ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 8 NOVEMBER 2020
ಶಿವಮೊಗ್ಗ ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಈ ನಡುವೆ ಚುನಾವಣೆಗೆ ತಡೆ ನೀಡುವಂತೆ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸಲ್ಲಿಸದ್ದ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ. ಹಾಗಾಗಿ ನಗದಿಯಂತೆ ಚುನಾವಣೆ ನಡೆಯಲಿದೆ
ಯಾವಾಗ ನಡೆಯುತ್ತೆ ಚುನಾವಣೆ?
ನವೆಂಬರ್ 9ರಂದು ಶಿವಮೊಗ್ಗ ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಬೆಳಗ್ಗೆ 9 ರಿಂದ 11ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಚುನಾವಣೆಗೆ ಸಿದ್ಧತೆ ನಡೆಯಲಿದೆ. ಮಧ್ಯಾಹ್ನ 1ರ ಬಳಿಕ ಅಗತ್ಯಬಿದ್ದರೆ ಚುನಾವಣೆ ನಡೆಯಲಿದೆ. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನಾಗೇಂದ್ರ ಎಫ್.ಹೊನ್ನಳ್ಳಿ ಅವರನ್ನು ಚುನಾವಣಾಧಿಕಾರಿ ಅಗಿ ನೇಮಕ ಮಾಡಲಾಗಿದೆ.
ಚುನಾವಣೆಗೆ ತಡೆ ನೀಡದ ಹೈಕೋರ್ಟ್
ನವೆಂಬರ್ 9ರಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಮತ್ತು ತಮ್ಮ ಸದಸ್ಯತ್ವದ ಅನರ್ಹತೆ ಕುರಿತ ತೀರ್ಪಿಗೆ ತಡೆ ನೀಡುವಂತೆ ಮಾಜಿ ಅಧ್ಯಕ್ಷ ಮಂಜುನಾಥಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಪೀಠ, ತುರ್ತಾಗಿ ವಿಚಾರಣೆ ನಡೆಸುವ ಅರ್ಜಿ ಇದಲ್ಲ. ಮುಖ್ಯ ಅರ್ಜಿಯೊಂದಿಗೆ ವಿಚಾರಣೆ ನಡೆಯಲಿ ಎಂದು ಅಭಿಪ್ರಾಯಪಟ್ಟಿದೆ. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಂತೆ ಚುನಾವಣೆ ನಡೆಯಲಿದೆ.
ಮಂಜುನಾಥಗೌಡ ಸದಸ್ಯತ್ವ ರದ್ದು
ಶಿವಮೊಗ್ಗ ಡಿಸಿಸಿ ಬ್ಯಾಂಕ್ನ ವ್ಯವಹಾರಗಳ ಕುರಿತು ಚಿತ್ರದುರ್ಗದ ಜಂಟಿ ರಿಜಿಸ್ಟ್ರಾರ್ ಇಲಿಯಾಸ್ ಉಲ್ಲಾ ಷರೀಫ್ ಅವರು ತನಿಖೆ ನಡೆಸಿದ್ದರು. ಬಳಿಕ ಮಂಜುನಾಥಗೌಡ ಅವರ ಡಿಸಿಸಿ ಬ್ಯಾಂಕ್ ಸದಸ್ಯತ್ವವನ್ನು ಐದು ವರ್ಷ ಅನರ್ಹಗೊಳಿಸಿದ್ದರು. ಹಾಗಾಗಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಅಕ್ಟೋಬರ್ 17ರಂದು ಉಪಾಧ್ಯಕ್ಷ ಚನ್ನವೀರಪ್ಪ ಅವರು ಪ್ರಭಾರ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.
ಕುತೂಹಲ ಕೆರಳಿಸಿದ ಚುನಾವಣೆ
ನವೆಂಬರ್ 9ರಂದು ನಡೆಯಲಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಮಂಜುನಾಥಗೌಡ ಅವರ ನಿರ್ಧಾರ ಪ್ರಮುಖವಾಗಿದ್ದು, ಅವರ ಬಣದ ಯಾರಿಗಾದರೂ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ಇದೆ. ಆದರೆ ಯಾರಾಗ್ತಾರೆ ಅಧ್ಯಕ್ಷರು ಅನ್ನುವುದೇ ಕುತೂಹಲ. ಈ ನಡುವೆ ಚನ್ನವೀರಪ್ಪ ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422