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದರು.
ಸಿಟಿಜನ್ಸ್ ಫೋರಂ, ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಜಿಲ್ಲಾ ಸೊಸೈಟಿ, ಪೀಪಲ್ಸ್ ಲಾಯರ್ಸ್ ಗಿಲ್ಡ್ ಸಹಯೋಗದಲ್ಲಿ ವಕೀಲರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರ ‘ಕಳೆದ ಕಾಲ, ನಡೆದ ದೂರ’ ಕೃತಿ ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಾತನಾಡಿದರು.
ಯುವ ಜನತೆ ಉದ್ಯೋಗ ಪಡೆದ ನಂತರ ಓದುವ ಹವ್ಯಾಸ ಮರೆತಿದ್ದಾರೆ. ಜೀವನದ ಯಶಸ್ಸಿಗೆ ಓದು ಬಹಳ ಮುಖ್ಯ. ಆದ್ದರಿಂದ ಓದುವ ಅಭ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಯಾರೆಲ್ಲ ಏನೇನು ಮಾತನಾಡಿದರು?
ಸಿಟಿಜನ್ ಫೋರಂನ ಅಧ್ಯಕ್ಷ ಕೆ.ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಟಿ.ಆರ್. ಅಶ್ವಥ ನಾರಾಯಣ ಶೆಟ್ಟಿ, ಎರಡನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಶರಾದ ಬಿ.ಆರ್.ಪಲ್ಲವಿ, ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಎಸ್‌ಎಂಎಸ್‌ಎಸ್‌ಎಸ್‌ನ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಷನ್ ಪಿಂಟೊ ಮತ್ತಿತರರಿದ್ದರು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲಾಧಿಕಾರಿ ವರ್ಗಾವಣೆ, ಹೊಸ ಡಿಸಿ ಯಾರು? ಇಲ್ಲಿದೆ ಅವರ ಕುರಿತ 3 ಪ್ರಮುಖಾಂಶ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422