ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 4 OCTOBER 2023
SHIMOGA : ಗಾಂಧಿ ಬಜಾರ್ (Gandhi Bazaar), ನೆಹರೂ ರಸ್ತೆಯಲ್ಲಿ ವ್ಯಾಪಾರ ವಹಿವಾಟು ನಿರಾತಂಕವಾಗಿ ನಡೆಯುತ್ತಿದೆ. ನಗರದಲ್ಲಿ ಜನ ಸಂಚಾರ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ.
ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಘಟನೆ ಬೆನ್ನಿಗೆ ಗಾಂಧಿ ಬಜಾರ್, ನೆಹರೂ ರಸ್ತೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗಿತ್ತು. ಇದರಿಂದ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸಿದ್ದರು. ಗ್ರಾಹಕರು ಕೂಡ ಗಾಂಧಿ ಬಜಾರ್ಗೆ ಬಂದ ಬರಿಗೈಲಿ ಮರಳಿದ್ದರು.
ಇದನ್ನೂ ಓದಿ – ಕಲ್ಲು ತೂರಾಟ ವೇಳೆ ರಾಗಿಗುಡ್ಡಕ್ಕೆ ಬಂದಿದ್ದ ಎರಡು ಓಮ್ನಿ ಕಾರು ಪತ್ತೆ, ವಿಚಾರಣೆ ಬಳಿಕ ಕಾರಿನಲ್ಲಿದ್ದವರಿಗೆ ರಿಲೀಫ್
ಎಲ್ಲವು ಸಹಜ ಸ್ಥಿತಿಗೆ
ಗಾಂಧಿ ಬಜಾರ್ನಲ್ಲಿ (Gandhi Bazaar) ವ್ಯಾಪಾರ, ವಹಿವಾಟು ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ. ಮಂಗಳವಾರವು ಇಲ್ಲಿ ಉತ್ತಮ ವಹಿವಾಟು ನಡೆದಿದೆ. ಇವತ್ತು ಕೂಡ ಗಾಂಧಿ ಬಜಾರ್ನಲ್ಲಿ ಗ್ರಾಹಕರ ಸಂಖ್ಯೆ ಸಾಮಾನ್ಯ ದಿನದ ಹಾಗೆ ಇದೆ. ಇನ್ನು, ನೆಹರೂ ರಸ್ತೆ, ದುರ್ಗಿಗುಡಿಯಲ್ಲೂ ಅಂಗಡಿ, ಮುಂಗಟ್ಟು ತೆರೆಯಲಾಗಿದೆ.
ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಮುಂದುವರೆದಿದೆ. ಇದರಿಂದ ವ್ಯಾಪಾರಕ್ಕೆ ಯಾವುದೆ ಸಮಸ್ಯೆ ಇಲ್ಲ. ಪ್ರತಿಭಟನೆಗಳಿಗೆ ಸೀಮಿತಗೊಳಿಸಿ ನಿಷೇಧಾಜ್ಞೆ ಇದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.



LATEST NEWS
- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 18 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

About The Editor
ನಿತಿನ್ ಆರ್.ಕೈದೊಟ್ಲು
















