ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |10 JANUARY 2023
ಶಿವಮೊಗ್ಗ : ಬೀರೂರು – ಶಿವಮೊಗ್ಗ – ತಾಳಗುಪ್ಪ ರೈಲ್ವೆ (train) ಮಾರ್ಗದ ವಿದ್ಯುದೀಕರಣ ಕಾಮಗಾರಿ ಬಿರುಸಾಗಿ ನಡೆಯುತ್ತಿದೆ. ಈಗಾಗಲೆ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ.
ತುಂಗಾ ನದಿ ರೈಲ್ವೆ (train) ಸೇತುವೆ ಮೇಲೆ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದ್ದು, ಕೇಬಲ್ ಗಳನ್ನು ಕೂಡ ಹಾಕಲಾಗಿದೆ.
ಬೀರೂರು – ಶಿವಮೊಗ್ಗ – ತಾಳಗುಪ್ಪ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿಗಾಗಿ 2020 -21ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ 25 ಕೋಟಿ ರೂ. ಮೀಸಲಿಡಲಾಗಿತ್ತು. ರೈಲ್ವೆಯ ಸೆಂಟ್ರಲ್ ಆರ್ಗನೈಸೇಷನ್ ಫಾರ್ ರೈಲ್ವೆ ಎಲೆಕ್ಟ್ರಿಫಿಕೇಷನ್ ಸಂಸ್ಥೆ ಈ ಮಾರ್ಗದ ವಿದ್ಯುದೀಕರಣ ಕಾಮಗಾರಿ ನಡೆಸುತ್ತಿದೆ.
ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡರೆ ತಾಳಗುಪ್ಪ ಮತ್ತು ಶಿವಮೊಗ್ಗಕ್ಕೆ ವಿದ್ಯುತ್ ಇಂಜಿನ್ ಗಳು ಬರಲಿವೆ. ಇದರಿಂದ ರೈಲುಗಳ ವೇಗವು ಕೂಡ ಹೆಚ್ಚಳವಾಗಲಿದೆ.
ಇದನ್ನೂ ಓದಿ – ಶಿವಮೊಗ್ಗ – ಮೈಸೂರು ನಡುವೆ ಎಷ್ಟು ರೈಲುಗಳಿವೆ, ಎಲ್ಲೆಲ್ಲಿ ಸ್ಟಾಪ್ ಇದೆ, ಟೈಮಿಂಗ್ ಏನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422