ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 APRIL 2021
ಮಾಸ್ಕ್ ಧರಿಸದವರಿಗೆ ಕಪಾಳಮೋಕ್ಷ, ಹಣವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ವಸೂಲಿ ಮಾಡುತ್ತಿರುವ ಪ್ರಕರಣಗಳ ನಡುವೆ ಶಿವಮೊಗ್ಗ ಪೊಲೀಸರು ವಿಭಿನ್ನವಾಗಿ ಕಾರ್ಯ ನಿರ್ವಹಿಸಿ, ಜನ ಮೆಚ್ಚುಗೆ ಗಳಿಸಿದ್ದಾರೆ.
ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಾಸ್ಕ್ ಧರಿಸದವರಿಗೆ ಕ್ಲಾಸ್ ತೆಗೆದುಕೊಂಡರು. ಬಳಿಕ ಮಾಸ್ಕ್ ವಿತರಣೆ ಮಾಡಿ, ಕರೋನದಿಂದ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.
ಮಾಸ್ಕ್ ತೊಡಿಸಿದ ಹೆಚ್ಚುವರಿ ಎಸ್ಪಿ
ಖಾಸಗಿ ಬಸ್ ನಿಲ್ದಾಣದಲ್ಲಿ ಹಲವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಹೆಚ್ಚುವರಿ ರಕ್ಷಣಾಧಿಕಾರಿ ಡಾ. ಹೆಚ್.ಟಿ.ಶೇಖರ್, ಡಿವೈಎಸ್ಪಿ ಪ್ರಶಾಂತ್ ಮತ್ತು ಪೊಲೀಸರು, ಪ್ರತಿಯೊಬ್ಬರಿಗೂ ಮಾಸ್ಕ್ ವಿತರಿಸಿದರು. ಮಾಸ್ಕ್ ತೊಡದೆ ಬಸ್ಸಿಗಾಗಿ ಕಾದು ಕೂತಿದ್ದ ಮಕ್ಕಳಿಗೆ ಹೆಚ್ಚುವರಿ ಎಸ್ಪಿ ಡಾ. ಶೇಖರ್ , ತಾವೇ ಮಾಸ್ಕ್ ತೊಡಿಸಿ, ಪೋಷಕರಿಗೆ ತಿಳಿವಳಿಕೆ ಹೇಳಿದರು.
ಬಸ್ಸಿನೊಳಗೆ ಜಾಗೃತಿ ಪಾಠ
ಪೊಲೀಸರು ಬಸ್ ನಿಲ್ದಾಣದಲ್ಲಿ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಕೆಲವರು ಕರ್ಚೀಫ್, ಟವೆಲ್ ಮುಖಕ್ಕೆ ಸುತ್ತಿಕೊಂಡರು. ಇದನ್ನು ಗಮನಿಸಿ ಬಸ್ ಏರಿದ ಹೆಚ್ಚುವರಿ ರಕ್ಷಣಾಧಿಕಾರಿ, ಜೀವ ಮತ್ತು ಜೀವನ ಮುಖ್ಯ. ದಂಡಕ್ಕೆ ಹೆದರಿ ಮುಖ ಮುಚ್ಚಿಕೊಳ್ಳುವುದರಿಂದ ಪ್ರಯೋಜನವಿಲ್ಲ. ಕರೋನದಿಂದ ಬಚಾವ್ ಆಗೋದು ಮುಖ್ಯ ಎಂದು ತಿಳಿವಳಿಕೆ ನೀಡಿದರು. ಅಲ್ಲದೆ ಮಾಸ್ಕ್ ವಿತರಿಸಿದರು.
ಸಿಟಿ ಬಸ್ನಲ್ಲಿ ಡಿವೈಎಸ್ಪಿ ಪಾಠ
ಶಿವಮೊಗ್ಗ ಡಿವೈಎಸ್ಪಿ ಪ್ರಶಾಂತ್ ಅವರು ನಗರ ಸಾರಿಗೆ ಬಸ್ಸುಗಳಲ್ಲಿ ಮಾಸ್ಕ್ ಧರಿಸದವರಿಗೆ ತಿಳಿವಳಿಕೆ ನೀಡಿದರು. ಕರೋನದಿಂದ ಕಾಪಾಡಿಕೊಳ್ಳಲು ಮಾಸ್ಕ್ ಧರಿಸುವುದು ಕಡ್ಡಾಯ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು.
ಜಾಗೃತಿ ಮೂಡಿಸುವ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಂಡ ಪ್ರಯೋಗದ ಜೊತೆಗೆ ಜನರ ಕಷ್ಟ ಅರಿತು ಮಾಸ್ಕ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
VIDEO NEWS
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422