ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
SHIMOGA NEWS, 23 SEPTEMBER 2024 : ಸವಳಂಗ ರಸ್ತೆಯ ನೂತನ ಫ್ಲೈ ಓವರ್ ಮೇಲಿನ ಗುಂಡಿಗಳನ್ನು ಕೊನೆಗು ಬಂದ್ ಮಾಡಲಾಗುತ್ತಿದೆ. ಇಲ್ಲಿನ ಗುಂಡಿಗಳ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಇದರ ಬೆನ್ನಿಗೆ ಗುಂಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ (Impact).
ಒಂದೇ ಮಳೆಗಾಲಕ್ಕೆ ಸವಳಂಗ ರಸ್ತೆಯ ನೂತನ ಮೇಲ್ಸೇತುವೆ ಮೇಲೆ ಗುಂಡಿಗಳಾಗಿವೆ. ಜಾಯಿಂಟ್‌ಗಳ ಬಳಿ ವಾಹನದಲ್ಲಿ ಓಡಾಡುವವರಿಗೆ ಆತಂಕವಾಗುತ್ತಿದೆ. ಅಲ್ಲದೆ ಮೇಲ್ಸೇತುವೆ ಎರಡು ಬದಿ ರಸ್ತೆಯೂ ಗುಂಡಿಮಯವಾಗಿದೆ ಎಂದು ವರದಿ ಪ್ರಕಟಿಸಲಾಗಿತ್ತು.
ಗುಂಡಿ ಮಚ್ಚಿಸುವ ಕಾರ್ಯಾರಂಭ
ಇನ್ನು, ಶಿವಮೊಗ್ಗ ಲೈವ್.ಕಾಂ ವರದಿ ಬೆನ್ನಿಗೆ ಈ ಗುಂಡಿಗಳನ್ನು ಮುಚ್ಚಿಸುವ ಕಾರ್ಯ ಆರಂಭವಾಗಿದೆ. ಬೆಳಗ್ಗೆಯಿಂದಲೇ ಗುಂಡಿಗಳಿಗೆ ಡಾಂಬರ್ ಹಾಕಿ, ರೋಲರ್ ಹೊಡೆಸಲಾಗುತ್ತಿದೆ. ಇದರಿಂದ ವಾಹನ ಸವಾರರು ನಿರಾತಂಕವಾಗಿ ಗುಂಡಿಗಳ ಮೇಲೆ ಸಂಚರಿಸಬಹುದಾಗಿದೆ.

ಇದನ್ನೂ ಓದಿ » ತಿರುಪತಿ ಲಡ್ಡು ವಿವಾದ, ಶಿವಮೊಗ್ಗದಲ್ಲಿ ಸ್ವಾಮೀಜಿಯ ಮೌನವ್ರತ ಆರಂಭ

