ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 DECEMBER 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ : ನಗರದ ಉತ್ತರ ಭಾಗದಲ್ಲಿ ಬಾಕಿ ಉಳಿದಿರುವ 15 ಕಿ.ಮೀ ಬೈಪಾಸ್ ರಸ್ತೆ ನಿರ್ಮಾಣ, ಬೈಂದೂರು – ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ (national highway) ನಿರ್ಮಾಣಕ್ಕೆ ಮಂಜೂರಾತಿ ನೀಡಲು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಿಂಗ್ ರಸ್ತೆ ಪೂರ್ಣಗೊಳ್ಳಲಿದೆ
ಶಿವಮೊಗ್ಗ ನಗರದ ಉತ್ತರ ಭಾಗದಲ್ಲಿ 15 ಕಿ.ಮೀ ಬೈಪಾಸ್ ರಸ್ತೆ (national highway) ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು. ಇದರಿಂದ ನಗರದ 34 ಕಿ.ಮೀ ರಿಂಗ್ ರಸ್ತೆ ಪೂರ್ಣಗೊಳ್ಳಲಿದೆ ಎಂದು ಸಂಸದ ರಾಘವೇಂದ್ರ ಅವರು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಂಜೂರಾತಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.
ಬೈಂದೂರು – ರಾಣೆಬೆನ್ನೂರು ಹೆದ್ದಾರಿ
1,012 ಕೋಟಿ ರೂ. ವೆಚ್ಚದಲ್ಲಿ ಬೈಂದೂರು – ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766(ಸಿ) ನಿರ್ಮಾಣಕ್ಕೆ ಮಂಜೂರಾತಿ ಲಭಿಸಿದೆ. ಬೈಂದೂರಿನಿಂದ ಕೊಲ್ಲೂರು, ನಗರ, ಹೊಸನಗರ, ಆನಂದಪುರ, ಶಿಕಾರಿಪುರ, ಮಾಸೂರು, ರಟ್ಟೆಹಳ್ಳಿ ಮೂಲಕ ರಾಣೆಬೆನ್ನೂರಿಗೆ ಹೋಗಲಿದೆ. ಕಳೆದ ವರ್ಷ ಹೆದ್ದಾರಿಯ 7 ಕಿರು ಸೇತುವೆಗಳು ಹಾಗೂ 27.70 ಕಿ.ಮೀ ಉದ್ದದ ದ್ವಿಪಥ ರಸ್ತೆ ನಿರ್ಮಾಣಕ್ಕೆ 238.70 ಕೋಟಿ ರೂ. ಡಿಪಿಆರ್ ಗೆ ಮಂಜೂರಾತಿ ನೀಡಿಲಾಗಿದ್ದು, ಕಾಮಗಾರಿ ನಡೆಯುತ್ತಿದೆ.
ಇದನ್ನೂ ಓದಿ – ಲೋಕಸಭೆಯಲ್ಲಿ ಶರಾವತಿ ಸಂತ್ರಸ್ಥರ ಪರ ಚರ್ಚಿಸಿದ ಸಂಸದ ರಾಘವೇಂದ್ರ, ಏನೇನು ಪ್ರಸ್ತಾಪಿಸಿದರು?
ಬೈಂದೂರಿನಿಂದ ಹಾಲ್ ಕಲ್ ಜಂಕ್ಷನ್, ಕೊಲ್ಲೂರು ಮೂಲಕ ನಾಗೋಡಿವರೆಗಿನ 40.40 ಕಿ.ಮೀ ಉದ್ದದ ರಸ್ತೆಯನ್ನು (national highway) ದ್ವಿಪಥ ರಸ್ತೆಯನ್ನಾಗಿ ಅಗಲೀಕರಣ ಮಾಡಲು 394.05 ಕೋಟಿ ರೂ. ಡಿಪಿಆರ್ ಗೆ ಮಂಜೂರಾತಿ ನೀಡಲಾಗಿದೆ. ಶಿಕಾರಿಪುರ ಪಟ್ಟಣಕ್ಕೆ 6.57 ಕಿ.ಮೀ ಉದ್ದದ ಬೈಪಾಸ್ ರಸ್ತೆ ನಿರ್ಮಾಣಕ್ಕೆ 66.44 ಕೋಟಿ ರೂ. ಮೊತ್ತದ ಡಿಪಿಆರ್. ಹೊಸನಗರದ ಮಾವಿನಕೊಪ್ಪ ಸರ್ಕಲ್ ನಿಂದ ಹೊಸನಗರ ಬೈಪಾಸ್, ಶರಾವತಿ ಹಿನ್ನೀರಿಗೆ 1.54 ಕಿ.ಮೀ, 0.72 ಕಿ.ಮೀ ಉದ್ದದ 2 ಭಾರೀ ಸೇತುವೆಗಳ ನಿರ್ಮಾಣ, ಆಡುಗೋಡಿವರೆಗೆ 13.82 ಕಿ.ಮೀ ಉದ್ದದ ಬದಲೀ ರಸ್ತೆ ನಿರ್ಮಾಣ ಮಾಡುವ 313.56 ಕೋಟಿ ಡಿಪಿಆರ್ ಗೆ ಮಂಜೂರಾತಿ ನೀಡಲಾಗಿದೆ. ಈತನಕ 1012.75 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದ್ದಾರೆ.
ರಸ್ತೆ ಅಗಲೀಕರಣಕ್ಕೆ ಮನವಿ
ಶಿವಮೊಗ್ಗ ಜಿಲ್ಲೆಯ ಪ್ರಮುಖ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ. ಇದಕ್ಕೆ ಸಚಿವ ನಿತಿನ್ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
- ಶಿವಮೊಗ್ಗ – ಹೊನ್ನಾಳಿ – ಮಲೆಬೆನ್ನೂರು – ಹರಿಹರ – ಹರಪನಹಳ್ಳಿ – ಮರಿಯಮ್ಮನಹಳ್ಳಿ
- ಶಿವಮೊಗ್ಗ – ಶಿಕಾರಿಪುರ – ಶಿರಾಳಕೊಪ್ಪ – ಹಾನಗಲ್ – ತಡಸ ರಸ್ತೆ
- ಆಯನೂರು – ರಿಪ್ಪನ್ ಪೇಟೆ – ಹುಂಚ – ತೀರ್ಥಹಳ್ಳಿ – ಮಾಸ್ತಿಕಟ್ಟೆ – ಕುಂದಾಪುರ ರಸ್ತೆ
- ಸಾಗರ – ಸೊರಬ – ಶಿರಾಳಕೊಪ್ಪ – ಆನವಟ್ಟಿ ರಸ್ತೆ
ಈ ರಸ್ತೆಗಳ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.