SHIVAMOGGA LIVE NEWS | 26 JANUARY 2023
SHIMOGA | ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀಡಾಡಿ ಕುದುರೆಗಳ ಹಾವಳಿ ಹೆಚ್ಚಾಗಿದೆ. ಈ ಸಂಬಂಧ ದೂರುಗಳು ಬರುತ್ತಿವೆ. ಕುದುರೆಗಳ ವಾರಸುದಾರರು ಇದ್ದಲ್ಲಿ ಅವುಗಳನ್ನು ಸುಪರ್ದಿಗೆ ಪಡೆಯಬೇಕು. ಇಲ್ಲವಾದಲ್ಲಿ ಪಾಲಿಕೆಯೇ ಕುದುರೆಗಳನ್ನು ವಶಕ್ಕೆ ಪಡೆದು ಎನ್.ಜಿ.ಒ ಅಥವಾ ಇವುಗಳನ್ನು ಸಾಕುವ ಇಚ್ಛೆಯುಳ್ಳ ಸಾರ್ವಜನಿಕರಿಗೆ ಕೊಡಲಿದೆ ಎಂದು ಮಹಾನಗರ ಪಾಲಿಕೆ ಎಚ್ಚರಿಕೆ (warning) ನೀಡಿದೆ.
ಅಪಘಾತಕ್ಕೆ ಕಾರಣವಾಗುತ್ತಿವೆ ಕುದುರೆ
ಕುದುರೆಗಳು ರಸ್ತೆ ಮತ್ತು ವೃತ್ತಗಳಲ್ಲಿ ಅಡ್ಡಾ ದಿಡ್ಡಿ ತಿರುಗಾಡುವುದು, ಮಲಗುವುದು, ಸಾರ್ವಜನಿಕರ ಮೇಲೆ ನುಗ್ಗುವುದು ಹಾಗೂ ವಾಹನಗಳಿಗೆ ಅಡ್ಡ ಬರುತ್ತಿರುವುದರಿಂದ ಅವಘಾತಗಳಾಗುತ್ತಿವೆ. ಈ ಬಗ್ಗೆ ಅನೇಕ ದೂರುಗಳು ಬರುತ್ತಿದೆ. ಅದ್ದರಿಂದ ಅನೇಕ ಬಾರಿ ಪತ್ರಿಕಾ ಪ್ರಕಟಣೆ ಹೊರಡಿಸಿ, ಮಾಲೀಕರು ತಮ್ಮ ಕುದುರೆಗಳನ್ನು ಸುಪರ್ದಿಗೆ ತೆಗೆದುಕೊಳ್ಳಲು ತಿಳಿವಳಿಕೆ ಮೂಡಿಸಲಾಗಿತ್ತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ JOB FAIR, ಇನ್ಫೋಸಿಸ್, ಬೆಂಗಳೂರು ಏರ್ ಪೋರ್ಟ್ ಸೇರಿ 40ಕ್ಕೂ ಹೆಚ್ಚು ಕಂಪನಿ ಭಾಗಿ, ನೋಂದಣಿ ಶುರು
ಒಂದು ವೇಳೆ ಸುಪರ್ದಿಗೆ ಪಡೆಯದಿದ್ದಲ್ಲಿ ಆಸಕ್ತಿಯುಳ್ಳ ಸಂಘ ಸಂಸ್ಥೆಗಳು ಅಥವಾ ಬಿಡಾಡಿ ಕುದುರೆಗಳನ್ನು ಸಾಕಿ ಉಪಯೋಗ ಪಡೆಯುವಂತ ಆಸಕ್ತಿಯುಳ್ಳ ವಿವಿಧ ಯೋಜನೆಗಳನ್ನು ಉಳ್ಳಂತ ಸಾರ್ವಜನಿಕರು ಮುಂದೆ ಬಂದಲ್ಲಿ ಕುದುರೆಗಳನ್ನು ನೀಡುವುದಾಗಿ ಪಕಟಣೆ ಹೊರಡಿಸಲಾಗಿದೆ.
ಕುದುರೆ ಸಾಗಿಸಲು ಎನ್.ಜಿ.ಒ ಮನವಿ
ಕೆಲವು ಸ್ವಯಂ ಸೇವಾ ಸಂಸ್ಥೆ, ಏಜೆನ್ಸಿಗಳು ಈ ಬೀಡಾಡಿ ಕುದುರೆಗಳನ್ನು ಉಚಿತವಾಗಿ ತಮ್ಮ ವಶಕ್ಕೆ ತೆಗೆದುಕೊಂಡು ಸಾಗಿಸಲು ಅನುಮತಿ ಕೇಳುತ್ತಿವೆ. ಅವುಗಳನ್ನು ಬಳಸಿಕೊಂಡು ಬ್ಯಾಟರಿ ಚಾಲಿತ ಯಂತ್ರವನ್ನು ಬಳಸುವುದು, ವ್ಯವಸಾಯ ಕ್ಷೇತ್ರ, ಸಾಗಾಣಿಕೆ ಕ್ಷೇತ್ರಕ್ಕೆ ಬಳಸಿಕೊಳ್ಳುವುದಕ್ಕೆ ಮನವಿ ಸಲ್ಲಿಸಿವೆ. ಈ ಪ್ರಸ್ತಾವನೆಗೆ ಮೈಸೂರಿನಲ್ಲಿರುವ ಕೇಂದ್ರ ಆಹಾರ ಸಂಶೋಧನ ಕೇಂದ್ರ, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ತೋಟಗಾರಿಕ ಮಿಷನ್ ಮಾರ್ಗದರ್ಶನ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
7 ದಿನ ಗಡುವು ನೀಡಿದ ಪಾಲಿಕೆ
ಈ ಪ್ರಕಟಣೆ ಹೊರಡಿಸಿದ 7 ದಿನಗಳೊಳಗೆ ವಾರಸುದಾರರು ತಮ್ಮ ಕುದುರೆಗಳನ್ನು ಸುಪರ್ದಿಗೆ ಪಡೆಯಬೇಕು. ಇಲ್ಲವಾದಲ್ಲಿ ಕಾರ್ಪೋರೇಷನ್ ಕಾಯ್ದೆ ಅನುಸಾರ ಬೀಡಾಡಿ ಕುದುರೆಗಳನ್ನು ಸೂಕ್ತ ಎನ್‍ಜಿಓಗಳ ವಶಕ್ಕೆ ನೀಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ. ಬೀಡಾಡಿ ಕುದುರೆಗಳ ಮಾಲೀಕರು ಮೊ. 9886326268 ಸಂಪರ್ಕಿಸಬಹುದು. healthcitycorporation@gmail.com ವಿಳಾಸಕ್ಕೆ ತಮ್ಮ ದೂರುಗಳನ್ನು ದಾಖಲಿಸಬಹುದಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ, ಏನದು? ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200