ಶಿವಮೊಗ್ಗ: ಜಾತಿ ಸಮೀಕ್ಷೆಯಲ್ಲಿ (Caste Survey) ಹಿಂದೂ ಧರ್ಮಿಯರು ಪ್ರತ್ಯಕ್ಷವಾಗಿ ಪಾಲ್ಗೊಳ್ಳಬೇಕು. ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಿ. ಜಾತಿ ಕಾಲಂನಲ್ಲಿ ಆಯಾಯ ಜಾತಿಯ, ಉಪ ಜಾತಿ ಕಾಲಂನಲ್ಲಿ ಉಪ ಜಾತಿಯ ಹೆಸರನ್ನು ಬರೆಯಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಮನವಿ ಮಾಡಿದರು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್.ಎನ್.ಚನ್ನಬಸಪ್ಪ, ವೀರಶೈವ, ಲಿಂಗಾಯತ ಸೇರಿ ಎಲ್ಲ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದು ಎಂದೇ ಬರೆಯಿಸಬೇಕು. ಇದರಲ್ಲಿ ನಿಜವಾದ ಭಾರತೀಯತೆ ಇದೆ. ಇದು ನಂಬಿಕೆಯ ಪ್ರಶ್ನೆಯಾಗಿದೆ ಎಂದರು.
ಎಂಎಲ್‌ಎ ಸುದ್ದಿಗೋಷ್ಠಿಯ ಹೈಲೈಟ್
- ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ನಡೆಸುವ ಅಧಿಕಾರವಿಲ್ಲ. ರಾಜ್ಯ ಸರ್ಕಾರದ್ದು ಕಾನೂನುಬಾಹಿರ ಮತ್ತು ಅವೈಜ್ಞಾನಿಕ ಕ್ರಮ. ಕೇಂದ್ರ ಸರ್ಕಾರ ಸಮೀಕ್ಷೆ ನಡೆಸಲು ಸಿದ್ದವಾಗಿದೆ.

- ಜಾತಿಗಳನ್ನು ಒಡೆದು ಆಳುವ ನೀತಿಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಈ ಬಗ್ಗೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕು.
- ಹಿಂದೂ ಧರ್ಮದ ಜಾತಿ, ಸಮುದಾಯವನ್ನು ಕ್ರೈಸ್ತ ಧರ್ಮಕ್ಕೆ ಸೇರಿಸಲು ಹೊರಟಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲ.
- ಕ್ರೈಸ್ತ ಲಿಂಗಾಯತ, ಕ್ರೈಸ್ತ ಬ್ರಾಹ್ಮಣ ಎಂದು ಬರೆಯಿಸಬೇಕು ಎಂದು ಸರ್ಕಾರ ಹೇಳಿದೆ. ಆದರೆ ಮತಾಂತರ ಆದವರಿಗೆ ಹಿಂದೂ ಧರ್ಮದ ಜಾತಿಗಳೇಕೆ ಬೇಕು?
- ಮತಾಂತರ ಆಗಲು ಸರ್ಕಾರವೆ ಕುಮ್ಮಕ್ಕು ನೀಡುತ್ತಿದೆ. ಇದು ಸೋನಿಯಾ ಗಾಂಧಿ ಅವರನ್ನು ತೃಪ್ತಿ ಪಡಿಸುವ ಪ್ರಯತ್ನವಾಗಿದೆ.
ಇದನ್ನೂ ಓದಿ » ಶಿವಮೊಗ್ಗ ದಸರಾಗೆ ಸಾಲು ಸಾಲು ಸಿನಿಮಾ ಸ್ಟಾರ್‌ಗಳು , ಈ ಬಾರಿ ಯಾರೆಲ್ಲ ಬರ್ತಿದ್ದಾರೆ? ಯಾವೆಲ್ಲ ಸಿನಿಮಾ ಇರಲಿದೆ?

news, Karnataka, politics, caste survey, government, controversy, Hindu, Veerashaiva, Lingayat, local news.
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು





