ಶಿವಮೊಗ್ಗ ಲೈವ್.ಕಾಂ | SHIMOGA | 9 ನವೆಂಬರ್ 2019
ನಗರದ ಹೆಚ್‌ಪಿಸಿ ಚಿತ್ರಮಂದಿರದಲ್ಲಿ ಭರಾಟೆ’ ಚಿತ್ರದ ಪ್ರಮೋಷನ್‌ಗೆ ಭೇಟಿ ನೀಡಿದ್ದ ನಟ ಶ್ರೀಮುರುಳಿ ಭರ್ಜರಿ ಸ್ಟೆಪ್ಸ್ ಹಾಕಿ ಅಭಿಮಾನಿಗಳನ್ನು ರಂಜಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಭರಾಟೆ ಚಿತ್ರ 25 ದಿನ ಪೂರೈಸಿದ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡಿ ಪ್ರಚಾರ ನಡೆಸಿದ ಶ್ರೀಮುರುಳಿಗೆ ಅಭಿಮಾನಿಗಳು ಡೊಳ್ಳು ಕುಣಿತ, ಪಟಾಕಿ ಸಿಡಿಸುವ ಮೂಲಕ ಸ್ವಾಗತಿಸಿದರು. ಕಾರಿನ ಮೇಲೆ ನಿಂತು ತಮಟೆ ಮತ್ತು ಡೊಳ್ಳು ಕುಣಿತದ ವಾದ್ಯಕ್ಕೆ ಶ್ರೀಮುರುಳಿ ಸ್ಟೆಪ್ಸ್ ಹಾಕಿದರು. ಈ ದೃಶ್ಯ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತು. ನಂತರ ಅಭಿಮಾನಿಗಳ ಮೊಬೈಲ್ ಪಡೆದು ಸೆಲ್ಪಿ ಕ್ಲಿಕ್ಕಿಕೊಂಡರು.
ಹೀರೋ ಬರುವ ಮೊದಲೇ ಪಟಾಕಿ
ಪಟಾಕಿ ಹೊಡೆದು ನಟ ಶ್ರೀಮುರುಳಿ ಅವರನ್ನು ಸ್ವಾಗತಿಸಲು ಯೋಜಿಸಲಾಗಿತ್ತು. ಚಿತ್ರಮಂದಿರದ ಮುಂದೆ ರಸ್ತೆಯಲ್ಲಿ ಪಟಾಕಿ ಇರಿಸಲಾಗಿತ್ತು. ಆದರೆ ದೊಡ್ಡ ಗುಂಪಿನ ನಡುವೆ ದಿಢೀರ್ ಪಟಾಕಿ ಹೊತ್ತಿಕೊಂಡು, ಸಿಡಿಯಲು ಆರಂಭಿಸಿತು. ಕೂಡಲೇ ಆಯೋಜಕರು ಓಡಿ ಬಂದು ಪಟಾಕಿ ಆರಿಸಿದರು. ಶ್ರೀಮುರುಳಿ ಅವರು ಬಂದಾಗ ಪುನಃ ಹಚ್ಚಲಾಯಿತು. ಗುಂಪಿನ ನಡುವೆ ಪಟಾಕಿ ಹಚ್ಚಿದ್ಯಾರು ಅನ್ನವುದು ಯಾರಿಗು ಗೊತ್ತಾಗಲಿಲ್ಲ..!
ಶಿವಮೊಗ್ಗ ಜತೆ ಅವಿನಾಭಾವ ಸಂಬಂಧ
ಶಿವಮೊಗ್ಗಕ್ಕೂ ನನಗೂ ಅವಿನಾಭಾವ ಸಂಬಂಧವಿದ್ದು, ಬಾಲ್ಯದ ಜೀವನವನ್ನು ಬಹಳಷ್ಟು ಕಾಲ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲೇ ಕಳೆದಿದ್ದೇನೆ ಎಂದು ನಟ ಶ್ರೀಮುರುಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕ ಹುಡುಗನಿದ್ದಾಗಿನಿಂದ ಶಿವಮೊಗ್ಗ ನನ್ನ ನೆಚ್ಚಿನ ತಾಣ. ಅತ್ತೆ ಮನೆಯೂ ಶಿವಮೊಗ್ಗದಲ್ಲೇ ಇದೆ. ಹಾಗಾಗಿ ಹಲವಾರು ಬಾರಿ ಬಂದಿದ್ದೇನೆ.
ಚಿತ್ರಮಂದಿರದ ಪಾಲುದಾರರಾದ ಪಂಚಾಕ್ಷರಿ,ಶಿವಪ್ರಕಾಶ್, ಷಣ್ಮುಖಪ್ಪ, ಮದಗಜ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಮತ್ತಿತರರಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]