BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ಸಿಬ್ಬಂದಿ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ದೇಶಾದ್ಯಂತ ಇಂಡಿಗೋ ವಿಮಾನಯಾನ (Indigo Flight) ಸೇವೆ ವ್ಯತ್ಯಯವಾಗಿದೆ. ಕಳೆದ ಮೂರು ದಿನದಲ್ಲಿ ಒಂದು ಸಾವಿರಕ್ಕು ಹೆಚ್ಚು ವಿಮಾನ ಹಾರಾಟ ರದ್ದಾಗಿದೆ ‍(Flight Cancel) ಎಂದು ವರದಿಯಾಗಿದೆ. ಈ ಮಧ್ಯೆ ಶಿವಮೊಗ್ಗಕ್ಕು ಬಿಸಿ ತಟ್ಟಿದೆ.

ಬೆಂಗಳೂರು – ಶಿವಮೊಗ್ಗ – ಬೆಂಗಳೂರು ಮಧ್ಯೆ ಪ್ರತಿದಿನ ಇಂಡಿಗೋ ವಿಮಾನ ಸೇವೆ ಇದೆ. ಆದರೆ ಸೇವೆಯಲ್ಲಿ ವ್ಯತ್ಯಯದಿಂದಾಗಿ ಇಂದು ಇಂಡಿಗೋ ವಿಮಾನ ಸಂಚಾರ ರದ್ದಾಗಿದೆ. ಇವತ್ತು 60 ಮಂದಿ ಪ್ರಯಾಣಿಕರು ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ತೆರಳಲು ಟಿಕೆಟ್‌ ಬುಕ್‌ ಮಾಡಿದ್ದರು ಎಂದು ತಿಳಿದು ಬಂದಿದೆ.

Indigo-ATR-Flight-in-Shivamogga-Airport-Shimoga-Live-news.webp

ಇದನ್ನೂ ಓದಿ » ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್‌ ಆದೇಶ, ಯಾಕೆ?

ತಡವಾಗಿ ಬಂದು ಹೋಯ್ತು

ಇನ್ನು, ಗುರವಾರ ಮಧ್ಯಾಹ್ನ ಶಿವಮೊಗ್ಗಕ್ಕೆ ಆಗಮಿಸಬೇಕಿದ್ದ ಇಂಡಿಗೋ ವಿಮಾನ ಸಂಜೆ ವೇಳೆಗೆ ಆಗಮಿಸಿತ್ತು ಎಂದು ಮೂಲಗಳು ತಿಳಿಸಿವೆ. ಸಂಜೆ 4.30ಕ್ಕೆ ಆಗಮಿಸಿದ್ದ ಇಂಡಿಗೋ ವಿಮಾನ ಬಳಿಕ ಬೆಂಗಳೂರಿಗೆ ತೆರಳಿತ್ತು. ಇವತ್ತು ವಿಮಾನ ರದ್ದಾಗಿದೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment