ಶಿವಮೊಗ್ಗ ಲೈವ್.ಕಾಂ |SHIMOGA NEWS | 23 NOVEMBER 2020
ನಿಗದಿಯಂತೆ ಹಿಮಾಚಲ ಪ್ರದೇಶದಲ್ಲಿರುವ ಅಟಲ್ ಟನಲ್ ತಲುಪಿದ ಶಿವಮೊಗ್ಗದ ಯುವಕ. ಟನಲ್‍ನಲ್ಲಿ ಒಂಭತ್ತು ಕಿಲೋ ಮೀಟರ್ ಸೈಕಲ್ ಪಯಣ.
30 ದಿನದ ಸೈಕಲ್ ಯಾತ್ರೆ
ಶಿವಮೊಗ್ಗದ ಸಿದ್ದೇಶ್ವರಸ್ವಾಮಿ ಹಿರೇಮಠ್, ಸೈಕಲ್‌ನಲ್ಲಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾರೆ. 30 ದಿನದ ಸೈನಲ್ ಯಾತ್ರೆಯಲ್ಲಿ 2700 ಕಿ.ಮೀ ಕ್ರಮಿಸಿದ್ದಾರೆ. ಹಿಮಾಚಲ ಪ್ರದೇಶದ ಅಟಲ್ ಟನಲ್ ತಲುಪಬೇಕು ಅನ್ನುವುದು ಸಿದ್ದೇಶ್ವರಸ್ವಾಮಿ ಹಿರೇಮಠ್ ಗುರಿಯಾಗಿತ್ತು.
ಹೇಗಿತ್ತು ಯಾತ್ರೆ?
- ಸಿದ್ದೇಶ್ವರಸ್ವಾಮಿ ಹಿರೇಮಠ ಅವರು ಅಕ್ಟೋಬರ್ 22ರಂದು ಬೆಳಗ್ಗೆ ಶಿವಮೊಗ್ಗದಿಂದ ಸೈಕಲ್ ಯಾತ್ರೆ ಆರಂಭಿಸಿದ್ದರು.
- ದಾರಿ ಉದ್ದಕ್ಕೂ ಸಿದ್ದೇಶ್ವರಸ್ವಾಮಿ ಅವರಿಗೆ ಜನರು ಪ್ರೋತ್ಸಾಹ ನೀಡಿದ್ದಾರೆ.
- ಸಾರ್ವಜನಿಕ ಸಭೆ, ಸಮಾರಂಭಗಳು, ಪೊಲೀಸ್ ಠಾಣೆಗಳು ಸೇರಿ ಹಲವು ಕಡೆ ಸಿದ್ದೇಶ್ವರಸ್ವಾಮಿ ಅವರಿಗೆ ಸನ್ಮಾನಿಸಲಾಗಿದೆ.
- ದಾರಿ ಉದ್ದಕ್ಕೂ ಎಲ್‍ಐಸಿ ಅಧಿಕಾರಿಗಳು ಸಹಕಾರ ನೀಡಿದ್ದಾರೆ.
- ಕೆಲವರು ತಮ್ಮ ಮನೆಯಲ್ಲಿ ಉಳಿಯವಲು ಅವಕಾಶ ಕಲ್ಪಿಸಿದರೆ, ಇನ್ನೂ ಕೆಲವರು ಲಾಡ್ಜಿಂಗ್ ವ್ಯವಸ್ಥೆ ಮಾಡಿದ್ದಾರೆ.
ಮೂರ್ನಾಲ್ಕು ದಿನಕ್ಕೊಮ್ಮೆ ವಿಶ್ರಾಂತಿ
ಶಿವಮೊಗ್ಗದಿಂದ ಬೆಳಗಾವಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಕುಲು ಮನಾಲಿ, ರೋಹ್ಟಂಗ್ ಮೂಲಕ ಸಿದ್ದೇಶ್ವರಸ್ವಾಮಿ ಹಿರೇಮಠ್ ಅವರು ಅಟಲ್ ಟನಲ್ ತಲುಪಿದ್ದಾರೆ. ಮೂರ್ನಾಲ್ಕು ದಿನಕ್ಕೊಮ್ಮೆ ಅಲ್ಲಲ್ಲಿ ವಿಶ್ರಾಂತಿ ಪಡೆದು, ಸೈಕ್ಲಿಂಗ್ ಮುಂದುವರೆಸುತ್ತಿದ್ದರು. ಇದರಿಂದ 2700 ಕಿ.ಮೀ ಕ್ರಮಿಸುವುದು ಸುಲಭವಾಯಿತು.
ಟನಲ್‌ನಲ್ಲಿ ಸೈಕ್ಲಿಂಗ್
ಅಟಲ್ ಟನಲ್ ತಲುಪಿದ ಶಿವಮೊಗ್ಗದ ಸಿದ್ದೇಶ್ವರಸ್ವಾಮಿ ಹಿರೇಮಠ, ಟನಲ್‌ನಲ್ಲಿ 9 ಕಿ.ಮೀ ಸೈಕಲ್ ಪಯಣ ಮಾಡಿದ್ದಾರೆ. ಹೀಗೆ, ಶಿವಮೊಗ್ಗದಿಂದ ಅಟಲ್ ಟನಲ್‌ಗೆ ಸೈಕಲ್ ಯಾತ್ರೆ ಮಾಡಿ ಸಿದ್ದೇಶ್ವರಸ್ವಾಮಿ ಹಿರೇಮಠ ದಾಖಲೆ ಮಾಡಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200