ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC BANK) ಇದೇ ಮೊದಲ ಬಾರಿ ₹36.75 ಕೋಟಿ ಲಾಭ (Profit) ಗಳಿಸಿದೆ. ಮುಂದಿನ ಸಾಲಿನಲ್ಲಿ ₹40 ಕೋಟಿ ಲಾಭ ಮಾಡುವ ಗುರಿ ಇದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ಆರಂಭವಾಗಿ 73 ವರ್ಷವಾಗಿದೆ. ಇಷ್ಟು ವರ್ಷದಲ್ಲಿ ಇದೇ ಮೊದಲ ಬಾರಿ ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸಿದೆ ಎಂದು ತಿಳಿಸಿದರು.
ಅಧ್ಯಕ್ಷರು ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್
ಶಿವಮೊಗ್ಗ ಡಿಸಿಸಿ ಬ್ಯಾಂಕ್ ₹1690.17 ಕೋಟಿ ಠೇವಣಿ ಸಂಗ್ರಹಿಸಿದೆ. ಬೆಂಗಳೂರು ವಿಭಾಗದಲ್ಲಿ ಇದು ಮೊದಲನೆ ಸ್ಥಾನ. ಮುಂದಿನ ವರ್ಷ ₹2000 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಇದೆ.
ಬ್ಯಾಂಕಿನ ಷೇರು ಬಂಡವಾಳ ₹151.34 ಕೋಟಿ, ನಿಧಿಗಳು ₹96.69 ಕೋಟಿ, ದುಡಿಯುವ ಬಂಡವಾಳ ₹2582.86 ಕೋಟಿ. ಬ್ಯಾಂಕಿನ ವಾರ್ಷಿಕ ವ್ಯವಹಾರ ₹3521.08 ಕೋಟಿ.

ಬ್ಯಾಂಕಿನಲ್ಲಿ 2,67,156 ಗ್ರಾಹಕರಿದ್ದು, ಈ ಪೈಕಿ ಒಟ್ಟು 1,41,454 ಠೇವಣಿದಾರರು ಹಾಗೂ ಒಟ್ಟು 1,25,702 ಗ್ರಾಹಕರು ಸಾಲ ಪಡೆದಿದ್ದಾರೆ.
ಡಿಸಿಸಿ ಬ್ಯಾಂಕಿನಿಂದ 1,08,500 ರೈತರಿಗೆ ₹1206.60 ಕೋಟಿ ಕೃಷಿ ಸಾಲ, 650 ರೈತರಿಗೆ ₹100.70 ಕೋಟಿ ಮಧ್ಯಮಾವಧಿ ಕೃಷಿ ಸಾಲ ನೀಡಲಾಗಿದೆ. ಕೃಷಿ ಸಾಲ ವಸೂಲಾತಿ ಶೇ.99.60 ರಷ್ಟಿದೆ. 2025-26 ನೇ ಸಾಲಿಗೆ ಒಟ್ಟು 1,30,000 ಸದಸ್ಯರಿಗೆ ₹1400 ಕೋಟಿ ಕೃಷಿ ಸಾಲ ವಿತರಣೆ ಮಾಡುವ ಗುರಿ ಇದೆ.
ಅಮೃತ ಮಹೋತ್ಸವ ಕಟ್ಟಡ
2028ಕ್ಕೆ ಡಿಸಿಸಿ ಬ್ಯಾಂಕ್ ಸ್ಥಾಪನೆಯಾಗಿ 75 ವರ್ಷ ಪೂರೈಸಲಿದೆ. ಹಾಗಾಗಿ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ಅಮೃತ ಮಹೋತ್ಸವ ಕಟ್ಟಡ ನಿರ್ಮಿಸಲಾಗುತ್ತದೆ. ಇದೇ ವೇಳೆ ಶಾಖೆಗಳ ಸಂಖ್ಯೆ 50ಕ್ಕೆ ಹೆಚ್ಚಿಸುವ ಗುರಿ ಇದೆ. ಸದ್ಯ 31 ಶಾಖೆಗಳಿವೆ. ದಸರಾ ಹೊತ್ತಿಗೆ ಭದ್ರಾವತಿಯ ಬಾರಂದೂರು,ಹೊಸನಗರದ ಚಿಕ್ಕಪೇಟೆ, ಸಾಗರದ ತ್ಯಾಗರ್ತಿಯಲ್ಲಿ ಆರಂಭಿಸಲಾಗುತ್ತದೆ.
ಅಕ್ಟೋಬರ್ ಅಂತ್ಯದ ವೇಳೆಗೆ ತೀರ್ಥಹಳ್ಳಿಯ ಎಪಿಎಂಸಿ ಆವರಣ, ಶಿವಮೊಗ್ಗದ ಗಾಜನೂರಿನಲ್ಲಿ ಶಾಖೆಗಳನ್ನು ಪ್ರಾರಂಭಿಸಲಾಗುತ್ತದೆ. ಇದರಿಂದ ಶಾಖೆಗಳ ಸಂಖ್ಯೆ 36ಕ್ಕೆ ಏರಿಕೆಯಾಗಲಿದೆ ಎಂದು ಮಂಜುನಾಥ ಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಸಿಇಒ ರಾಜಣ್ಣ ರೆಡ್ಡಿ.ಸಿ, ಬ್ಯಾಂಕಿನ ನಿರ್ದೇಶಕರಾದ ಬಸವರಾಜ್.ಡಿ.ಎಲ್, ಚಂದ್ರಶೇಖರ.ಎಸ್.ಪಿ, ರುದ್ರೇಗೌಡ.ಕೆ.ಪಿ, ಪರಮೇಶ.ಎಂ.ಎಂ, ಮರಿಯಪ್ಪ.ಎಸ್.ಕೆ, ಸುಧೀರ್.ಜಿ.ಎನ್, ಮಹಲಿಂಗಯ್ಯ ಶಾಸ್ತ್ರಿ.ಎಸ್.ಎನ್, ರವೀಂದ್ರ.ಹೆಚ್.ಎಸ್, ದುಗ್ಗಪ್ಪಗೌಡ.ಕೆ.ಪಿ ಇದ್ದರು.
ಇದನ್ನೂ ಓದಿ » ಮದುವೆ ಆಮಂತ್ರಣ ಪತ್ರಿಕೆ ಕೊಡಲು ಹೋಗುತ್ತಿದ್ದಾಗ ಅಪಘಾತ, ಯುವತಿ ಸಾವು, ಹೇಗಾಯ್ತು ಘಟನೆ?
Shimoga DCC Bank Profit
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





